ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿಯಲ್ಲಿ ಕೇರಳದ ನರ್ಸ್‌ಗೆ ಭಯಾನಕ 'ಕೊರೊನಾ' ಸೋಂಕು

|
Google Oneindia Kannada News

ನವದೆಹಲಿ, ಜನವರಿ 24:ಚೀನಾದಲ್ಲಿ ಆತಂಕ ಮೂಡಿಸಿರುವ ಭಯಾನಕ ಕೊರೋನಾ ವೈರಸ್ ಭಾರತದವರೊಬ್ಬರಿಗೆ ತಗುಲಿದೆ.

ಸೌದಿ ಅರೇಬಿಯಾದ ಖಾಮಿಸ್ ಮುಶೈತ್‌ನಲ್ಲಿರುವ ಅಲ್ ಹಯಾತ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಈ ನರ್ಸ್ ಕಳೆದ ಕೆಲ ದಿನಗಳಿಂದ ಭಯನಾಕ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸೌದಿ ಅರೇಬಿಯಾದಲ್ಲೇ ರಾಯಭಾರಿ ಕಚೇರಿಯ ಮೇಲುಸ್ತುವಾರಿಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ನರ್ಸ್ ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

virus

ಇದೇ ಆಸ್ಪತ್ರೆಯಲ್ಲಿ ಭಾರತದ ನೂರಕ್ಕೂ ಅಧಿಕ ನರ್ಸ್‌ಗಳು ಕೆಲಸ ಮಾಡುತ್ತಿದ್ದು, ಉಳಿದೆಲ್ಲರೂ ಆರೋಗ್ಯವಾಗಿದ್ದಾರೆಂದು ಕೇಂದ್ರ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ವಿ ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ.

ಅದಲ್ಲದೆ ಈ ಬಗ್ಗೆ ತೀವ್ರ ಕಟ್ಟೆಚ್ಚರಕ್ಕೆ ಸೂಚಿಸಿದ್ದಾರೆ. ಆದರೆ ಸಮಾಧಾನಕರ ಸಂಗತಿ ಎಂದರೆ ನರ್ಸ್ ಗೆ ತಗುಲಿರುವ ಸೋಂಕು ಚೀನಾದಲ್ಲಿ 18 ಜನರನ್ನು ಬಲಿಪಡೆದ ಸೋಂಕಿಗಿಂತ ಸ್ವಲ್ಪ ಭಿನ್ನವಾಗಿದೆ.

ಎಂಇಆರ್‌ಎಸ್-ಸಿಓವಿ ಸೋಂಕು ನರ್ಸ್‌ಗೆ ತಗುಲಿದ್ದರೆ ಚೀನಾದಲ್ಲಿ ಭಯ ಹುಟ್ಟಿಸಿರುವುದು 2019-ಎನ್‌ಸಿಓವಿ(ಓಹಾನ್) ವೈರಸ್ ಆಗಿದೆ.

ಭಾರತೀಯ ನರ್ಸ್‌ಗೆ ತಗುಲಿರುವ ಸೋಂಕು ಕೊರೋನೊ ವೈರಸ್ ಆಗಿದೆ ಇದುಅಷ್ಟೊಂದು ಮಾರಣಾಂತಿಕವಲ್ಲವೆಂದು ತಿಳಿದುಬಂದಿದೆ. ಏತನ್ಮಧ್ಯೆ ಚೀನಾದ ಓಹಾನ್‌ನಲ್ಲಿ 630 ಜನರಿಗೆ ಕೊರೊನಾ ವೈರಸ್ ತಗುಲಿದ್ದು 18 ಮಂದಿ ಮೃತಪಟ್ಟಿದ್ದಾರೆ.

ಹೀಗಾಗಿ ಅಲ್ಲಿಯ ಹ್ಯೂಂಗ್ಯಾಂಗ್ ಇಸೌ ಮತ್ತು ಊಹಾನ್ ನಗರದಲ್ಲಿ ಸಂಪೂರ್ಣ ಸಂಚಾರ ನಿಷೇಧ ಹೇರಲಾಗಿದೆ. ನಗರಕ್ಕೆ ವಿಮಾನ ಹಾಗೂ ರೈಲ್ವೆ ಸಂಪರ್ಕ ಕಡಿತಗೊಳಿಸಲಾಗಿದೆ.

ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಈ ರೋಗವು 2012ರಲ್ಲಿಯೇ ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡಿತ್ತು. ಆದರೆ ಆಗ ಇಷ್ಟೊಂದು ಮಾರಣಾಂತಿಕವಾಗಿರಲಿಲ್ಲ.

English summary
One of the Indian nurses working at Al-Hayat hospital in Khamis Mushait of Saudi Arabia has been infected by the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X