ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಟಿಲೇಟರ್‌ನಲ್ಲಿರುವ ಕೊರೊನಾ ಸೋಂಕಿತರೊಬ್ಬರಿಗೆ ಗೋಮೂತ್ರ ಕುಡಿಸಿದ ರಾಜಕಾರಣಿ

|
Google Oneindia Kannada News

ನವದೆಹಲಿ, ಮೇ 1: ವೆಂಟಿಲೇಟರ್‌ನಲ್ಲಿರುವ ಮಹಿಳಾ ಕೊರೊನಾ ಸೋಂಕಿತರೊಬ್ಬರಿಗೆ ರಾಜಕಾರಣಿಯೊಬ್ಬರು ಒತ್ತಾಯಪೂರ್ವಕವಾಗಿ ಗೋಮೂತ್ರ ಕುಡಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು, ಆವರಿಗೆ ರಾಜಕಾರಣಿಯೊಬ್ಬರು ಗೋಮೂತ್ರ ಕುಡಿಸಿದ್ದರು. ಈ ಶಾಕಿಂಗ್ ವಿಡಿಯೋವನ್ನು ಸೂರತ್ ಬಿಜೆಪಿಯ ಜನರಲ್ ಸೆಕ್ರೆಟರಿ ಕಿಶೋರ್ ಬಿಂದಾಲ್ ಅವರು ಪೋಸ್ಟ್‌ ಮಾಡಿದ್ದರು.

ಕೊರೊನಾಗೆ ಗೋಮೂತ್ರದಿಂದ ಔಷಧ ತಯಾರಿಸಿದ ಬೆಂಗಳೂರಿನ ವೈದ್ಯ ಬಳಗ ಕೊರೊನಾಗೆ ಗೋಮೂತ್ರದಿಂದ ಔಷಧ ತಯಾರಿಸಿದ ಬೆಂಗಳೂರಿನ ವೈದ್ಯ ಬಳಗ

80 ಸಾವಿರ ಮಂದಿ ಈ ವಿಡಿಯೋ ವೀಕ್ಷಿಸಿದ್ದರು, ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು.

Indian Politician Feeds Cow Urine To COVID Patient On Ventilator

ಮಾರಕ ಕೊರೋನಾ ವೈರಸ್ ಗುಣಪಡಿಸಲು ಇಡೀ ಜಗತ್ತೇ ಪ್ರಯತ್ನಿಸುತ್ತಿದ್ದರೆ ಅಸ್ಸಾಂನ ಬಿಜೆಪಿ ಶಾಸಕಿಯೊಬ್ಬರು ಗೋಮೂತ್ರ ಮತ್ತು ಹಸುವಿನ ಸಗಣಿಯಿಂದ ಪರಿಹರಿಸಬಹುದು ಎಂದು ಹೇಳಿ ಸುದ್ದಿಯಾಗಿದ್ದರು.

ಅಸ್ಸಾಂ ವಿಧಾನಸಭೆಯಲ್ಲಿ ನಿನ್ನೆ ಬಾಂಗ್ಲಾದೇಶಕ್ಕೆ ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಈ ಸಲಹೆ ಕೊಟ್ಟು ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದರು.

''ನಮಗೆಲ್ಲಾ ಗೊತ್ತು, ಸೆಗಣಿ ಅತ್ಯಂತ ಉಪಕಾರಿ. ಅದೇ ರೀತಿ ಗೋಮೂತ್ರವನ್ನು ಸಿಂಪಡಿಸಿದರೆ ಅದು ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸುತ್ತದೆ. ಇಷ್ಟು ಮಹತ್ವದ ಸೆಗಣಿ ಮತ್ತು ಗೋಮೂತ್ರವನ್ನು ಕೊರೊನಾ ವೈರಸ್ ಸೋಂಕನ್ನು ಗುಣಪಡಿಸಲು ಬಳಸಬಹುದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದರು.

ಗೋವು ನಮಗೆ ಒಂದು ಸ್ವತ್ತಾಗಿದ್ದು ಇದರಿಂದ ಕ್ಯಾನ್ಸರ್ ನಂತಹ ಮಾರಕ ರೋಗವನ್ನು ಕೂಡ ಗುಣಪಡಿಸಬಹುದು. ಗುಜರಾತ್ ನ ಆಯುರ್ವೇದ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ ರೋಗಿಗಳನ್ನು ಗೋವುಗಳ ಜೊತೆ ಇರಲು ಬಿಡುತ್ತಾರೆ. ಸೆಗಣಿಯನ್ನು ಕ್ಯಾನ್ಸರ್ ರೋಗಿಗಳ ದೇಹಕ್ಕೆ ಹಚ್ಚುತ್ತಾರೆ. ಗೋಮೂತ್ರದಿಂದ ತಯಾರಿಸಿದ ಪಂಚಾಮೃತವನ್ನು ಅವರಿಗೆ ಕುಡಿಯಲು ಕೊಡುತ್ತಾರೆ ಎಂದಿದ್ದರು.

English summary
viewers online were horrified to see viral footage of a man allegedly pouring cow urine into the mouth of a woman with a ventilator suffering from COVID-19, foreign media reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X