ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ವಿರುದ್ದ ಸುಷ್ಮಾ ಡೆಡ್ಲಿ ಸ್ಪೀಚ್: 'ಸೊಕ್ಕಿನ' ಭಾಷಣವೆಂದ ಚೀನಾ

ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಸಚಿವೆ ಸುಷ್ಮಾ ಸ್ವರಾಜ್ ಮಾಡಿದ ಭಾಷಣದ ಬಗ್ಗೆ ಚೀನಾ ಅಪಸ್ವರ. ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿರುವುದು ಹೌದಾದರೂ, ಸುಷ್ಮಾ ಸ್ವರಾಜ್ ಅವರ ಭಾಷಣ ಸೊಕ್ಕಿನ ಪರಮಾವಧಿ ಎಂದ ಚೀನಾದ ಮಾಧ್ಯಮ.

|
Google Oneindia Kannada News

ಬೀಜಿಂಗ್, ಸೆ 26: ಕಳೆದ ವಾರ ವಿಶ್ವಸಂಸ್ಥೆಯ ಸಾಮಾನ್ಯ ಶೃಂಗ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಮಾಡಿದ ಭಾಷಣದ ಬಗ್ಗೆ ಚೀನಾ ಅಪಸ್ವರ ಎತ್ತಿದೆ.

ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿರುವುದು ಹೌದಾದರೂ, ಸುಷ್ಮಾ ಸ್ವರಾಜ್ ಅವರ ಭಾಷಣ ಸೊಕ್ಕಿನ ಪರಮಾವಧಿ ಎಂದು ಚೀನಾದ ಮಾಧ್ಯಮ ದೂರಿದೆ.

ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ದ ಸುಷ್ಮಾ ಡೆಡ್ಲಿ ಸ್ಪೀಚ್ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ದ ಸುಷ್ಮಾ ಡೆಡ್ಲಿ ಸ್ಪೀಚ್

Indian External Affairs Minsiter Sushma Swaraj UNGA speech is highlyarrogant, Chinese media

ಸುಷ್ಮಾ ಅವರ ಭಾಷಣವನ್ನು ವರದಿ ಮಾಡುತ್ತಾ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ, ತಮ್ಮ ರಾಷ್ಟ್ರೀಯತೆಯನ್ನು ಜಗತ್ತಿಗೆ ತೋರಿಸುವ ಸಲುವಾಗಿ ಮಾಡಿರುವ ಭಾಷಣ ಇದು ಎಂದಿರುವ ಪತ್ರಿಕೆ, ಸುಷ್ಮಾ ಭಾಷಣದ ಶೈಲಿಯನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸಿದೆ.

ಪಾಕಿಸ್ತಾನದ ಜೊತೆಗಿನ ಭಾರತದ ವಿರೋಧ, ವಿಶ್ವದಲ್ಲೇ ಪ್ರಭಲ ರಾಷ್ಟವಾಗಬೇಕು ಎನ್ನುವ ಭಾರತದ ಕನಸಿಗೆ ಹೋಲಿಕೆಯಾಗುವುದಿಲ್ಲ. ಭಾರತೀಯರದ್ದು ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದು ಅತಿಯಾದ ರಾಷ್ಟ್ರೀಯತೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಬರೆದುಕೊಂಡಿದೆ. ಗ್ಲೋಬಲ್ ಟೈಮ್ಸ್ ಪತ್ರಿಕೆ, ದೋಕ್ಲಾಂ ಗಡಿವಿಚಾರದಲ್ಲಿ ಭಾರತವನ್ನು ಟಾರ್ಗೆಟ್ ಮಾಡಿ ಸರಣಿ ಲೇಖನಗಳನ್ನು ಪ್ರಕಟಿಸಿತ್ತು.

ಕಳೆದ ಶನಿವಾರ (ಸೆ 23) ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಶೃಂಗಭೆಯಲ್ಲಿ ಪಾಕ್ ವಿರುದ್ದ ಅಕ್ಷರಸಃ ಹರಿಹಾಯ್ದಿದ್ದ ಸುಷ್ಮಾ, ನಾವು ವೈದರು, ಇಂಜಿನಿಯರ್ , ಐಐಟಿ, ಐಐಎಂಗಳನ್ನು ಸೃಷ್ಟಿಸುತ್ತಿದ್ದರೆ, ಪಾಕಿಸ್ತಾನ ಎಲ್ಇಟಿ ಮುಂತಾದ ಉಗ್ರ ಸಂಘಟನೆಗಳನ್ನು ಹುಟ್ಟುಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

ಭಾರತ ಮತ್ತು ಪಾಕಿಸ್ತಾನಕ್ಕೆ ಒಂದೇ ದಿನ ಸ್ವಾತಂತ್ರ್ಯ ಬಂದಿದ್ದು, ಇಂದು ಭಾರತೀಯರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ, ಪಾಕಿಸ್ತಾನ ಉಗ್ರ ಚಟುವಟಿಕೆಗೆ ಹೆಸರುವಾಸಿಯಾಗಿದೆ ಎಂದು ಸುಷ್ಮಾ ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕಿಸ್ತಾನವನ್ನು ಬೆಂಡೆತ್ತಿದ್ದರು.

English summary
Chinese Media, A Global Times editorial admitted that, there indeed is terrorism in Pakistan as it accused India of being bigoted towards Islamabad and suggested that Sushma Swaraj was very arrogant in her speech at the UN General Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X