ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯನ್ ಮುಜಾಹಿದ್ದೀನ್ ಒಡೆದು ಭಾಗವಾಗಿದ್ದೇಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 28 : ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಒಡೆಯಲು ಸಿದ್ಧಾಂತ ಕಾರಣವಲ್ಲ ಹಣ ಕಾರಣ ಎಂಬುದು ಬಹಿರಂಗವಾಗಿದೆ. 2013ರಲ್ಲಿ ಮುಜಾಹಿದ್ದೀನ್ ಸಂಘಟನೆ ಒಡೆದು ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪನೆಯಾಗಿತ್ತು.

ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಸೌದಿ ಅರೇಬಿಯಾದಲ್ಲಿ ಬಂಧಿಸಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಜೈನುಲ್ ಅಬೆದಿನ್‌ ಸಂಘಟನೆ ಒಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಣದ ವಿಚಾರಕ್ಕೆ ಸಂಘಟನೆ ಒಡೆಯಿತು ಎಂದು ಹೇಳಿದ್ದಾನೆ. [ಉಗ್ರರು ಕರ್ನಾಟಕದಲ್ಲಿ ಸ್ಫೋಟಕ ದಾಸ್ತಾನು ಮಾಡುತ್ತಿದ್ದರು]

indian mujahideen

ದೇಶದಲ್ಲಿ ಹಲವು ಸ್ಫೋಟಗಳನ್ನು ನಡೆಸಿದ ಬಳಿಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಯಾಸಿನ್ ಭಟ್ಕಳ್ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಆದರೆ, ಸಂಘಟನೆಗೆ ಹಣ ನೀಡುತ್ತಿದ್ದವರು ಹೆಚ್ಚಿನ ಹಣ ನೀಡಲು ನಿರಾಕರಿಸಿದರು. ಇದರಿಂದಾಗಿ ಸಂಘಟನೆಯಲ್ಲಿ ಅಸಮಾಧಾನ ಉಂಟಾಯಿತು. [ಭಟ್ಕಳ ಮೂಲದ ಶಫಿ ಅರ್ಮರ್ ಹತ್ಯೆ?]

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಿಂದ ಹೊರಬಂದ ಸುಲ್ತಾನ್ ಅರ್ಮರ್ ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪಿಸಿದ. ಮುಂದೆ ಈ ಸಂಘಟನೆ ಐಎಸ್‌ಐಎಸ್ ಉಗ್ರ ಸಂಘಟನೆಗೆ ಭಾರತದಲ್ಲಿ ಯುವಕರನ್ನು ನೇಮಕ ಮಾಡಿಕೊಳ್ಳಲು ಆರಂಭಿಸಿತು. [ಭಟ್ಕಳ ಮೂಲದ ಶಫಿ ಭಾರತದಲ್ಲಿ ISIS ಮುಖ್ಯಸ್ಥ]

ಈಗ ಜೈಲಿನಲ್ಲಿರುವ ಯಾಸಿನ್ ಭಟ್ಕಳ್ ಬೇರೆ ಸಂಘಟನೆ ಸ್ಥಾಪನೆ ಮಾಡದಂತೆ ಸುಲ್ತಾನ್ ಅರ್ಮರ್ ಮನವೊಲಿಸಲು ಮುಂದಾದ. ಆದರೆ, ರಿಯಾಜ್ ಭಟ್ಕಳ ಮತ್ತು ಅರ್ಮರ್ ಸಂಘಟನೆಯಿಂದ ಹೊರಬಂದರು. ಇಲ್ಲಿ ಸಿದ್ಧಾಂತಗಳ ವಿಚಾರದಲ್ಲಿ ಮನಸ್ತಾಪವಿರಲಿಲ್ಲ. ಆದರೆ, ಹಣದ ವಿಚಾರದಲ್ಲಿ ಅಸಮಾಧಾನವಿತ್ತು.

ಹಣಕಾಸಿನ ವಿಚಾರದ ಕುರಿತು ಹೈದರಾಬಾದ್‌ನ ದಿಲ್‌ಸುಖ್‌ನಗರ ಸ್ಫೋಟದ ಬಳಿಕ ರಿಯಾಜ್ ಭಟ್ಕಳ್ ಬಳಿ ಮುಖಾಮುಖಿ ಮಾತುಕತೆ ನಡೆಸಲು ಯಾಸಿನ್ ಭಟ್ಕಳ್ ನಿರ್ಧರಿಸಿದ್ದ. ಆದರೆ, ನೇಪಾಳ ಗಡಿಯಲ್ಲಿ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದ.

ಯಾಸಿನ್ ಮತ್ತು ರಿಯಾಜ್ ಭಟ್ಕಳ್ ವರ್ತನೆಯಿಂದ ಅಸಮಾನಗೊಂಡ ಸುಲ್ತಾನ್ ಅರ್ಮರ್ ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪನೆ ಮಾಡಿದ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಘಟನೆ ಜೊತೆ ಕೈ ಜೋಡಿಸಲು ಮುಂದಾದ. ಅದರ ಭಾಗವಾಗಿಯೇ ಆತ ಐಎಸ್‌ಐಎಸ್ ಜೊತೆ ಕೈ ಜೋಡಿಸಿದ.

English summary
The Indian Mujahideen split over money and not ideology investigators have learnt. There was a huge split in the Indian Mujahideen back in 2013 and this was due to money and not ideology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X