ಭಾರತ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ ಹ್ಯಾಕ್‌

Posted By:
Subscribe to Oneindia Kannada

ಭಾರತದ ರಕ್ಷಣಾ ಸಚಿವಾಲಯದ ವೆಬ್‌ಸೈಟ್ (mod.nic.in) ಹ್ಯಾಕ್ ಆಗಿದ್ದು, ವೆಬ್‌ಸೈಟ್ ತೆರೆದರೆ ಚೈನೀಸ್ ಅಕ್ಷರಗಳು ಕಾಣುತ್ತಿವೆ.

ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ ದಾಳಿಗೆ ತುತ್ತಾಗಿರುವುದು ಎಲ್ಲೆಡೆ ಆತಂಕ ಮೂಡಿಸಿದೆ. ಚೈನೀಸ್ ಅಕ್ಷರಗಳು ವೆಬ್‌ಸೈಟ್‌ನ ಪುಟದಲ್ಲಿ ಮೂಡಿರುವ ಕಾರಣ ಇದು ಚೈನೀಸ್ ಕೃತ್ಯ ಎಂದು ಅಂದಾಜಿಸಬಹುದಾಗಿದೆಯಾದರೂ ಅಧಿಕೃತ ಮಾಹಿತಿ ಇನ್ನೂ ಲಭ್ಯವಿಲ್ಲ.

Indian defence ministry website hacked

ವೆಬ್‌ಸೈಟ್ ಹ್ಯಾಕ್ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮಾಡಿದ್ದು, ವೆಬ್‌ಸೈಟ್ ಅನ್ನು ಆದಷ್ಟು ತ್ವರಿತವಾಗಿ ಪುನರ್‌ ಸ್ಥಾಪಿಸಲಾಗುತ್ತದೆ, ಈ ರೀತಿಯ ಘಟನೆ ಮರುಕಳಿಸದಂತೆ ಸಾಧ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದ ಎಂದಿದ್ದಾರೆ ಅವರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One of the secured website Indian defence ministry website is hacked by some one. website showing chinese characters on it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ