ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ಉಸ್ಮಾನ್ ಖಾನ್ ಯಾರು?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 5 : ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಬುಧವಾರ ಬಿಎಸ್‌ಎಫ್ ಪಡೆಯ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ಒಬ್ಬನನ್ನು ಸೆರೆಹಿಡಿಯಲಾಗಿದೆ. ಸೆರೆಹಿಡಿದ ಉಗ್ರ ಪಾಕಿಸ್ತಾನ ಮೂಲದವನು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಉಸ್ಮಾನ್ ಖಾನ್ ಅಲಿಯಾಸ್ ಕಾಸಿಂ ಖಾನ್‌ನನ್ನು ಭದ್ರತಾ ಪಡೆಗಳು ಸೆರೆಹಿಡಿದಿವೆ. ಸುಮಾರು 20 ವರ್ಷದ ಉಸ್ಮಾನ್ ಇಂದು ಬೆಳಗ್ಗೆ ಇತರ ಉಗ್ರರ ಜೊತೆ ಸೇರಿ ಉದಾಮ್‌ ಪುರ್ ಬಳಿ ಬಿಎಸ್‌ಎಫ್ ಶಿಬಿರದ ಮೇಲೆ ದಾಳಿ ಮಾಡಿದ್ದ ಮತ್ತು ಮೂವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ. [ಕಾಶ್ಮೀರದಲ್ಲಿ ಉಗ್ರರ ದಾಳಿ, ಜೀವಂತವಾಗಿ ಸೆರೆಸಿಕ್ಕ ಉಗ್ರ]

terrorist

ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಉಸ್ಮಾನ್‌ ಮಾತ್ರ ಸೆರೆ ಸಿಕ್ಕಿದ್ದಾನೆ. ಪಾಕಿಸ್ತಾನದ ಫೈಸ್ಲಾಬಾದ್‌ನಿಂದ ಉಸ್ಮಾನ್ ಆಗಮಿಸಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ಉಸ್ಮಾನ್ ವಿಚಾರಣೆಯನ್ನು ನಡೆಸುತ್ತಿದ್ದಾರೆ. [ಪಂಜಾಬಿನಲ್ಲಿ ಉಗ್ರರನ್ನು ಕೊಂದ ಯೋಧರು : ಚಿತ್ರಗಳು]

ಯಾರು ಉಸ್ಮಾನ್ ಖಾನ್? : ಪಾಕಿಸ್ತಾನ ಮೂಲದ ಉಸ್ಮಾನ್ ಲಷ್ಕರ್ ಎ ತೋಯ್ಬಾ ಮತ್ತು ಹಿಜ್‌ಬುಲ್ ಮುಜಾಹಿದ್ದೀನ್ ಸೇರಿ ನಡೆಸುತ್ತಿರುವ ಸಂಘಟನೆಯ ಸದಸ್ಯನಾಗಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟ ನಡೆಸುವ ಉದ್ದೇಶದಿಂದ ಉಸ್ಮಾನ್ 10 ದಿನಗಳ ಹಿಂದೆಯೇ ಗಡಿ ನುಸುಳಿ ಬಂದಿದ್ದ.

jammu

ಪಂಜಾಬಿನ ಗುರುದಾಸ್‌ ಪುರ್‌ನಲ್ಲಿ ಗುಂಡಿನ ದಾಳಿ ನಡೆಸಿದ ಉಗ್ರರ ತಂಡದೊಂದಿಗೆ ಉಸ್ಮಾನ್ ಭಾರತಕ್ಕೆ ಆಗಮಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಒಂದು ತಂಡ ಪಂಜಾಬ್‌ಗೆ ಬಂದರೆ ಮತ್ತೊಂದು ಉಗ್ರರ ತಂಡ ಅರಮನಾಥ ಯಾತ್ರಿಗಳ ಮೇಲೆ ದಾಳಿ ನಡೆಸಲು ಕಾಶ್ಮೀರದಲ್ಲಿ ಉಳಿದಿತ್ತು ಎಂದು ಶಂಕಿಸಲಾಗಿದೆ. ಪಿಟಿಐ ಚಿತ್ರ

English summary
The arrest of Usman Khan at Jammu and Kashmir is a major breakthrough for the security forces who battled terrorists at Udhampur. Usman Khan who was captured by the security forces was part of the group that killed two BSF soldiers and even took three persons hostage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X