ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಗೆ ಕೊರ್ಬೊವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್ ಆಗಿ ನೀಡಲು ಡಿಸಿಜಿಐ ಅನುಮೋದನೆ

|
Google Oneindia Kannada News

ನವದೆಹಲಿ, ಜೂನ್ 4: ಭಾರತದಲ್ಲಿ ಬಯೋಲಾಜಿಕಲ್-ಇ ಲಿಮಿಟೆಡ್‌ನ ಕೊರ್ಬೊವಾಕ್ಸ್ ಲಸಿಕೆಯನ್ನು ಮೊದಲ ಹೆಟೆರೊಲಾಜಸ್ ಕೋವಿಡ್ -19 ಬೂಸ್ಟರ್ ಡೋಸ್‌ನಂತೆ ಬಳಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ.

ದೇಶದಲ್ಲಿ ಮೊದಲ ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡವರು ಬೂಸ್ಟರ್ ಡೋಸ್ ಆಗಿ ಈ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಔಷಧೀಯ ನಿಯಂತ್ರಣ ಮಂಡಳಿ ತಿಳಿಸಿದೆ.

ಬಯಲಾಜಿಕಲ್-ಇ ಸಂಸ್ಥೆಯ ಕೊರ್ಬೆವ್ಯಾಕ್ಸ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿಬಯಲಾಜಿಕಲ್-ಇ ಸಂಸ್ಥೆಯ ಕೊರ್ಬೆವ್ಯಾಕ್ಸ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿರುವುದರ ಮಧ್ಯೆ ನೀಡಿರುವ ಈ ಅನುಮತಿಯು ಮ ಹತ್ವದ್ದಾಗಿದೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ಮೊದಲ ಎರಡು ಡೋಸ್ ಆಗಿ ಪಡೆದುಕೊಂಡವರು, ಮೂರನೇ ಡೋಸ್ ಆಗಿ ಈ ಕೊರ್ಬೊವ್ಯಾಕ್ಸ್ ಲಸಿಕೆಯನ್ನು ಪಡೆದುಕೊಳ್ಳುವುದಕ್ಕೆ ಅನುಮೋದನೆಯನ್ನು ನೀಡಲಾಗಿದೆ.

ಪ್ರಯೋಗದ ವೇಳೆ ಕೊರ್ಬೊವ್ಯಾಕ್ಸ್ ಲಸಿಕೆ ಸುರಕ್ಷಿತ

ಪ್ರಯೋಗದ ವೇಳೆ ಕೊರ್ಬೊವ್ಯಾಕ್ಸ್ ಲಸಿಕೆ ಸುರಕ್ಷಿತ

ಕೊರೊನಾವೈರಸ್ ಲಸಿಕೆ ಆಗಿರುವ ಕೊರ್ಬೊವ್ಯಾಕ್ಸ್ ಕುರಿತು 18 ವರ್ಷದಿಂದ 80 ವರ್ಷದ 416 ಜನರ ಮೇಲೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು. ಬೂಸ್ಟರ್ ಡೋಸ್ ಲಸಿಕೆಯ ವೈದ್ಯಕೀಯ ಪ್ರಯೋಗದ ಸಂದರ್ಭದಲ್ಲಿ ಈ ಬೂಸ್ಟರ್ ಡೋಸ್ ಹೆಚ್ಚು ಪ್ರತಿರಕ್ಷಣಾ ಸಾಮರ್ಥ್ಯವನ್ನು ಹೊಂದಿದೆ. ಈ ಬೂಸ್ಟರ್ ಡೋಸ್ ಹೆಚ್ಚು ಸುರಕ್ಷಿತವಾಗಿದೆ ಎಂಬುದು ಗೊತ್ತಾಗಿದೆ.

ಕೊರ್ಬೊವ್ಯಾಕ್ಸ್ ಲಸಿಕೆಯ ವಿಶೇಷತೆಗಳೇನು?

ಕೊರ್ಬೊವ್ಯಾಕ್ಸ್ ಲಸಿಕೆಯ ವಿಶೇಷತೆಗಳೇನು?

ಬಯೋಲಾಜಿಕಲ್-ಇ ಲಿಮಿಟೆಡ್ ಸಂಸ್ಥೆಯ ಕೊರ್ಬೆವ್ಯಾಕ್ಸ್ ಲಸಿಕೆಯು ಕೊರೊನಾವೈರಸ್ ಸೋಂಕಿನ ವಿರುದ್ಧ ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ರಿಸೆಪ್ಟರ್ ಬೈಂಡಿಂಗ್ ಡೊಮೈನ್ (RBD) ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದೆ. DCGI ಮೊದಲು 2021ರ ಡಿಸೆಂಬರ್ 28ರಂದು ವಯಸ್ಕರಲ್ಲಿ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಕೊರ್ಬೊವ್ಯಾಕ್ಸ್ ಲಸಿಕೆಗೆ ಅನುಮೋದಿಸಿತ್ತು.

ಕೊರ್ಬೆವಾಕ್ಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳೊಂದಿಗೆ ಇಂಟ್ರಾಮಸ್ಕುಲರ್ ಮಾರ್ಗದಲ್ಲಿ ನೀಡಲಾಗುತ್ತದೆ. 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಈ ಲಸಿಕೆಯನ್ನು ಸಂಗ್ರಹಿಸಿ ಇಡಲಾಗುತ್ತದೆ. 0.5 ಮಿಲಿ (ಸಿಂಗಲ್ ಡೋಸ್) ಮತ್ತು 5 ಮಿಲಿ (10 ಡೋಸ್) ಸೀಸೆ ಪ್ಯಾಕ್‌ನಂತೆ ನೀಡಲಾಗುತ್ತದೆ.

ದೇಶದಲ್ಲಿ 5 ರಿಂದ 12 ವರ್ಷದ ಮಕ್ಕಳಿಗೂ ಲಸಿಕೆ

ದೇಶದಲ್ಲಿ 5 ರಿಂದ 12 ವರ್ಷದ ಮಕ್ಕಳಿಗೂ ಲಸಿಕೆ

ಕೊರೊನಾವೈರಸ್ ಹಾವಳಿ ಹೆಚ್ಚುತ್ತಿರುವುದರ ಮಧ್ಯೆ ಮಕ್ಕಳಿಗೆ ಹೆಚ್ಚು ಅಪಾಯ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(DCGI)ದ ವಿಷಯ ತಜ್ಞರ ಸಮಿತಿಯು 5 ರಿಂದ 12 ವರ್ಷದ ಮಕ್ಕಳಿಗೂ ಲಸಿಕೆ ನೀಡುವಂತೆ ಶಿಫಾರಸ್ಸು ಮಾಡಿದೆ. ದೇಶದಲ್ಲಿ 5 ರಿಂದ 12 ವರ್ಷದ ಮಕ್ಕಳಿಗೆ ಬಯೋಲಾಜಿಕಲ್-ಇ ಸಂಸ್ಥೆಯ ಕೊರ್ಬೊವ್ಯಾಕ್ಸ್ ಲಸಿಕೆಯನ್ನು ನೀಡುವಂತೆ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ. ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡಬಹುದು ಎನ್ನುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರದ ತಜ್ಞರ ಸಮಿತಿಯು ಈ ರೀತಿ ಶಿಫಾರಸ್ಸು ನೀಡಿದೆ.

ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಭಾರತದ ಡ್ರಗ್ ಕಂಟ್ರೋಲರ್ ಜನರಲ್‌ಗೆ ಕಳುಹಿಸಲಾಗಿದೆ. ಡಿಸಿಜಿಐ ಅಂತಿಮ ಒಪ್ಪಿಗೆಗಾಗಿ ಎದುರು ನೋಡಲಾಗುತ್ತಿದ್ದು, ಭಾರತದ ಮೂರನೇ ಸ್ವದೇಶಿ ಲಸಿಕೆಯಾದ ಕೊರ್ಬೊವ್ಯಾಕ್ಸ್ ಅನ್ನು 12-14 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ.

ಕೊರೊನಾವೈರಸ್ ಲಸಿಕೆ ವಿತರಣೆಯ ಹಂತಗಳು ಎಷ್ಟು?

ಕೊರೊನಾವೈರಸ್ ಲಸಿಕೆ ವಿತರಣೆಯ ಹಂತಗಳು ಎಷ್ಟು?

ಕಳೆದ 2021ರ ಜನವರಿ 16ರಂದು ಮೊದಲ ಬಾರಿಗೆ ಕೋವಿಡ್-19 ಲಸಿಕೆಯ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಫೆಬ್ರವರಿ 2ರಂದು ಎರಡನೇ ಹಂತದಲ್ಲಿ ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಿಸಲಾಯಿತು. ಮಾರ್ಚ್ 1ರಿಂದ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥತೆಯನ್ನು ಹೊಂದಿರುವವರಿಗೆ ಕೋವಿಡ್-19 ಲಸಿಕೆ ವಿತರಿಸಲು ಶುರು ಮಾಡಲಾಯಿತು. ತದನಂತರ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಿಸಲು ಅನುಮತಿ ನೀಡಲಾಗಿತ್ತು.

ಕಳೆದ ಮೇ 1ರ ನಂತರದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆ ವಿತರಿಸುವುದಕ್ಕೆ ಅನುಮತಿಸಲಾಗಿತ್ತು. 2022ರ ಜನವರಿ 3ರಂದು 15 ರಿಂದ 18 ವಯೋಮಾನದವರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡುವುದಕ್ಕೆ ಕೇಂದ್ರ ಸರ್ಕಾರವು ಅನುಮೋದನೆಯನ್ನು ನೀಡಿತು. ಇದರ ಬೆನ್ನಲ್ಲೇ ಮಾರ್ಚ್ 16ರಂದು 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ವಿತರಿಸುವುದಕ್ಕೆ ಅನುಮತಿ ನೀಡಲಾಯಿತು. ಹೀಗೆ ಹಂತ-ಹಂತವಾಗಿ ಲಸಿಕೆ ವಿತರಣೆಗೆ ದೇಶದಲ್ಲಿ ಅನುಮತಿ ನೀಡಲಾಗಿದೆ.

English summary
Indian Govt gives Permission to Corbevax as Covid booster shot; it can be clubbed with other jabs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X