ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸೇರಿ ಸ್ಥಳೀಯ ಭಾಷೇಲಿ ಇಂಟರ್ನೆಟ್ ಸಿಕ್ರೆ 20 ಕೋಟಿ ಸೇರ್ಪಡೆ

|
Google Oneindia Kannada News

ನವದೆಹಲಿ, ಮಾರ್ಚ್ 22 : ಬಳಕೆದಾರರು ಬಯಸುವಂಥ ಭಾಷೆಯಲ್ಲಿ ಇಂಟರ್ ನೆಟ್ ಸಿಗುವುದಾದರೆ ಇನ್ನೂ 20.5 ಕೋಟಿ ಮಂದಿ ಡಿಜಿಟಲ್ ಆಗುತ್ತಾರೆ ಎಂಬ ಸಂಗತಿಯನ್ನು ಈಚೆಗೆ ಬಿಡುಗಡೆಯಾದ ವರದಿ "ಇಂಟರ್ ನೆಟ್ ಇನ್ ಇಂಡಿಕ್ 2017"ರಲ್ಲಿ ತಿಳಿಸಲಾಗಿದೆ. ಈ ವರದಿಯನ್ನು ಇಂಟರ್ ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ) ಮತ್ತು ಕಂಟರ್ ಐಎಂಆರ್ ಬಿ ಸಿದ್ಧಪಡಿಸಿದೆ.

ಈ ವರದಿ ಅಂದಾಜಿಸಿರುವ ಪ್ರಕಾರ, ಭಾರತದಲ್ಲಿರುವ ಒಟ್ಟು 48.1 ಕೋಟಿ ಇಂಟರ್ ನೆಟ್ ಬಳಕೆದಾರರ ಪೈಕಿ 33.5 ಕೋಟಿ ಮಂದಿ ಇಂಟರ್ ನೆಟ್ ಪ್ರಾದೇಶಿಕ ಭಾಷೆಯ (ಇಂಡಿಕ್ ನಲ್ಲಿ) ನಾನ್ ಯೂನಿಕ್ ಯೂಸರ್. ಅದರಲ್ಲಿ 19.3 ಕೋಟಿ ಮಂದಿ ನಗರ ಭಾರತದ ನಾನ್ ಯೂನಿಕ್ ಬಳಕೆದಾರರು (ಶೇ 58) ಮತ್ತು 14.1 ಕೋಟಿ ಗ್ರಾಮೀಣ ಭಾರತದ (ಶೇ 42) ನಾನ್ ಯೂನಿಕ್ ಬಳಕೆದಾರರು.

2018ರ ಜೂನ್ ಹೊತ್ತಿಗೆ ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರು 50 ಕೋಟಿ2018ರ ಜೂನ್ ಹೊತ್ತಿಗೆ ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರು 50 ಕೋಟಿ

ಈ ನಾನ್ ಯೂನಿಕ್ ಬಳಕೆದಾರರು ಅಂದರೆ ಇವರು ಇಂಟರ್ ನೆಟ್ ಅನ್ನು ಪ್ರಾದೇಶಿಕ ಭಾಷೆಯಲ್ಲಿ ಮಾತ್ರ ಬಳಸಲ್ಲ. ಹಾಗೆಂದುಕೊಂಡಾಗ ಸಣ್ಣ ಪ್ರಮಾಣದಲ್ಲಿ ಪ್ರಾದೇಶಿಕ ಭಾಷೆ ಬಳಕೆ ಮಾಡುತ್ತಾರೆ. ವರದಿಯಲ್ಲಿ ಗೊತ್ತಾಗಿರುವ ಅಂಶ ಏನೆಂದರೆ, ಇಂಟರ್ ನೆಟ್ ನಲ್ಲಿ ಪ್ರಾದೇಶಿಕ ಭಾಷೆಯಲ್ಲಿರುವ ಮಾಹಿತಿ ಬಳಸುವ ಗ್ರಾಮೀಣ ಭಾರತದ ಪ್ರಮಾಣ (ಶೇ 76) ಬಹಳ ಹೆಚ್ಚಿದೆ.

Indian language can add 205 million new internet users: IAMAI

ಅದೇ ನಗರ ಭಾರತದ ಇಂಟರ್ ನೆಟ್ ಬಳಕೆದಾರರು ಪ್ರಾದೇಶಿಕ ಭಾಷೆ ಬಳಸುವುದು ಶೇ 66ರಷ್ಟು ಮಾತ್ರ. ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದಲ್ಲಿ ಪ್ರಾದೇಶಿಕ ಭಾಷೆಯಲ್ಲಿರುವ ಮಾಹಿತಿ ಬಳಕೆ ಹೆಚ್ಚು. ಅದಕ್ಕೆ ಸಾಕ್ಷಿ ಅಂದರೆ, ಗ್ರಾಮೀಣ ಹಾಗೂ ನಗರ ಭಾರತದ ಡಿ ಅಥವಾ ಇ ವರ್ಗದ ಶೇಕಡಾ 80ರಷ್ಟು ಬಳಕೆದಾರರು ಪ್ರಾದೇಶಿಕ ಭಾಷೆಯಲ್ಲೇ ಮಾಹಿತಿಯನ್ನು ಇಂಟರ್ ನೆಟ್ ನಲ್ಲಿ ಪಡೆಯುತ್ತಾರೆ.

ಇಂಟರ್ ನೆಟ್ ನಲ್ಲಿ ಪ್ರಾದೇಶಿಕ ಭಾಷೆ ಮಾಹಿತಿ ಬಳಸುವವರ ಪ್ರಮಾಣದಲ್ಲಿ ವಯಸ್ಸು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ವರದಿ ಬಹಿರಂಗ ಪಡಿಸುತ್ತದೆ. ಸಮೀಕ್ಷೆ ಪ್ರಕಾರ, 45 ವರ್ಷ ಮೇಲ್ಪಟ್ಟ ಶೇ 75ರಷ್ಟು ನಗರವಾಸಿ ಬಳಕೆದಾರರು, 45 ವರ್ಷ ಮೇಲ್ಪಟ್ಟ ಶೇ 85ರಷ್ಟು ಗ್ರಾಮೀಣ ಭಾರತದ ಬಳಕೆದಾರರು ಪ್ರಾದೇಶಿಕ ಭಾಷೆಯಲ್ಲಿ ಇಂಟರ್ ನೆಟ್ ಬಳಸುತ್ತಾರೆ.

ಪ್ರಾದೇಶಿಕ ಭಾಷೆಲ್ಲಿ ಯಾವ ಯಾವ ಉದ್ದೇಶಕ್ಕೆ ಇಂಟರ್ ನೆಟ್ ಬಳಕೆ ಆಗುತ್ತದೆ ಎಂಬ ಲೆಕ್ಕಾಚಾರ ಇಲ್ಲಿದೆ

ಟಿಕೆಟ್ ಬುಕ್ಕಿಂಗ್ ಶೇ 15

ಕ್ರೀಡೆ ಶೇ 16

ಆನ್ ಲೈನ್ ಕೆಲಸದ ಸೇವೆ ಶೇ 17

ಆನ್ ಲೈನ್ ಬ್ಯಾಂಕಿಂಗ್ ಶೇ 21

ಸರ್ಚ್ ಎಂಜಿನ್ ಶೇ 39

ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಶೇ 46

ಮನರಂಜನೆ (ಇತರೆ) ಶೇ 47

ಸುದ್ದಿ ಶೇ 50

ಇಮೇಲ್, ಟೆಕ್ಸ್ಟ್ ಚಾಟ್ಸ್ ಶೇ 50

ಸಂಗೀತ/ವಿಡಿಯೋ ಸ್ಟ್ರೀಮಿಂಗ್ ಶೇ 68

ಇನ್ನು ವರದಿಯೇ ತಿಳಿಸುವ ಪ್ರಕಾರ, ನಗರ ಭಾರತದಲ್ಲಿ ಇಂಟರ್ ನೆಟ್ ನಲ್ಲಿ ಪ್ರಾದೇಶಿಕ ಭಾಷೆ ಬಳಕೆಯು ವಿವಿಧ ರೀತಿಯ ಮನರಂಜನೆಗಳಾದ ಸಂಗೀತ/ ವಿಡಿಯೋ ಸ್ಟ್ರೀಮಿಂಗ್ ಸುದ್ದಿ ಮತ್ತು ಇತರ ಮನರಂಜನೆಗಳಿಗೆ ಸೀಮಿತವಾಗಿದೆ. ಸರಾಸರಿಯಾಗಿ ಶೇ 70ರಷ್ಟು ಪ್ರಾದೇಶಿಕ ಭಾಷೆಯ ಇಂಟರ್ ನೆಟ್ ಬಳಕೆ ಇಂಥ ಚಟುವಟಿಕೆಗೆ ಮೀಸಲಾಗಿದೆ.

Indian language can add 205 million new internet users: IAMAI

ಹೋಲಿಕೆ ಮಾಡುವುದಾದರೆ ಅಗತ್ಯ ಸೇವೆಗಳಾದ ಆನ್ ಲೈನ್ ಬ್ಯಾಂಕಿಂಗ್, ಉದ್ಯೋಗ ಹುಡುಕಾಟ ಅಥವಾ ಟಿಕೆಟ್ ಬುಕಿಂಗ್ (ಭಾರತದಲ್ಲಿ ಅತ್ಯಂತ ಪ್ರಖ್ಯಾತವಾದ ಇ ಕಾಮರ್ಸ್ ಚಟುವಟಿಕೆ) ಇದಕ್ಕಾಗಿ ಈಗಲೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಕೆ ಆಗುತ್ತಿದೆ (ಶೇ 20ರಷ್ಟು).

ಅಷ್ಟೇ ಏಕೆ, ಇಂಟರ್ ನೆಟ್ ಬಳಕೆದಾರರ ಮೊದಲ ಆಯ್ಕೆ ಎನಿಸಿಕೊಂಡಿರುವ ಸರ್ಚ್ ಎಂಜಿನ್ ಅನ್ನು ಪ್ರಾದೇಶಿಕ ಬಳಸುವವರ ಪ್ರಮಾಣ ಶೇಕಡಾ 39ರಷ್ಟು ಮಾತ್ರ. ಐಎಎಂಎಐ ಪ್ರಕಾರ, ಪ್ರಾದೇಶಿಕ ಭಾಷೆಯಲ್ಲಿ ಇಂಟರ್ ನೆಟ್ ನ ಇಂಥ ಸೇವೆಗಳನ್ನು ಪಡೆಯುವುದಕ್ಕೆ ಇರುವ ಮಿತಿಗಳ ಪರಿಣಾಮದಿಂದ ಬಳಕೆದಾರರ ಸಂಖ್ಯೆ ಕಡಿಮೆ ಇದೆ. ಆ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಮತ್ತು ಆರ್ಥಿಕ ದುರ್ಬಲ ವರ್ಗದಲ್ಲಿ ಇಂಟರ್ ನೆಟ್ ಬಳಕೆಯ ಮಿತಿಯಾಗಿ ಪರಿಣಮಿಸಿದೆ.

ಸಮೀಕ್ಷೆಯಲ್ಲಿ ಮತ್ತೊಂದು ಮಾಹಿತಿ ಬಹಿರಂಗವಾಗಿದ್ದು, ಶೇ 23ರಷ್ಟು ಇಂಟರ್ ನೆಟ್ ಬಳಸದವರು ಡಿಜಿಟಲ್ ಆಗಲು ಪ್ರಾದೇಶಿಕ ಭಾಷೆ ತುಂಬ ಪ್ರೋತ್ಸಾಹದಾಯಕ ಅಂಶವಾಗುತ್ತದೆ. ಆದ್ದರಿಂದ ಇಂಟರ್ ನೆಟ್ ಮಾಹಿತಿಯನ್ನು ಪ್ರಾದೇಶಿಕ ಭಾಷೆಯಲ್ಲಿ ನೀಡಿದರೆ ಇನ್ನೂ 20.5 ಕೋಟಿ ಹೊಸ ಇಂಟರ್ ನೆಟ್ ಬಳಕೆದಾರರು ಆನ್ ಲೈನ್ ಗೆ ಬರುತ್ತಾರೆ.

ಐಎಎಂಎಐ ಮತ್ತೊಂದು ಪ್ರಮುಖಾಂಶದ ಕಡೆ ಗಮನ ಸೆಳೆಯುತ್ತದೆ. ಪ್ರಾದೇಶಿಕ ಭಾಷೆಯು ಇಂಟರ್ ನೆಟ್ ನ ಮಾಹಿತಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಅಂತಿಲ್ಲ. ಒಟ್ಟಾರೆ ಡಿಜಿಟಲ್ ಪರಿಸರದ ಮೇಲೆ ಪರಿಣಾಮ ಆಗುತ್ತದೆ. ಭವಿಷ್ಯದಲ್ಲಿ URLs, ಡೊಮೈನ್ ಹೆಸರು, ಕೀ ಟ್ಯಾಗ್, ಇಂಡೆಕ್ಸ್ ಮುಂತಾದವು ಪ್ರಾದೇಶಿಕ ಭಾಷೆಯಲ್ಳೇ ಹಾಕಬೇಕು. ಇದರಿಂದ ಒಟ್ಟಾರೆ ಡಿಜಿಟಲ್ ಇಂಟರ್ ಫೇಸ್ ಬಳಕೆದಾರ ಸ್ನೇಹಿ ಆಗುತ್ತದೆ.

ಜಾಗತಿಕವಾಗಿ ಹಾಗೆ ದೊಡ್ಡ ಮಟ್ಟದಲ್ಲಿ ಪ್ರಾದೇಶಿಕ ಭಾಷೆಯ ಇಂಟರ್ ನೆಟ್ ಬಳಕೆದಾರರನ್ನು ಹೊಂದಲು ಯಶಸ್ವಿ ಆಗಿರುವುದು ಚೀನಾ. ಅದರ ಇಂಟರ್ ನೆಟ್ ಮಾಹಿತಿಯು ಮ್ಯಾಂಡರಿನ್ ನಲ್ಲಿ ಇರುತ್ತದೆ. ಇಂಗ್ಲಿಷ್ ನಂತರ ಅತ್ಯಂತ ಜನಪ್ರಿಯ ಆಗಿರುವ ಭಾಷೆ ಚೈನೀಸ್. ವಿಪರ್ಯಾಸ ಏನೆಂದರೆ, ಒಟ್ಟಾರೆ ಜಗತ್ತಿನ ಇಂಟರ್ ನೆಟ್ ಮಾಹಿತಿಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ ಇರುವುದು ಶೇ 0.1ರಷ್ಟು ಮಾತ್ರ.

ಐಎಎಂಎಐ ಹೇಳುವ ಪ್ರಕಾರ, ಡಿಜಿಟಲ್ ಇಂಡಿಯಾ ಕನಸಿನ ಸಾಕಾರ ಆಗಬೇಕು ಅಂದರೆ ಭಾರತ ಕೂಡ ಪ್ರಾದೇಶಿಕ ಭಾಷೆಯ ಇಂಟರ್ ನೆಟ್ ವಾತಾವರಣ ಅಭಿವೃದ್ಧಿಪಡಿಸಬೇಕು. ಇಂಟರ್ ನೆಟ್ ನ ಹಲವು ಸೇವೆಯನ್ನು ಪ್ರಾದೇಶಿಕ ಭಾಷೆಯಲ್ಲೇ ನೀಡಬೇಕು. ಆಗ ದೇಶದ ಸಾಮಾಜಿಕ ಹಾಗೂ ಆರ್ಥಿಕ ದುರ್ಬಲ ವರ್ಗದಲ್ಲಿ ಡಿಜಿಟಲ್ ಸಬಲೀಕರಣ ಹೆಚ್ಚುತ್ತದೆ ಹಾಗೂ ಇಂಟರ್ ನೆಟ್ ಬಳಕೆ ಪ್ರಮಾಣವೂ ಹೆಚ್ಚಾಗುತ್ತದೆ.

ಏನಿದು ಐಎಎಂಎಐ?

ಇಂಟರ್ ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾವು ಭಾರತದ ಒಟ್ಟಾರೆ ಡಿಜಿಟಲ್ ವ್ಯವಹಾರವನ್ನು ಪ್ರತಿನಿಧಿಸುವ ಯುವ ಹಾಗೂ ಉತ್ಸಾಹಿ ಒಕ್ಕೂಟ. ಇದು ಆರಂಭವಾಗಿದ್ದು ಮುಂಚೂಣಿ ಆನ್ ಲೈನ್ ಪಬ್ಲಿಷರ್ಸ್ ನಿಂದ, 2004ರಲ್ಲಿ.

ಈ ಹದಿಮೂರು ವರ್ಷದಲ್ಲಿ ಆನ್ ಲೈನ್ ಪಬ್ಲಿಷಿಂಗ್, ಮೊಬೈಲ್ ಜಾಹೀರಾತು, ಆನ್ ಲೈನ್ ಜಾಹೀರಾತು, ಇ ಕಾಮರ್ಸ್, ಮೊಬೈಲ್ ಸುದ್ದಿ ಮತ್ತು ಸೇವೆ, ಮೊಬೈಲ್ ಮತ್ತು ಡಿಜಿಟಲ್ ಪಾವತಿ, ಹೊಸ ವಲಯಗಳಾದ ಫೈನ್-ಟೆಕ್, ಎಜು-ಟೆಕ್ ಮತ್ತು ಹೆಲ್ತ್-ಟೆಕ್ ಸೇರಿದಂತೆ ಡಿಜಿಟಲ್ ಮತ್ತು ಆನ್ ಲೈನ್ ವಲಯದ ನಾನಾ ಸವಾಲುಗಳಿಗೆ ತನ್ನನ್ನು ತೆರೆದುಕೊಂಡಿದೆ.

ಈ ಒಕ್ಕೂಟ ಆರಂಭವಾಗಿ ಹದಿಮೂರು ವರ್ಷವೇ ಕಳೆದಿದ್ದರೂ ಭಾರತದಲ್ಲಿ ಡಿಜಿಟಲ್ ಮತ್ತು ಮೊಬೈಲ್ ಮಾಹಿತಿ ವಲಯವನ್ನು ಪ್ರತಿನಿಧಿಸಲು ಇರುವ ಏಕೈಕ ವೃತ್ತಿಪರ ಒಕ್ಕೂಟ ಅಂದರೆ ಐಎಎಂಎಐ ಮಾತ್ರ. ಸೊಸೈಟಿ ಕಾಯ್ದೆ ಅಡಿ ಈ ಒಕ್ಕೂಟ ನೋಂದಣಿಯಾಗಿದೆ. ಮಹಾರಾಷ್ಟ್ರದಲ್ಲಿ ದತ್ತಿ ಸಂಸ್ಥೆಯಾಗಿ ಗುರುತಿಸಲಾಗಿದೆ.

ಮುನ್ನೂರಕ್ಕೂ ಹೆಚ್ಚು ಭಾರತೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ನೋಂದಣಿ ಹೊಂದಿದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಕಚೇರಿಗಳನ್ನು ಹೊಂದಿದೆ. ಭಾರತದಲ್ಲಿ ಡಿಜಿಟಲ್ ವಲಯವನ್ನು ಅಭಿವೃದ್ಧಿ ಪಥದತ್ತ ಕೊಡೊಯ್ಯಲು ಶ್ರಮಿಸುತ್ತಿದೆ ಇಂಟರ್ ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಎಂಎಐ).

English summary
Potential 20.5 crore internet non-users are likely to go digital if internet is provided in a language of their choice, according to the recently released report titled “Internet in Indic 2017” published jointly by the Internet and Mobile Association of India (IAMAI) & Kantar IMRB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X