ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮಾರ್ಗಸೂಚಿ ಪಟ್ಟಿಯಿಂದ "ಪ್ಲಾಸ್ಮಾ ಥೆರಪಿ" ಔಟ್!

|
Google Oneindia Kannada News

ನವದೆಹಲಿ, ಮೇ 18: ಕೊರೊನಾವೈರಸ್ ಸೋಂಕಿತರ ಆರೋಗ್ಯ ಚೇತರಿಕೆ ಮತ್ತು ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯಾಗಿಲ್ಲ ಎಂದು ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ. ಈ ಹಿನ್ನೆಲೆ ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ತೆಗೆದು ಹಾಕಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಪ್ರಕಾರ, ವಯಸ್ಕ ಕೊವಿಡ್ -19 ರೋಗಿಗಳ ನಿರ್ವಹಣೆಗಾಗಿ ಇರುವ ವೈದ್ಯಕೀಯ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದೆ. ಇದರ ಜೊತೆಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಕೈಬಿಡಲಾಗಿದೆ.

ಕೋವಿಡ್ 2ನೇ ಅಲೆ; ಪ್ಲಾಸ್ಲಾ ಥೆರಪಿ ಪರಿಣಾಮಕಾರಿಯಲ್ಲಕೋವಿಡ್ 2ನೇ ಅಲೆ; ಪ್ಲಾಸ್ಲಾ ಥೆರಪಿ ಪರಿಣಾಮಕಾರಿಯಲ್ಲ

ದೇಶದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಥೆರಪಿ ಅನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ ಜಾಗತಿಕ ಸಂಶ್ಲೇಷಣೆ ಪ್ರಕಾರ, ಪ್ಲಾಸ್ಮಾ ಥೆರಪಿಯಿಂದ ಕೊವಿಡ್-19 ರೋಗಿಗಳ ಚಿಕಿತ್ಸೆ ಪರಿಣಾಮಕಾರಿಯಾಗಿಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಐಸಿಎಂಆರ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸಿಮಿರಾನ್ ಪಾಂಡಾ ಹೇಳಿದ್ದಾರೆ.

Indian Govt Removed Plasma Therapy From Coronavirus Management Guidelines

ಪ್ಲಾಸ್ಮಾ ಥೆರಪಿ ಪ್ರಯೋಜನದ ಬಗ್ಗೆ ಉಲ್ಲೇಖ:

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ದತ್ತಾಂಶಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಯಾವುದೇ ಪ್ರಯೋಜನ ಆಗಿರುವುದು ಕಂಡು ಬಂದಿಲ್ಲ. ಕೊರೊನಾ ಚೇತರಿಕೆಗೆ ಸಂಬಂಧಿಸಿದ ದಾಖಲೆಯನ್ನು ಪರಿಶೀಲಿಸಲಾಗಿದ್ದು, ಪ್ಲಾಸ್ಮಾ ಥೆರಪಿಯಿಂದ ಅಷ್ಟಾಗಿ ಲಾಭವಾಗಿಲ್ಲ ಎಂಬುದು ಗೋಚರಿಸುತ್ತದೆ ಎಂದು ಐಸಿಎಂಆರ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಸಿಮಿರಾನ್ ಪಾಂಡಾ ತಿಳಿಸಿದ್ದಾರೆ.

ಈ ಮೊದಲು ಮಾರ್ಗಸೂಚಿಯಲ್ಲಿ ಪ್ಲಾಸ್ಮಾ ಥೆರಪಿ ಬಗ್ಗೆ ಉಲ್ಲೇಖಿಸಲಾಗಿತ್ತು. ಕೊರೊನಾವೈರಸ್ ಮಧ್ಯಮ ಪ್ರಮಾಣದ ರೋಗಿಗಳಿಗೆ ಈ ಥೆರಪಿ ನೀಡಲಾಗುತ್ತದೆ. ಸೋಂಕಿನ ಲಕ್ಷಣ ಗೋಚರಿಸಿದ ಏಳು ದಿನಗಳವರೆಗೂ ಪ್ಲಾಸ್ಮಾ ಥೆರಪಿ ನೀಡುವುದಕ್ಕೆ ಮಾರ್ಗಸೂಚಿಯಲ್ಲಿ ಅವಕಾಶ ನೀಡಲಾಗಿತ್ತು.

English summary
Indian Govt Removed Plasma Therapy From Coronavirus Management Guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X