ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿನಿತ್ಯ 20,000 ಮಾಸ್ಕ್ ಉತ್ಪಾದಿಸಿದರೆ ಕೊರೊನಾದಿಂದ ಬಚಾವ್ ಆಗುತ್ತಾ ಭಾರತ?

|
Google Oneindia Kannada News

ನವದೆಹಲಿ, ಮಾರ್ಚ್.30: ಕೊರೊನಾ ವೈರಸ್ ಎಂಬ ಮಹಾಮಾರಿಯಿಂದ ಭಾರತವನ್ನು ರಕ್ಷಿಸಲು ವೈದ್ಯ ಸಂಕಲು ಹಗಲು-ರಾತ್ರಿ ಪರಿಶ್ರಮ ಪಡುತ್ತಿದೆ. ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಸೋಂಕಿನಿಂದ ಜನರನ್ನು ರಕ್ಷಿಸಲು ಸಾಂಕ್ರಾಮಿಕ ಪಿಡುಗನ್ನು ಅಡಗಿಸಲು ಔಷಧಿ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಕೊರೊನಾ ವೈರಸ್ ಕುರಿತು ಮಾರ್ಗಸೂಚಿಗಳನ್ನು ರೂಪಿಸುತ್ತಿದ್ದಾರೆ. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯುಳ್ಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವ ಭಾರತದಲ್ಲಿ ಸೋಂಕನ್ನು ಹರಡದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಮುಂದಿನ ವಾರದಿಂದ ಪ್ರತಿನಿತ್ಯ 20,000 ಎನ್-99 ಮಾಸ್ಕ್ ಗಳನ್ನು ಉತ್ಪಾದಿಸಲು ಆರಂಭಿಸುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸ್ಪಷ್ಟಪಡಿಸಿದೆ.

ದೇಶಕ್ಕೆ 3 ಕೋಟಿ 80 ಲಕ್ಷ ಮಾಸ್ಕ್ ಗಳು ಅತ್ಯವಶ್ಯಕ

ದೇಶಕ್ಕೆ 3 ಕೋಟಿ 80 ಲಕ್ಷ ಮಾಸ್ಕ್ ಗಳು ಅತ್ಯವಶ್ಯಕ

ಕೊರೊನಾ ವೈರಸ್ ಸೋಂಕಿನಿಂದ ಭಾರತದಲ್ಲಿ ನಿರ್ಮಾಣವಾಗಿರುವ ದುಸ್ಥಿತಿಯನ್ನು ಹತೋಟಿಗೆ ತರುವುದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಕನಿಷ್ಠ 3 ಕೋಟಿ 80 ಲಕ್ಷ ಮಾಸ್ಕ್ ಗಳು ಅತ್ಯವಶ್ಯವಾಗಿ ಬೇಕಾಗಿವೆ. ಇದರ ಜೊತೆಗೆ 60 ಲಕ್ಷ 20 ಸಾವಿರಕ್ಕೂ ಅಧಿಕ ವೈಯಕ್ತಿಕ ಸುರಕ್ಷತಾ ಸಾಮಗ್ರಿಗಳ ಅವಶ್ಯಕತೆಯಿದೆ ಎಂದು ಅಧ್ಯಯನದ ವರದಿಯೊಂದು ಸ್ಪಷ್ಟಪಡಿಸಿದೆ.

ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗೇ ಸಿಗುತ್ತಿಲ್ಲ ಮಾಸ್ಕ್

ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗೇ ಸಿಗುತ್ತಿಲ್ಲ ಮಾಸ್ಕ್

ಭಾರತದಲ್ಲಿ ಗಂಟೆ ಗಂಟೆಗೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಸುರಕ್ಷತಾ ಮಾಸ್ಕ್ ಗಳು ಸಿಗುತ್ತಿಲ್ಲ. ನೂರಾರು ಕಂಪನಿಗಳು ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದರೂ, ಅವುಗಳ ಅಭಾವವನ್ನು ನೀಗಿಸಲು ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ವೈದ್ಯಕೀಯ ಸಾಮಗ್ರಿ ಸಂಬಂಧ 319 ಕಂಪನಿ ಜೊತೆ ಒಪ್ಪಂದ

ವೈದ್ಯಕೀಯ ಸಾಮಗ್ರಿ ಸಂಬಂಧ 319 ಕಂಪನಿ ಜೊತೆ ಒಪ್ಪಂದ

ಕೊರೊನಾ ವೈರಸ್ ದೇಶದಲ್ಲಿ ಭೀತಿ ಹುಟ್ಟಿಸಿರುವಂತಾ ಸಂದರ್ಭದಲ್ಲಿ ಅಗತ್ಯವಾಗಿರುವ ವೆಂಟಿಲೇಟರ್, ಐಸಿಯು ಮಾನಿಟರ್, ಮಾಸ್ಕ್, ಟೆಸ್ಟಿಂಗ್ ಕಿಟ್ ಮತ್ತು ಸುರಕ್ಷತಾ ಸಾಮಗ್ರಿಗಳನ್ನು ತಯಾರಿಸುವ 730 ಕಂಪನಿಗಳನ್ನು ಸಂಪರ್ಕಿಸಲಾಗಿದೆ. ಈ ಪೈಕಿ 319 ಕಂಪನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಇನ್ವೆಸ್ಟ್ ಇಂಡಿಯಾ ತಿಳಿಸಿದೆ.

ದೇಶದಲ್ಲಿ ವಿವಿಧ ಕಂಪನಿಗಳಿಗೆ 90 ಲಕ್ಷ ಮಾಸ್ಕ್ ತಯಾರಿಕೆ

ದೇಶದಲ್ಲಿ ವಿವಿಧ ಕಂಪನಿಗಳಿಗೆ 90 ಲಕ್ಷ ಮಾಸ್ಕ್ ತಯಾರಿಕೆ

ಭಾರತದಲ್ಲಿ ವಿವಿಧ ಕಂಪನಿಗಳಿಂದ 90 ಲಕ್ಷ 10 ಸಾವಿರ ಮಾಸ್ಕ್ ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ ದೇಶಕ್ಕೆ ಇದೀಗ 3 ಕೋಟಿ 80 ಲಕ್ಷ ಮಾಸ್ಕ್ ಗಳ ಅಗತ್ಯವಿದೆ ಎಂದು ಇನ್ವೆಸ್ಟ್ ಇಂಡಿಯಾ ತನ್ನ ವರದಿಯಲ್ಲಿ ಅಂದಾಜಿಸಿದೆ. ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಏಳು ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕನ್ನು ಸ್ವಯಂಕೃತವಾಗಿ ನಿಯಂತ್ರಿಸಲಾಗಿದೆ.

1,000 ಗಡಿ ದಾಟಿತು ಕೊರೊನಾ ಸೋಂಕಿತರ ಸಂಖ್ಯೆ

1,000 ಗಡಿ ದಾಟಿತು ಕೊರೊನಾ ಸೋಂಕಿತರ ಸಂಖ್ಯೆ

ಭಾರತದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 1,000ದ ಗಡಿ ದಾಟಿದೆ. 1,071 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, ಇದುವರೆಗೂ 29 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು, 99 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. 943 ಜನರಿಗೆ ದೇಶದ ವಿವಿಧೆಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
Coronavirus: Indian DRDO Start Manufacturing 20,000 N-99 Masks Per-Day In Next Week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X