ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಸಿ ಹಸುವಿನ ಹಾಲಿನಲ್ಲಿ ಚಿನ್ನ ಇದೆಯಾ? ಏನಿದು ಹೊಸ ಚರ್ಚೆ

|
Google Oneindia Kannada News

ಕೊಲ್ಕತ್ತ, ನವೆಂಬರ್ 6: ದೇಸಿ ಹಸುವಿನ ಹಾಲಿನಲ್ಲಿ ಚಿನ್ನವಿದೆ ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ಅದಕ್ಕೂ ಮೊದಲು ಗೋಮಾಂಸ ತಿನ್ನುವವರು ನಾಯಿಮಾಂಸವನ್ನೂ ತಿನ್ನಿ ಎಂದು ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದರು.

ಗೋಮಾಂಸ ಮಾತ್ರ ಏಕೆ, ನಾಯಿ ಮಾಂಸವನ್ನೂ ತಿನ್ನಿ ಎಂದ ಬಿಜೆಪಿ ಅಧ್ಯಕ್ಷಗೋಮಾಂಸ ಮಾತ್ರ ಏಕೆ, ನಾಯಿ ಮಾಂಸವನ್ನೂ ತಿನ್ನಿ ಎಂದ ಬಿಜೆಪಿ ಅಧ್ಯಕ್ಷ

ಇದೀಗ ದೇಶಿ ಹಸುವಿನ ಹಾಲಿನಲ್ಲಿ ಚಿನ್ನವಿದೆ. ಹಾಗಾಗಿಯೇ ಹಾಲಿನ ಬಣ್ಣ ಹಳದಿಯಾಗಿರುತ್ತದೆ ಎಂದು ಹೇಳುವ ಮೂಲಕ ಹಾಸ್ಯಕ್ಕೆ ಗುರಿಯಾಗಿದ್ದಾರೆ. ಆದರೆ ಎಲ್ಲಾ ಹಸುಗಳು ಅಲ್ಲ ಭಾರತೀಯ ಹಸುಗಳು ಅದರಲ್ಲೂ ಸೂರ್ಯನ ಕಿರಣಗಳು ಯಾವ ಹಸುಗಳ ಮೇಲೆ ಹೆಚ್ಚು ಬೀಳುತ್ತದೆಯೋ ಅಂತಹ ಹಸುವಿನ ಹಾಲಿನಲ್ಲಿ ಬಂಗಾರವಿರುತ್ತದೆ ಎಂದು ಹೇಳಿದ್ದಾರೆ.

ದೇಸಿ ಹಸುಗಳ ಹಾಲಿನಲ್ಲಿ ಚಿನ್ನದ ಅಂಶವಿದೆ. ಹೀಗಾಗಿ ಅವುಗಳ ಹಾಲಿನ ಬಣ್ಣ ಕೂಡ ಚಿನ್ನದ ಬಣ್ಣದಲ್ಲಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ದೇಸಿ ಮತ್ತು ವಿದೇಶಿ ಹಸುಗಳ ನಡುವಿನ ವ್ಯತ್ಯಾಸವನ್ನು ವಿವರಿಸಿದ ಘೋಷ್, 'ದೇಸಿ ಹಸುಗಳು ಮಾತ್ರ ನಮ್ಮ ತಾಯಿಯಿದ್ದಂತೆಯೇ ಹೊರತು ವಿದೇಶಿ ಹಸುಗಳಲ್ಲ. ವಿದೇಶಿ ಪತ್ನಿಯರನ್ನು ಕರೆದುಕೊಂಡು ಬಂದ ಕೆಲವು ಜನರು ಈಗ ಸಂಕಷ್ಟದಲ್ಲಿದ್ದಾರೆ' ಎಂದು ಹೇಳಿದ್ದಾರೆ.

'ಗೋವು ನಮ್ಮ ತಾಯಿ , ದನದ ಹಾಲು ಕುಡಿದು ನಾವು ಬದುಕುತ್ತೇವೆ. ಯಾರಾದರೂ ನಮ್ಮ ತಾಯಿಯ ಜೊತೆ ಅನುಚಿತವಾಗಿ ವರ್ತಿಸಿದರೆ , ಅವರ ಜೊತೆ ನಾವು ಹೇಗೆ ವರ್ತಿಸುತ್ತೇವೋ, ಹಾಗೆ ವರ್ತಿಸಬೇಕು.

ಭಾರತದ ಪವಿತ್ರ ಭೂಮಿಯಲ್ಲಿ ದನಗಳನ್ನು ಕೊಂದು ಮಾಂಸ ಸೇವಿಸುವುದು ಅಪರಾಧ' ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಮುಖಂಡನ ಹೇಳಿಕೆಯೂ ಹಾಗೂ 2016ರಲ್ಲಿ ಬಂದಿದ್ದ ವರದಿಗೂ ಒಂದು ಸಾಮ್ಯತೆ ಇದೆ.

ಒಂದು ಲೀಟರ್ ಗೋ ಮೂತ್ರದಲ್ಲಿ 10 ಮಿಲಿ ಗ್ರಾಂ ಚಿನ್ನ

ಒಂದು ಲೀಟರ್ ಗೋ ಮೂತ್ರದಲ್ಲಿ 10 ಮಿಲಿ ಗ್ರಾಂ ಚಿನ್ನ

2016ರ ವರದಿಯೊಂದರಲ್ಲಿ ಒಂದು ಲೀಟರ್ ಗೋ ಮೂತ್ರದಲ್ಲಿ 10 ಮಿಲಿ ಗ್ರಾಂ ಚಿನ್ನವಿದೆ ಎಂದು ಸಂಶೋಧನೆಯೊಂದರಿಂದ ಸಾಬೀತಾಗಿತ್ತು.

ಗಿರ್ ಜಾತಿಯ ದನಗಳ ಮೂತ್ರದಲ್ಲಿ ಚಿನ್ನವಿದೆ

ಗಿರ್ ಜಾತಿಯ ದನಗಳ ಮೂತ್ರದಲ್ಲಿ ಚಿನ್ನವಿದೆ

ಜುನಾಗಢ ಕೃಷಿ ವಿವಿಯ ಆಹಾರ ಪರೀಕ್ಷಾ ಪ್ರಯೋಗಾಲಯದಲ್ಲಿ ನಡೆಸಿದ ಗಿರ್‌ ಜಾತಿಯ ದನಗಳ ಮೂತ್ರ ಪರೀಕ್ಷೆಯಲ್ಲಿ, ಒಂದು ಲೀಟರ್‌ ಮೂತ್ರದಲ್ಲಿ ಮೂರು ಮಿಲಿ ಗ್ರಾಂನಿಂದ 10 ಮಿಲಿ ಗ್ರಾಂವರೆಗೆ ಚಿನ್ನದ ಅಂಶಗಳಿರುವುದು ಕಂಡುಬಂದಿದೆ. ಈ ಅಮೂಲ್ಯ ಲೋಹ ಅಯಾನ್‌ ರೂಪದಲ್ಲಿದ್ದು, ನೀರಿನಲ್ಲಿ ಕರಗುವ ಚಿನ್ನದ ಲವಣದ ಸ್ವರೂಪದಲ್ಲಿದೆ ಎಂದು ಹೇಳಲಾಗಿತ್ತು.

400 ಹಸುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು

400 ಹಸುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು

ಸುಮಾರು 400ರಷ್ಟು ಗಿರ್‌ ತಳಿಯ ದನಗಳ ಮೂತ್ರಗಳ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಲಾಗಿದೆ ಎಂದು ವಿಶ್ವವಿದ್ಯಾಲಯ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಿ.ಎ. ಗೊಲಾಕಿಯಾ ತಿಳಿಸಿದ್ದಾರೆ. ಮೂತ್ರದಲ್ಲಿರುವ ಚಿನ್ನದ ಅಂಶ ಪತ್ತೆಗಾಗಿ 'ಗ್ಯಾಸ್‌ ಕ್ರೊಮ್ಯಾಟೋಗ್ರಫಿ-ಮಾಸ್‌ ಸ್ಪೆಕ್ಟೋಮೆಟ್ರಿ' ಪದ್ಧತಿಯನ್ನು ಬಳಸಲಾಗಿದೆ.

ರಾಸಾಯನಿಕ ಪ್ರಕ್ರಿಯೆಗಳು

ರಾಸಾಯನಿಕ ಪ್ರಕ್ರಿಯೆಗಳು

ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಗೋಮೂತ್ರದಿಂದ ಚಿನ್ನವನ್ನು ಬೇರ್ಪಡಿಸಿ , ಘನ ರೂಪಕ್ಕೆ ಪರಿವರ್ತಿಸಬಹುದು ಎಂದು ಗೋಲಾಕಿಯಾ ಹೇಳುತ್ತಾರೆ. ಗಿರ್‌ ಜಾತಿಯ ದನಗಳ ಮೂತ್ರದಲ್ಲಿ 5100 ಸಂಯುಕ್ತ ವಸ್ತುಗಳು ಪತ್ತೆಯಾಗಿದ್ದು, ಅವುಗಳ ಪೈಕಿ 388 ಔಷಧೀಯ ಶಕ್ತಿಯನ್ನು ಹೊಂದಿವೆ. ಇವುಗಳು ಹಲವಾರು ರೋಗಗಳನ್ನು ಗುಣಮುಖ ಮಾಡಬಲ್ಲವು.

English summary
Indian Cow milk contains gold. At a programme in Burdwan district, Ghosh said, "A feature of the Indian cow is that its milk contains gold. That's the reason the colour of the milk is yellowish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X