• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಪರೇಷನ್ ಸಮುದ್ರ ಸೇತು: ವಿದೇಶದಿಂದ ಆಕ್ಸಿಜನ್ ಹೊತ್ತುಬಂದ ಭಾರತೀಯ ನೌಕಾಪಡೆ

|

ನವದೆಹಲಿ,ಮೇ 10: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಆಸ್ಪತ್ರೆ, ವೆಂಟಿಲೇಟರ್, ಆಮ್ಲಜನಕ ಸಿಗದೆ ಜನರು ಪರದಾಡುತ್ತಿದ್ದಾರೆ.

ಹೀಗಿರುವಾಗ ಭಾರತೀಯ ನೌಕಾಪಡೆಯು ವಿದೇಶಗಳಿಂದ ಸಮುದ್ರದ ಮೂಲಕ 3150 ಆಕ್ಸಿಜನ್ ಸಿಲಿಂಡರ್‌ಗಳನ್ನು ಭಾರತಕ್ಕೆ ತಂದಿದೆ. ಅದರ ಜತೆಗೆ ಇನ್ನಿತರೆ ವೈದ್ಯಕೀಯ ಸಾಮಗ್ರಿಗಳನ್ನು ಕೂಡ ತಂದಿದೆ.

ಮೇ 11ರಂದು ಬೆಂಗಳೂರಿಗೆ ಬರಲಿದೆ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ಮೇ 11ರಂದು ಬೆಂಗಳೂರಿಗೆ ಬರಲಿದೆ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್

ಭಾರತೀಯ ನೌಕಾಪಡೆಯ ಹಡಗು ಐರಾವತ ಸಿಂಗಾಪುರದಿಂದ ಇನ್ನೇನು ವಿಶಾಖಪಟ್ಟಣಂ ತಲುಪಲಿದೆ. ಅದು 8 ಕ್ರಯೋಜನಿಕ್ ಆಕ್ಸಿಜನ್ ಟ್ಯಾಂಕ್ ಹೊಂದಿದೆ ಅದರಲ್ಲಿ 20 ಮೆಟ್ರಿಕ್ ಟನ್‌ನ್ನಷ್ಟು ಆಮ್ಲಜನಕ ಹಾಗೂ ಇನ್ನಿತರೆ ವೈದ್ಯಕೀಯ ಪರಿಕರಗಳಿವೆ.

ಹಾಗೆಯೇ ಐಎನ್‌ಎಸ್ ತ್ರಿಕಂಡ್ ಖತಾರ್‌ನಿಂದ 40 ಟನ್ ಆಮ್ಲಜನಕವನ್ನು ಹೊತ್ತು ಬರುತ್ತಿದ್ದು ಇನ್ನೇನು ಮುಂಬೈ ತಲುಪಲಿದೆ.

ಮತ್ತೊಂದು ಯುದ್ಧ ನೌಕೆ ಐಎನ್‌ಎಸ್ ಕೊಲ್ಕತ್ತಾ, 40 ಮೆಟ್ರಿಕ್ ಟನ್ ಆಮ್ಲಜನಕ, 400 ಆಕ್ಸಿಜನ್ ಸಿಲಿಂಡರ್ ಹಾಗೂ 47 ಆಕ್ಸಿಜನ್ ಕಾಂನ್ಸನ್‌ಟ್ರೇಟರ್ಸ್ ಪಡೆದುಕೊಂಡು ಖತಾರ್ ಹಾಗೂ ಕುವೈತ್‌ನಿಂದ ಮಂಗಳೂರು ಬಂದರಿಗೆ ಬರುತ್ತಿದೆ.

ವಂದೇ ಭಾರತ್ ಮಿಷನ್‌ನಲ್ಲಿ ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು ಎನ್ನುವ ಯೋಜನೆ ಜಾರಿ ಮಾಡಿದ್ದು, ಇದರಲ್ಲಿ ಮಾಲ್ಡೀವ್ಸ್, ಶ್ರೀಲಂಕಾ, ಇರಾನ್‌ನಲ್ಲಿ ಸಿಲುಕಿದ್ದ 4 ಸಾವಿರ ಭಾರತೀಯರನ್ನು ಕರೆತರಲಾಗಿದೆ.

ದೇಶದಲ್ಲಿ ಒಂದೇ ದಿನ 3,66,161 ಮಂದಿಗೆ ಕೊರೊನಾವೈರಸ್ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 3,53,818 ಸೋಂಕಿತರು ಗುಣಮುಖರಾಗಿದ್ದರೆ, 3,754 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಸೋಮವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 2,26,62,575 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 2,26,62,575 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 2,46,116 ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 37,45,237 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಈವರೆಗೂ 17,01,53,432 ಕೋಟಿ ಫಲಾನುಭವಿಗಳಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಈ ಪೈಕಿ 95,46,871 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 64,71,090 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,39,71,341 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 77,54,283 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

English summary
Three Indian Navy warships are bringing to India on Monday 80 tonnes of liquid oxygen, 20 cryogenic oxygen tanks, 3,150 cylinders and a large amount of other medical supplies from abroad as the country reels under a severe second wave of the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X