ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಕಾಮರ್ಸ್ ಕ್ಷೇತ್ರಕ್ಕೆ ಕಾಲಿಡಲಿರುವ ಅಂಚೆ ಇಲಾಖೆ

|
Google Oneindia Kannada News

ನವದೆಹಲಿ. ನ. 25: ಇ ಕಾಮರ್ಸ್ ಕ್ಷೇತ್ರಕ್ಕೆ ಅಂಚೆ ಇಲಾಖೆ ಕಾಲಿಡುತ್ತಿದೆ. ಖಾಸಗಿ ಕಂಪನಿಗಳು ಇ ಕಾಮರ್ಸ್ ನಿಂದ ಅಪಾರ ಲಾಭ ಗಳಿಸುತ್ತಿರುವುದನ್ನು ಮನಗಂಡಿರುವ ಅಂಚೆ ಇಲಾಖೆ ಆಧುನಿಕತೆಗೆ ಒಗ್ಗಿಕೊಳ್ಳಲು ಇಂಥ ಕ್ರಮಕ್ಕೆ ಮುಂದಾಗಿದೆ.

ದೇಶದ ಮೂಲೆ ಮೂಲೆ ಯಲ್ಲಿರುವ ಅಂಚೆ ಕಚೇರಿಗಳ ಮೂಲಕ ಗ್ರಾಹಕರಿಗೆ ಸುಲಭವಾಗಿ ವಸ್ತುಗಳನ್ನು ತಲುಪಿಸಲು ಸಿದ್ಧತೆ ಮಾಡಲಾಗಿದೆ. ಅಗತ್ಯವಿರುವ ಡಾಟಾ ಸೆಂಟರ್ ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಪೋಸ್ಟ್ ಮ್ಯಾನ್ ಗಳಿಗೆ ತರಬೇತಿ ನೀಡಲು ಚಿಂತಿಸಲಾಗಿದೆ. ತಂತ್ರಜ್ಞಾನ ಬಳಕೆ, ಹ್ಯಾಂಡ್ ಹೋಲ್ಡ್ ಡಿವೈಸ್ ಮತ್ತಿತರ ಅಂಶಗಳ ಕುರಿತು ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಇಲಾಖೆ ವರದಿ ತಿಳಿಸಿದೆ. [ಪ್ರಧಾನಿ ನಮೋ ಅಂಚೆ ಚೀಟಿ ಬಿಡುಗಡೆ]

indian post

ಭಾರತದ ಅಂಚೆ ಇಲಾಖೆ ದೇಶಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿದೆ. ವಿಶ್ವದ ಅತಿ ದೊಡ್ಡ ಅಂಚೆ ಸೇವೆ ಎಂಬ ಹೆಗ್ಗಳಿಕೆ ಪಡೆದಿರುವ ಸಂಸ್ಥೆಯ ಒಂದೊಂದು ಕಚೇರಿಗಳು 7,175 ಜನರಿಗೆ ಸೇವೆ ಒದಗಿಸುತ್ತಿವೆ.

ಈಗಾಗಲೇ ಮುಂಬೈನಲ್ಲಿ ಪ್ರಾಥಮಿಕ ಹಂತದ ಡಾಟಾ ಕೇಂದ್ರ ತೆರೆಯಲಾಗಿದ್ದು ಡಿಸೆಂಬರ್ ವೇಳೆಗೆ ಮೈಸೂರಿನಲ್ಲೂ ಆರಂಭ ಮಾಡಲಾಗುವುದು. ಖಾಸಗಿ ಆನ್ ಲೈನ್ ಸಂಸ್ಥೆಗಳು ನೀಡುವ ಎಲ್ಲ ಸವಲತ್ತುಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.[ಭಾರತದ ಇ ಕಾಮರ್ಸ್ ಕ್ಷೇತ್ರಕ್ಕೆ ಬೃಹತ್ ಬಂಡವಾಳ]

ಭಾರತೀಯ ಅಂಚೆ, ಬಡವ, ಮಧ್ಯಮವರ್ಗ, ನಗರ ಭಾಗದ ಮಧ್ಯಮ ವರ್ಗ ಸ್ನೇಹಿಯಾಗಿ ನಡೆದುಕೊಂಡು ಬಂದಿದೆ. ಇ ಕಾಮರ್ಸ್ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

English summary
India Post is re-inventing itself to cater to the burgeoning eCommerce services industry in the country by setting up data centers, arming the postman with hand-held devices and implementing softwares for facilities like cash on delivery (CoD). The project is being supervised by an Inter Ministerial Steering Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X