ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಷಧಿ ರಫ್ತಿಗೆ ಸರ್ಕಾರ ಅಸ್ತು: ಟ್ರಂಪ್ ಕೊಟ್ಟ ಎಚ್ಚರಿಕೆಗೆ ಮಣಿದ ಭಾರತ?

|
Google Oneindia Kannada News

ನವದೆಹಲಿ, ಏಪ್ರಿಲ್ 7: ವಿಶ್ವಕ್ಕೆ ಜೆನೆರಿಕ್ ಔಷಧಿಗಳನ್ನು ಪೂರೈಕೆ ಮಾಡುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ದೇಶ ಭಾರತ.

ಮಾರಣಾಂತಿಕ ಕೊರೊನಾ ವೈರಸ್ ವಿಶ್ವದಾದ್ಯಂತ ಹಬ್ಬಿದ ಪರಿಣಾಮ, ಜಾಗತಿಕ ಮಟ್ಟದಲ್ಲಿ ಔಷಧಿಗಳ ಪೂರೈಕೆಯಲ್ಲಿ ಅಡ್ಡಿಯುಂಟಾಯಿತು. ಇದರಿಂದಾಗಿ, ಭಾರತ ಸರ್ಕಾರ ಕೆಲ ಔಷಧಿಗಳ ರಫ್ತಿಗೆ ನಿರ್ಬಂಧ ಹೇರಿತ್ತು. ಭಾರತದಲ್ಲಿ ಔ‍ಷಧಿಗಳಿಗೆ ಕೊರತೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'

ಆದ್ರೀಗ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಪ್ರತೀಕಾರ'ದ ಎಚ್ಚರಿಕೆ ಕೊಟ್ಟಿದ್ದಕ್ಕೋ, ಏನೋ... 24 ಫಾರ್ಮಸ್ಯುಟಿಕಲ್ ಪದಾರ್ಥಗಳು ಮತ್ತು ಔಷಧಿಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಸಡಿಲಿಸಲಾಗಿದೆ.

ಔ‍ಷಧಿಗಳ ರಫ್ತಿಗೆ ಹೇರಿದ್ದ ನಿರ್ಬಂಧವನ್ನು ಸಡಿಲಿಸಿರುವ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ಭಾರತ ಸರ್ಕಾರ ತಿಳಿಸಿದೆ.

ಅಮೇರಿಕಾದ ಒತ್ತಡಕ್ಕೆ ಮಣಿಯಿತಾ ಭಾರತ.?

ಅಮೇರಿಕಾದ ಒತ್ತಡಕ್ಕೆ ಮಣಿಯಿತಾ ಭಾರತ.?

ಔಷಧಿಗಳ ರಫ್ತಿಗೆ ಹೇರಿದ್ದ ನಿರ್ಬಂಧವನ್ನು ತೆಗೆಯಲು ಕಾರಣವೇನು ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಆದ್ರೆ, ಅಮೇರಿಕಾದ ಒತ್ತಡಕ್ಕೆ ಮಣಿದು ಈ ನಿರ್ಬಂಧವನ್ನು ತೆಗೆಯಲಾಗಿದೆ ಎಂದು ಭಾರತ ಸರ್ಕಾರದ ನಂಬಲಾರ್ಹ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ದೂರವಾಣಿ ಮಾತುಕತೆ ನಡೆದಿದ್ದು, ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಶ್ವೇತ ಭವನದ ವಕ್ತಾರ ಹೇಳಿದ್ದೇನು.?

ಶ್ವೇತ ಭವನದ ವಕ್ತಾರ ಹೇಳಿದ್ದೇನು.?

''ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ, ಔಷಧಿಗಳ ವಿಚಾರವಾಗಿ ಸದಾ ಸಂಪರ್ಕದಲ್ಲಿರಲು ಮತ್ತು ಅವುಗಳಿಂದ ಸಾಧ್ಯವಾದಷ್ಟು ಸರಾಗವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ'' ಎಂದು ಶ್ವೇತಭವನದ ವಕ್ತಾರ ಜುಡ್ ಡೀರೇ ಟ್ವೀಟ್ ಮಾಡಿದ್ದರು.

ಔ‍ಷಧಿಗಳ ರಫ್ತಿಗೆ ನಿರ್ಬಂಧ

ಔ‍ಷಧಿಗಳ ರಫ್ತಿಗೆ ನಿರ್ಬಂಧ

ಮಾರ್ಚ್ 3 ರಂದು 26 ಫಾರ್ಮಸ್ಯುಟಿಕಲ್ ಪದಾರ್ಥಗಳು ಮತ್ತು ಹಲವು ಔಷಧಿಗಳ ರಫ್ತಿನ ಮೇಲೆ ಭಾರತ ಸರ್ಕಾರ ನಿರ್ಬಂಧ ಹೇರಿತ್ತು. ಭಾರತದಲ್ಲಿ Hydroxychloroquine ಗೆ ಕೊರತೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ರಫ್ತಿಗೆ ಹೇರಿದ್ದ ನಿರ್ಬಂಧದ ಪಟ್ಟಿಯಲ್ಲಿ ವಿಟಮಿನ್ ಬಿ12, ಹಾರ್ಮೋನ್ progesterone, tinidazole, erythromycin, ಸೇರಿದಂತೆ ಹಲವು Anti-biotics ಉಳಗೊಂಡಿದ್ದವು.

ಇವುಗಳ ಮೇಲೂ ನಿರ್ಬಂಧ

ಇವುಗಳ ಮೇಲೂ ನಿರ್ಬಂಧ

ಟೆಸ್ಟಿಂಗ್ ಕಿಟ್ ಗಳು, ವೆಂಟಿಲೇಟರ್, ಮಾಸ್ಕ್, ಸುರಕ್ಷತಾ ಸಾಧನಗಳು ಸೇರಿದಂತೆ ಭಾರತೀಯ ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಗಳಿಗೆ ಅವಶ್ಯಕವಾಗಿರುವ ಪರಿಕರಗಳ ರಫ್ತಿಗೂ ಭಾರತ ಸರ್ಕಾರ ನಿರ್ಬಂಧ ಹೇರಿತ್ತು.

ಮೋದಿಗೆ ಮನವಿ ಮಾಡಿದ್ದ ಟ್ರಂಪ್

ಮೋದಿಗೆ ಮನವಿ ಮಾಡಿದ್ದ ಟ್ರಂಪ್

ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ Hydroxychloroquine (anti-malaria) ಔಷಧವನ್ನು ರಫ್ತು ಮಾಡುವಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದರು.

ಪ್ರತೀಕಾರದ ಎಚ್ಚರಿಕೆ ಕೊಟ್ಟಿದ್ದ ಟ್ರಂಪ್

ಇದೇ ವಿಚಾರದ ಬಗ್ಗೆ ನಿನ್ನೆ ಭಾರತಕ್ಕೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ''ನಾನು ಭಾರತದ ಪ್ರಧಾನಿ ಬಳಿ ಭಾನುವಾರ ಮಾತನಾಡಿದ್ದೇನೆ, Hydroxychloroquine ಔಷಧಕ್ಕಾಗಿ ಮನವಿ ಮಾಡಿದ್ದೇನೆ, ಒಂದು ವೇಳೆ ಭಾರತ ಆ ಔಷಧ ನೀಡಿದ್ರೆ ಸಂತೋಷ. ಕೊಡಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ ಅದಕ್ಕೆ ಪ್ರತಿಕಾರವೂ ಇರಬಹುದು. ಏಕೆ ಇರಬಾರದೇ?'' ಎಂದಿದ್ದರು.

ಸೂಕ್ತ ಪ್ರಮಾಣದಲ್ಲಿ ಪೂರೈಕೆ

ಸೂಕ್ತ ಪ್ರಮಾಣದಲ್ಲಿ ಪೂರೈಕೆ

ದೇಶೀಯ ಅವಶ್ಯಕತೆಗಳನ್ನು ಪೂರೈಸಿದ ನಂತರವಷ್ಟೇ ಇತರೆ ದೇಶಗಳಿಗೆ Hydroxychloroquine ಮತ್ತು ಪ್ಯಾರೆಸೆಟಮಾಲ್ ಪೂರೈಸಲಾಗುವುದು. ''ಇತರೆ ರಾಷ್ಟ್ರಗಳಿಗೆ ಈ ಎರಡು ಔಷಧಿಗಳನ್ನು ಸೂಕ್ತ ಪ್ರಮಾಣದಲ್ಲಿ ಪೂರೈಸಲಾಗುವುದು. ಮಾನವೀಯತೆ ಮೇರೆಗೆ ಕೆಲವು ಸಾಗಣೆಯನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ಅನುಮತಿ ನೀಡಲಾಗುವುದು'' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇದೀಗ ತಿಳಿಸಿದೆ.

Hydroxychloroquine ಪರಿಣಾಮಕಾರಿ

Hydroxychloroquine ಪರಿಣಾಮಕಾರಿ

ಮಲೇರಿಯಾ ಕಾಯಿಲೆಗೆ ಮದ್ದಾಗಿ ಕೊಡುವ Hydroxychloroquine ಕೋವಿಡ್-19ಗೂ ಪರಿಣಾಮಕಾರಿಯಾಗಿದೆ. ಭಾರತದ ಕೋವಿಡ್-19 ಟಾಸ್ಕ್ ಫೋರ್ಸ್ ಕೂಡ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಔಷಧಿಯಾಗಿ Hydroxychloroquine ಬಳಸುವಂತೆ ಶಿಫಾರಸ್ಸು ಮಾಡಿದೆ.

English summary
Indian Government lifts Restrictions on Drug Exports amid Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X