• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ಟ್ವಿಟ್ಟಿಗರ ನಮನ

|

ನವದೆಹಲಿ, ಅಕ್ಟೋಬರ್ 31: "ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಸರ್ದಾರ್ ವಲ್ಲಭಭಾಯ್ ಪಟೇಲ್ ಎಂಬ ಉಕ್ಕಿನ ಮನುಷ್ಯ ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿಯಾಗಬೇಕಿತ್ತು! ಆದರೆ ಮಹಾತ್ಮಾ ಗಾಂಧೀಜಿಯವರಿಗೆ ಜವಾಹರಲಾಲ್ ನೆಹರೂ ಅವರ ಮೇಲಿದ್ದ ಮಮಕಾರ ಪ್ರಧಾನಿ ಹುದ್ದೆಯನ್ನು ಪಟೇಲ್ ರಿಂದ ತ್ಯಾಗ ಮಾಡಿಸಿತು!"

ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಪಟೇಲ್(ಅಕ್ಟೋಬರ್ 31, 1875-ಡಿಸೆಂಬರ್ 15 1950) ಅವರ ಬಗ್ಗೆ ಮಾತನಾಡುವಾಗೆಲ್ಲ ಹಲವರು ಹೇಳುವ ಮಾತು ಇದು! ಇತಿಹಾಸ ಕೆಣಕಿದರೆ ಈ ಮಾತು ಸತ್ಯವೂ ಹೌದು ಎಂಬುದು ಸಾಬೀತಾಗುತ್ತದೆ.

ಸರ್ದಾರ್ ಪಟೇಲ್ ಜನ್ಮದಿನ: 'ರನ್ ಫಾರ್ ಯೂನಿಟಿ'ಗೆ ಪ್ರಧಾನಿ ಚಾಲನೆ

ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿಹೋಗಿದ್ದ ಪ್ರಾಂತಗಳನ್ನು ಒಗ್ಗೂಡಿಸಿ, ಏಕೀಕರಣ ಪರಿಕಲ್ಪನೆಗೆ ನಾಂದಿ ಹಾಡಿದವರು ಪಟೇಲ್. ಇಂದು(ಅ.31) ಅವರ 142ನೇ ಜನ್ಮದಿನ. ಆಧುನಿಕ ಭಾರತಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಅವರ ಜನ್ಮದಿನವನ್ನು 'ರಾಷ್ಟ್ರೀಯ ಏಕತಾ ದಿನ'ವನ್ನಾಗಿ ಆಚರಿಸಲಾಗುತ್ತಿದೆ.

ಅಕ್ಟೋಬರ್ 31, 1875 ರಂದು ಗುಜರಾತಿನ ನಡಿಯಾದ್ ನಲ್ಲಿ ಜನಿಸಿದ ಪಟೇಲರ ತಂದೆ ಝವೇರಭಾಯ್ ಮತ್ತು ಲಾಡಬಾ. ವಕೀಲ ವೃತ್ತಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರೂ ಪಟೇಲರನ್ನು ಸೆಳೆದಿದ್ದು ಸ್ವಾತಂತ್ರ್ಯ ಹೋರಾಟ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದ ಪಟೇಲರು ಭಾರತಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರು. ಆಧುನಿಕ ಭಾರತದ ಸಂಸ್ಥಾಪಕರಲ್ಲೊಬ್ಬರಾದ ಸರ್ದಾರ್ ಪಟೇಲರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನೂರಾರು ಗಣ್ಯರು ಸ್ಮರಿಸಿಕೊಂಡಿದ್ದಾರೆ.

ಮಹಾನ್ ವ್ಯಕ್ತಿ ಪಟೇಲ್

ಭಾರತದ ಉಕ್ಕಿನ ಮನುಷ್ಯ, ಭಾರತವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಅವೀಸ್ಮರಣೀಯ ಕೊಡುಗೆ

ಸರ್ದಾರ್ ಪಟೇಲ್ ಅವರ ಜಯಂತಿಯಂದು ಅವರಿಗೆ ನಮ್ಮೆಲ್ಲರ ನಮನ. ನಿಸ್ವಾರ್ಥ ಸೇವೆ ಮತ್ತು ಕೊಡುಗೆಯನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ದೇಶ ಒಗ್ಗೂಡಿಸಿದ ಪಟೇಲರಿಗೆ ಧನ್ಯವಾದ

ಸೌಹಾರ್ದ- ಸಾಮರಸ್ಯದ ಮೂಲಕ ದೇಶವನ್ನು ಒಗ್ಗೂಡಿಸಲು ಶ್ರಮಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ನಾಡು ಸ್ಮರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಉಕ್ಕಿನ ಮನುಷ್ಯನಿಗೆ ನಮನ

ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಅವರ ಜನ್ಮದಿನದಂದು ನಮನಗಳು. ಎಂದು ಒಗ್ಗಟ್ಟಿನ ಓಟದ ಸಂದೇಶ ಹೊತ್ತ ಪಟೇಲರ ಮರಳು ಶಿಲ್ಪದೊಂದಿಗೆ ಟ್ವೀಟ್ ಮಾಡಿದ್ದಾರೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್.

ಏಕೀಕರಣಕ್ಕೆ ವ್ಯಾಖ್ಯೆ ನೀಡಿದವರು ಪಟೇಲ್

ಏಕೀಕರಣ ಮತ್ತು ಗೌರವಕ್ಕೆ ನಿಜವಾದ ವ್ಯಾಖ್ಯಾನ ನೀಡಿದ, ಉಕ್ಕಿನ ಮನುಷ್ಯ ವಲ್ಲಭಭಾಯ್ ಪಟೇಲ್ ಅವರನ್ನು ಅವರ ಜನ್ಮದಿನದಂದು ನೆನೆಪಿಸಿಕೊಳ್ಳೋಣ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಟ್ವೀಟ್ ಮಾಡಿದ್ದಾರೆ.

English summary
Vallabhbhai Patel was a political and social leader of India who played a major role in the country's struggle for independence and subsequently guided its integration into a united, independent nation. He was called the "Iron Man of India."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more