ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ನಮ್ಮ ರಾಜಕಾರಣಿಗಳಲ್ಲಿ ಪ್ರಚಂಡ ವಾಗ್ಮಿ ಯಾರು?

|
Google Oneindia Kannada News

ತಮ್ಮ ವಾಕ್ಚಾತುರ್ಯದ ಮೂಲಕ ಜನರನ್ನು ಸೆಳೆಯುವುದು ಎಲ್ಲರಿಗೂ ಒಲಿದು ಬರುವ ವಿದ್ಯೆಯಲ್ಲ. ವಾಕ್ಪಟುತ್ವ ಹುಟ್ಟಿನಿಂದ ಬರುವ ಕಲೆ ಎನ್ನುವುದು ಸಾಮಾನ್ಯವಾಗಿ ಎಲ್ಲರಲ್ಲಿರುವ ಅಭಿಪ್ರಾಯ. ಆದರೆ ಅದನ್ನು ಪರಿಣಾಮಕಾರಿಯಾಗಿರಿಸಲು ಪರಿಶ್ರಮ, ಅಭ್ಯಾಸ, ಜ್ಞಾನ ಅಗತ್ಯ.

ಸನ್ನಿವೇಶಕ್ಕೆ ತಕ್ಕಂತೆ ತಮ್ಮ ಭಾಷಣಗಳನ್ನು ಪರಿಣಾಮಕಾರಿಯಾಗಿ ಆಗುವಂತೆ ಮಾಡುವುದು ಒಂದು ಕಲೆ. ಇತ್ತೀಚಿನ ದಿನಗಳಲ್ಲಿ ಭಾಷಣ ಎನ್ನುವುದು ರಾಜಕೀಯ ಪುಢಾರಿಗಳಿಗೆ ಒಂದು ಅಸ್ತ್ರವಾಗಿ ಪರಿಣಮಿಸಿದೆ. ಸಮಯಪ್ರಜ್ಞೆ, ವಿಚಾರದ ಆಳ ಅರಿಯದೇ ಮೈಕು ಸಿಕ್ಕಿತು ಎಂದು ಭಾಷಣ ಕೊರೆಯುವ ರಾಜಕಾರಣಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಇದಕ್ಕೆ ಹೊರತಾಗಿ ಹಲವಾರು ನಮ್ಮ ರಾಜಕಾರಣಿಗಳ ಭಾಷಣ ಕೇಳಲೇಂದೇ ಜನ ಮುಗಿಬೀಳುತ್ತಾರೆ. (ರಾಜಕಾರಣಿಗಳ ಲಜ್ಜೆಗೆಟ್ಟ ಹೇಳಿಕೆಗಳು)

ಹನ್ನೊಂದು ದಿನದ ಅಧಿಕಾರದ ನಂತರ ಪ್ರಧಾನಿ ಹುದ್ದೆ ತ್ಯಜಿಸುವಾಗ ವಾಜಪೇಯಿ ಸಂಸತ್ತಿನಲ್ಲಿ ಮಾಡಿದ ಭಾಷಣ, ಪ್ರಧಾನಿ ಹುದ್ದೆ ಬೇಡವೆಂದು ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಸೋನಿಯಾ ಗಾಂಧಿ ಮಾಡಿದ ಭಾಷಣವನ್ನು ಯಾರೂ ಮರೆಯಲಾರರು.

ಇಂದಿರಾ ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿಯವರೆಗೆ, ವಾಜಪೇಯಿಯಿಂದ ಹಿಡಿದು ವರುಣ್ ಗಾಂಧಿಯವರೆಗೆ, ಹಾಗೂ ಇತರ ರಾಜಕೀಯ ಪಕ್ಷಗಳಲ್ಲಿ ಪ್ರಮುಖವಾಗಿ ನಾವು ಕಂಡ ಪ್ರಚಂಡ ವಾಗ್ಮಿಗಳು ಯಾರು? ಇದರಲ್ಲಿ ನಿಮ್ಮ ಆಯ್ಕೆಯಾವುದು?

ಇಂದಿರಾ ಗಾಂಧಿ

ಇಂದಿರಾ ಗಾಂಧಿ

ರಾಜಕೀಯ ಪ್ರಭಾವವಿದ್ದ ನೆಹರೂ ಕುಟುಂಬದ ಇಂದಿರಾ ಗಾಂಧಿ ಹದಿನೈದು ವರ್ಷಗಳ ಕಾಲ ಪ್ರಧಾನಿಯಾಗಿದ್ದವರು. ದೇಶೀಯ, ವಿದೇಶಿ ನೀತಿ, ತುರ್ತು ಪರಿಸ್ಥಿತಿ, ಪಾಕಿಸ್ಥಾನದೊಂದಿಗೆ ಯುದ್ದ ಹೀಗೆ ಹಲವಾರು ರಾಜಕೀಯ ಕಷ್ಟದ ಮೆಟ್ಟಲೇರಿ ಬಂದ ಇಂದಿರಾ ಗಾಂಧಿ ಭಾಷಣ ಮಾಡುವುದರಲ್ಲಿ ಎತ್ತಿದ ಕೈ.

ಅಟಲ್ ಬಿಹಾರಿ ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ

ಮಹಾನ್ ವಾಗ್ಮಿ ಎಂದೇ ಹೆಸರಾಗಿರುವ ಮಾಜಿ ಪ್ರಧಾನಿ ವಾಜಪೇಯಿ ಭಾಷಣಕ್ಕೆ ಸಾರ್ವಜನಿಕರು ಮಾತ್ರವಲ್ಲದೇ ಜನಪ್ರಿತಿನಿಧಿಗಳೂ ಕಾತುರದಿಂದ ಕಾಯುತ್ತಿದ್ದರು. ಅಟಲ್ ಭಾಷಣವೆಂದರೆ ಸಂಸತ್ತಿನಲ್ಲಿ ಹಾಜರಾತಿ ನೂರಕ್ಕೆ ನೂರು. ಸಂಖ್ಯಾ ಬಲದ ಕೊರೆತೆಯಿಂದ ಹನ್ನೊಂದು ದಿನದ ತನ್ನ ಸರಕಾರದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಅಟಲ್ ಮಾಡಿದ ಭಾಷಣ ಜನ ಇಂದಿಗೂ ಮರೆಯಲಾರರು.

ರಾಜೀವ್ ಗಾಂಧಿ

ರಾಜೀವ್ ಗಾಂಧಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮ್ಮ ಭಾಷಣದಿಂದಲೇ ಜನರನ್ನು ಆಕರ್ಷಿಸಿದವರು. ಉತ್ತಮ ವಾಗ್ಮಿಯಾಗಿದ್ದ ರಾಜೀವ್ ಭಾಗವಹಿಸುವ ಸಾರ್ವಜನಿಕ ಸಭೆಯಲ್ಲಿ ಸಾವಿರಾರು ಜನ ಸೇರುತ್ತಿದ್ದರು.

ಎಲ್ ಕೆ ಅಡ್ವಾಣಿ

ಎಲ್ ಕೆ ಅಡ್ವಾಣಿ

ಬಿಜೆಪಿಯ ಹಿರಿಯ ನಾಯಕ ಮತ್ತು ದೇಶ ಕಂಡ ಮತ್ತೋರ್ವ ಅತ್ಯುತ್ತಮ ಭಾಷಣಕಾರ. ರಥಯಾತ್ರೆಯ ಸಂದರ್ಭದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾಗಿದ್ದಾಗ ಇವರ ಕೆಲವೊಂದು ಭಾಷಣ ಜನಮನ್ನಣೆ ಗಳಿಸಿತ್ತು.

ಎಚ್ ಡಿ ದೇವೇಗೌಡ

ಎಚ್ ಡಿ ದೇವೇಗೌಡ

ಜೆಡಿಎಸ್ ವರಿಷ್ಠ ದೇವೇಗೌಡ್ರು ಕೂಡಾ ಅತ್ಯುತ್ತಮ ಭಾಷಣಕಾರರು. ಮುಖ್ಯವಾಗಿ ರೈತಾಪಿ ವರ್ಗದ ಜನತೆಯನ್ನು ಗೌಡ್ರು ತನ್ನ ಭಾಷಣದ ಮೂಲಕ ಆಕರ್ಷಿಸುತ್ತಿದ್ದರು.

ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್

ಬಿಜೆಪಿಯ ಹಿರಿಯ ನಾಯಕಿ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿಯಾಗಿರುವ ಸುಷ್ಮಾ ಸ್ವರಾಜ್ ಕೂಡಾ ಉತ್ತಮ ವಾಗ್ಮಿ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ತನ್ನ ಪತಿಯ ನಿಧನದ ನಂತರ ಸಕ್ರಿಯ ರಾಜಕಾರಣಕ್ಕೆ ಇಳಿದವರು. ಮೊದ ಮೊದಲು ಅನುಭವದ ಕೊರತೆ ಕಾಡುತ್ತಿದ್ದರೂ ನಂತರದ ದಿನಗಳಲ್ಲಿ ಭಾಷಣದ ಮೇಲೆ ಹಿಡಿತ ಸಾಧಿಸಿದರು.

ನರೇಂದ್ರ ಮೋದಿ

ನರೇಂದ್ರ ಮೋದಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಬ್ಬ ಅತ್ಯುತ್ತಮ ಭಾಷಣಕಾರ ಎಂದು ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಮೋದಿ ಭಾಷಣವೆಂದರೆ ಲಕ್ಷಾಂತರ ಜನ ಸೇರುವ ಉದಾಹರಣೆಗಳು ಸಾಕಷ್ಟಿವೆ. ವಿರೋಧ ಪಕ್ಷದವರನ್ನು ತನ್ನದೇ ಶೈಲಿಯಲ್ಲಿ ಚಾಟಿ ಬೀಸುವ ಮೋದಿ ಭಾಷಣ ಭಾರೀ ಜನಪ್ರಿಯ.

ವೈ ಎಸ್ ರಾಜಶೇಖರ್ ರೆಡ್ಡಿ

ವೈ ಎಸ್ ರಾಜಶೇಖರ್ ರೆಡ್ಡಿ

ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರ್ ರೆಡ್ಡಿ ಕೂಡಾ ಈ ಸಾಲಿಗೆ ಸೇರಿದವರು.

ಉಮಾಭಾರತಿ

ಉಮಾಭಾರತಿ

ಬಿಜೆಪಿ ಬಿಟ್ಟು, ಬೇರೆ ಪಕ್ಷ ಕಟ್ಟಿ, ನಂತರ ಮತ್ತೆ ಬಿಜೆಪಿ ಸೇರಿದ ಉಮಾಭಾರತಿ ಪಕ್ಷದ ಫೈರ್ ಬ್ರ್ಯಾಂಡ್ ಎಂದೇ ಪ್ರಸಿದ್ದ. ತನ್ನ ಹರಿತವಾದ ಮಾತಿನಿಂದ ಉಮಾ ಪ್ರಸಿದ್ದಿಯಾಗಿದ್ದಾರೆ.

ಬಿ ಎಸ್ ಯಡಿಯೂರಪ್ಪ

ಬಿ ಎಸ್ ಯಡಿಯೂರಪ್ಪ

ಮಾಜಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ರಾಜ್ಯ ಕಂಡ ಉತ್ತಮ ವಾಗ್ಮಿ. ಹೋರಾಡುತ್ತಲೇ ರಾಜಕೀಯ ಮೆಟ್ಟಲೇರಿ ಬಂದ ಬಿಎಸ್ವೈ ಉತ್ತಮ ಭಾಷಣಕಾರ ಕೂಡಾ.

ಲಾಲೂ ಪ್ರಸಾದ್ ಯಾದವ್

ಲಾಲೂ ಪ್ರಸಾದ್ ಯಾದವ್

ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಕೂಡಾ ಉತ್ತಮ ಭಾಷಣಕಾರ. ತನ್ನ ವ್ಯಂಗ್ಯ ಮಿಶ್ರಿತ ಭಾಷಣದಿಂದ ಹೆಸರು ಪಡೆದವರು.

ಜೆ ಜಯಲಲಿತಾ

ಜೆ ಜಯಲಲಿತಾ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡಾ ತನ್ನ ಭಾಷಣದ ಮೂಲಕ ಜನರನ್ನು ಆಕರ್ಷಿಸಿದವರು.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತನ್ನ ತೀಕ್ಷ್ನ ಭಾಷಣಕ್ಕೆ ಹೆಸರುವಾಸಿ.

ಸಿದ್ದರಾಮಯ್ಯ

ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅತ್ಯುತ್ತಮ ವಾಗ್ಮಿ. ವಿರೋಧ ಪಕ್ಷದ ನಾಯಕರಾಗಿದ್ದ ಸಮಯದಲ್ಲಿ ತನ್ನ ಹರಿತವಾದ ಭಾಷಣದ ಮೂಲಕ ಹೆಸರುವಾಸಿಯಾದವರು.

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತನ್ನ ಸ್ಪಷ್ಟ ಭಾಷಣದಿಂದ ಹೆಸರುವಾಸಿಯಾದವರು.

ವರುಣ್ ಗಾಂಧಿ

ವರುಣ್ ಗಾಂಧಿ

ಬಿಜೆಪಿಯ ಯುವ ಮುಖಂಡ ಮತ್ತು ಪಕ್ಷದ ಮತ್ತೋರ್ವ ಫೈರ್ ಬ್ರ್ಯಾಂಡ್ ವರುಣ್ ಗಾಂಧಿ. ತನ್ನ ತೀಕ್ಷ್ನ ಭಾಷಣದಿಂದ ಪಕ್ಷಕ್ಕೆ ಹಲವು ಬಾರಿ ಮುಜುಗರ ತಂದಿದ್ದೂ ಉಂಟು.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಳೆದ ಕೆಲವು ವರ್ಷಗಳಿಂದ ಹಲವಾರು ಸಮಾರಂಭ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

English summary
Who is and was better and powerful orator among present and past Indian politicians? We have seen excellent orators like Atal Bihari Vajyapee, Indira Gandhi, Narendra Modi, Rajiv Gandhi, LK Advani etc to name few. But, who is your choice?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X