• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ಅತಿರೇಕದ ಕ್ರಮಕ್ಕೆ ಸಿದ್ಧರಾಗಿ: ಬಿಪಿನ್ ರಾವತ್

|

ನವದೆಹಲಿ, ಮಾರ್ಚ್ 04: ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ಅತಿರೇಕದ ಕ್ರಮಕ್ಕೆ ಸಿದ್ಧರಾಗಿ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಭಾರತ ಸಂಕೀರ್ಣ ಭದ್ರತೆ ಮತ್ತು ಸವಾಲುಗಳ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದರು.

ರಾಷ್ಟ್ರೀಯ ಭದ್ರತೆ ಕಾರ್ಯತಂತ್ರ, ಉನ್ನತ ರಕ್ಷಣಾ ಕಾರ್ಯತಂತ್ರ ಮಾರ್ಗಸೂಚಿ, ರಚನಾತ್ಮಕ ಸುಧಾರಣೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ನಮ್ಮಲ್ಲಿ ಬಲಿಷ್ಠ ಸಶಸ್ತ್ರ ಪಡೆಗಳಿಲ್ಲದಿದ್ದರೆ ಎದುರಾಳಿಗಳಿಗೆ ಲಾಭ: ಬಿಪಿನ್

ಭಾರತೀಯ ಮಿಲಿಟರಿ ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಜಗತ್ತಿನ ಬೇರೆ ಮಿಲಿಟರಿಗಳು ಎದುರಿಸದ ಸವಾಲುಗಳನ್ನುಕಠಿಣತೆಯನ್ನು ಭಾರತ ಎದುರಿಸುತ್ತಿದೆ. ಆದ್ದರಿಂದ ಯುದ್ಧದ ಅಗತ್ಯಗಳನ್ನು ಪೂರೈಸಲು ಇತರ ದೇಶಗಳಲ್ಲಿ ಅಳವಡಿಸಿಕೊಂಡ ರೂಪಾಂತರ ಪರಿಕಲ್ಪನೆಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮಾಣು ಅತಿಕ್ರಮಣದ ಅಡಿಯಲ್ಲಿ ಸಾಂಪ್ರದಾಯಿಕ ಯುದ್ಧಗಳು ಅಥವಾ ಸೀಮಿತ ಘರ್ಷಣೆಗಳಿಗೆ ಸಾಂಸ್ಥಿಕ ರಚನೆ ಈಗಾಗಲೇ ಅಸ್ತಿತ್ವದಲ್ಲಿದೆ,

ಆದರೆ, ಇತರ ರೀತಿಯ ಕಾರ್ಯಾಚರಣೆಗಳಿಗೆ ಅಗತ್ಯವಾದ ಕ್ರಮಗಳನ್ನು ಹೊಂದಲು ಡಿಜಿಟೈಸ್ಡ್ ಬ್ಯಾಟಲ್‌ಸ್ಪೇಸ್‌ನಲ್ಲಿ ಜಂಟಿ ಯುದ್ಧಗಳನ್ನು ನಡೆಸಲು ಅವುಗಳನ್ನು ಮರು-ಮಾದರಿ, ಮರು-ಸಜ್ಜುಗೊಳಿಸಬೇಕು ಮತ್ತು ಮರು-ಆಧಾರಿತಗೊಳಿಸಬೇಕಾಗಿದೆ ಎಂದು ಹೇಳಿದರು.

ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಇರುವುದೊಂದೇ ದಾರಿ: ಬಿಪಿನ್ ರಾವತ್

ಯಾವುದೇ ಸಂದರ್ಭದಲ್ಲಿ ಪಾಕಿಸ್ತಾನ, ಚೀನಾದಿಂದ ಭಾರತಕ್ಕೆ ತೊಂದರೆಯಾಗಬಹುದು, ಸಿದ್ಧರಿರಿ ಎಂದು ಸೇನೆಗೆ ತಿಳಿಸಿದ್ದಾರೆ.

English summary
Chief of Defence Staff Gen Bipin Rawat today (March 04) said there is a need to study transformational concepts and to be prepared for threats for military primary arising from China and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X