ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಬೆನ್ನು ತಟ್ಟಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

|
Google Oneindia Kannada News

ನವದೆಹಲಿ, ಫೆಬ್ರವರಿ, 23: ಬಜೆಟ್ ಅಧಿವೇಶನ ಮಂಗಳವಾರ ಆರಂಭವಾಗಿದ್ದು ಸಂಸತ್ ಉಭಯ ಕಲಾಪಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಿದರು.

ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಶ್ಲಾಘಿಸಿದ ರಾಷ್ಟ್ರಪತಿ ಬಡತನವನ್ನು ತೊಡೆದು ಹಾಕಲು ಸಕಲರು ಸಿದ್ಧರಾಗಬೇಕು ಎಂದು ಹೇಳಿದರು. ಉದ್ಯೋಗ, ರೈತರ ಏಳಿಗೆ, ಬಡವರ ಜೀವನ ಸ್ಥಿತಿ ಸುಧಾರಣೆ ಸೇರಿದಂತೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ಒದಗಿಸುವ ಸಂಗತಿಯನ್ನು ಮುಖರ್ಜಿ ತಮ್ಮ ಭಾಷಣದ ಉದ್ದಕ್ಕೂ ಉಲ್ಲೇಖ ಮಾಡಿದರು.[ಪ್ರಣಬ್ ಗೆ ದೊರೆತ ರಾಜ ಮರ್ಯಾದೆಯನ್ನು ಕಣ್ತುಂಬಿಕೊಳ್ಳಿ]

Indian economy a haven of stability, says President Pranab Mukherjee

ಪ್ರಣಬ್ ಮುಖರ್ಜಿ ಭಾಷಣದ ಹೈಲೈಟ್ಸ್
* ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ ಕ್ರಮಗಳ ಸರಳೀಕರಣವಾಗಿದೆ. ಇದು ಸರ್ಕಾರದ ಸಾಧನೆ ಎಂದೇ ಹೇಳಬಹುದು.
* ಶೇ. 39 ರಷ್ಟು ಹೆಚ್ಚುವರಿ ವಿದೇಶಿ ಬಂಡವಾಳ ಹರಿದು ಬಂದಿದೆ.
* ವಿಶ್ವ ಬ್ಯಾಂಕ್ ನೀಡಿರುವ ವರದಿಯಂತೆ ಭಾರತ 12 ಸ್ಥಾನ ಮೇಲೆರಿದೆ.[ಕರ್ನಾಟಕದ 23 ಪೊಲೀಸರಿಗೆ ರಾಷ್ಟ್ರಪತಿ ಪದಕ]

* ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ನಿಜಕ್ಕೂ ಮೆಚ್ಚಲೇಬೇಕು.
* ಜಾಗತಿಕ ಅರ್ಥವ್ಯವಸ್ಥೆಗೆ ಹೋಲಿಕೆ ಮಾಡಿದರೆ ಭಾರತದ ಬೆಳವಣಿಗೆ ಅತ್ಯುತ್ತಮ ಮಟ್ಟದಲ್ಲಿದೆ.
* ಭಾರತದ ಆರ್ಥಿಕ ಅಭಿವೃದ್ಧಿ ದರ ಇತರೇ ಏಷ್ಯಾದ ದೇಶಗಳಿಗೆ ಹೋಲಿಕೆ ಮಾಡಿದರೆ ಉತ್ತಮವಾಗಿದೆ.
* ಸರ್ಕಾರ ಅನೇಕ ಸೇವೆಗಳನ್ನು ಆನ್ ಲೈನ್ ಮೂಲಕ ನಾಗರಿಕರಿಗೆ ನೀಡುತ್ತಿರುವುದು ಕ್ಷಿಪ್ರ ಬೆಳವಣಿಗೆಗೆ ಕಾರಣವಾಗಿದೆ.
*ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಮುದ್ರಾ, ಸ್ಕಿಲ್ ಇಂಡಿಯಾದಂತ ಕಾರ್ಯಕ್ರಮಗಳು ಜನರನ್ನು ತಲುಪಿದ್ದು ಅಭಿವೃದ್ಧಿಗೆ ಹೊಸ ಅರ್ಥ ನೀಡಿವೆ.
* ಅಧಿವೇಶನ ಸಕಾರಾತ್ಮಕ ಚರ್ಚೆಗೆ ವೇದಿಕೆಯಾಗಿ ಜನಪರ ಯೋಜನೆಗಳು ಮಂಡನೆಯಾಗುತ್ತದೆ ಎಂಬ ವಿಶ್ವಾಸವಿದೆ.

English summary
Describing India as "a haven of stability" in a turbulent global economy, President Pranab Mukherjee on Tuesday said the government has simplified procedures for approvals, repealed obsolete laws and put in place a non-adversarial tax regime to attract investments. Addressing the joint sitting of Parliament at the start of the Budget session, the President listed out achievements of the Modi government, saying India has jumped 12 places on the ease of doing ranking of the World Bank while foreign investment inflow has risen 39 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X