ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IQ ಟೆಸ್ಟ್ ನಲ್ಲಿ ಐನ್ ಸ್ಟೈನ್‍ ರನ್ನು ಮೀರಿಸಿದ ಭಾರತೀಯ ಮೂಲದ ಬಾಲಕಿ

|
Google Oneindia Kannada News

ನವದೆಹಲಿ, ಮೇ 07 : ಭಾರತೀಯ ಮೂಲದ 12 ವರ್ಷದ ಬಾಲಕಿಯೊಬ್ಬಳು 'ಬ್ರಿಟಿಷ್ ಮೆನ್ಸಾ ಐಕ್ಯೂ' (IQ) ಪರೀಕ್ಷೆಯಲ್ಲಿ 162 ಪಾಯಿಂಟ್ ಗಳಿಸುವ ಮೂಲಕ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್‍ ಹಾಗೂ ಸ್ಟೀಫನ್ ಹಾಕಿಂಗ್ ರನ್ನು ಮೀರಿಸಿದ್ದಾಳೆ.

ಅಂಡರ್ 18ನಲ್ಲಿ ತಿಂಗಳು ಮ್ಯಾಂಚೆಸ್ಟರ್‍ ನಲ್ಲಿ ನಡೆದ ಬ್ರಿಟಿಷ್ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಇಂಗ್ಲೆಂಡ್‍ ನ ಚೆಶೈರ್ ನಿವಾಸಿಯಾಗಿರೋ ಭಾರತೀಯ ಮೂಲದ ರಾಜಗೌರಿ ಪವಾರ್ ಬರೋಬ್ಬರಿ 162 ಅಂಕ ಪಡೆದು ಗಮನ ಸೆಳೆದಿದ್ದಾಳೆ.[ನೂರು ವರ್ಷದಲ್ಲಿ ಮತ್ತೊಂದು 'ಭೂಮಿ' ಹುಡುಕಿ, ಜೀವ ಉಳಿಸಿಕೊಳ್ಳಿ: ಹಾಕಿಂಗ್]

Indian-origin girl scores 162 beats Einstein, Stephen Hawking in Mensa IQ test

ಈ ಪರೀಕ್ಷೆಯಲ್ಲಿ 140 ಅಂಕ ಪಡೆದರೆ ಅವರನ್ನ ಜೀನಿಯಸ್(ಅತ್ಯಂತ ಬುದ್ಧಿಶಾಲಿಗಳು) ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ರಾಜಗೌರಿ ಬರೋಬ್ಬರಿ 162 ಅಂಕ ಪಡೆದು ವಿಶ್ವ ಕಂಡ ಮಹಾನ್ ವಿಜ್ಞಾನಿಗಳಾದ ಆಲ್ಬರ್ಟ್ ಐನ್ ಸ್ಟೈನ್ ಹಾಗೂ ಸ್ಟೀಫನ್ ಹಾಕಿಂಗ್ ಗಿಂತಲೂ ಎರಡು ಪಾಯಿಂಟ್ಸ್ ಹೆಚ್ಚು ಗಳಿಸಿ ಎಲ್ಲರ ಉಬ್ಬೆರುವಂತೆ ಮಾಡಿದ್ದಾಳೆ.

ಬ್ರಿಟಿಷ್ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಯಾರು ಬೇಕಾದರೂ ಭಾಗವಹಿಸಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಬಹುದು. ಐಕ್ಯೂ ಪರೀಕ್ಷೆ ಪ್ರಕ್ರಿಯೆಯ ಪ್ರಕಾರ ಒಬ್ಬರ ಬುದ್ಧಿವಂತಿಕೆಯನ್ನ ಅಳೆಯಲಾಗುತ್ತದೆ.

ಈ ಸಾಧನೆ ಮಾಡಿರುವ ರಾಜಗೌರಿಯನ್ನು ಇದೀಗ ಹೈ-ಐಕ್ಯೂ ಸೊಸೈಟಿಯ ಸದಸ್ಯೆಯಾಗಲು ಆಹ್ವಾನಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ರಾಜಗೌರಿ, "ನನಗಾಗ್ತಿರೋ ಸಂತೋಷವನ್ನು ಪದಗಳಲ್ಲಿ ಹೇಳೋಕೆ ಆಗುತ್ತಿಲ್ಲ. ವಿದೇಶಿ ನೆಲದಲ್ಲಿ ಭಾರತವನ್ನ ಪ್ರತಿನಿಧಿಸಿ ಇಂತಹ ಸಾಧನೆ ಮಾಡಿರುವುದು ನನಗೆ ಹೆಮ್ಮೆ ಎನಿಸುತ್ತಿದೆ" ಎಂದಿದ್ದಾಳೆ.

English summary
12-year-old Indian-origin girl in England Rajgauri Pawar has managed to beat Albert Einstein and Stephen Hawking in the British Mensa IQ test, despite being just 12 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X