ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಭಾರತ-ಚೀನಿ ಸೈನಿಕರ ಕಿತ್ತಾಟ

|
Google Oneindia Kannada News

ನವದೆಹಲಿ, ಮೇ 10: ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಭಾರತ-ಚೀನಿ ಸೈನಿಕರು ಕೈ ಕೈ ಮಿಲಾಯಿಸಿದ ಘಟನೆ ನಡೆದಿರುವ ಬಗ್ಗೆ ವರದಿ ಬಂದಿದೆ. ಉತ್ತರ ಸಿಕ್ಕಿಂನ ಭಾರತ-ಚೀನಾ ಗಡಿಯುದ್ದಕ್ಕೂ ಭಾರತದ ಮತ್ತು ಚೀನಾದ ಸೈನಿಕರು ಮುಖಾಮುಖಿಯಾಗಿದ್ದಾರೆ. ಶನಿವಾರದಂದು ನಾಕು ಲಾ ಪಾಸ್ ಬಳಿ ನಡೆದ ಕಿತ್ತಾಟದಲ್ಲಿ ಹಲವರಿಗೆ ಗಾಯಗಳಾಗಿವೆ.

ಸಮುದ್ರಮಟ್ಟದಿಂದ 5,000 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿರುವ ಮುಗುತಾಂಗ್‌ಗಿಂತ ಮುಂದೆ ನಕು ಲಾ ಸೆಕ್ಟರ್ ಬಳಿ ಎರಡು ಕಡೆಯ ಸೈನಿಕರ ನಡುವೆ ಹಲ್ಲೆ ನಡೆದಿರುವುದನ್ನು ಹೇಳಲು ಇಚ್ಚಿಸದ ಸೇನೆಯ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Indian, Chinese troops clash near Naku La in Sikkim sector

ಸುಮಾರು 150 ಸೈನಿಕರು ಇದ್ದರು, ನಾಲ್ಕು ಭಾರತೀಯ ಸೈನಿಕರು ಮತ್ತು ಏಳು ಚೀನಿ ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಡಿಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಹೊಡೆದಾಡಿಕೊಂಡಿರುವುದು ಇದೇ ಮೊದಲಲ್ಲ. 2017 ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೋ ಸರೋವರದ ಬಳಿ ಪರಸ್ಪರ ಕಲ್ಲುಗಳನ್ನು ಎಸೆದು ಹೊಡೆದಾಡಿಕೊಂಡಿದ್ದರು.

English summary
Troops of India and China were involved in a fierce face-off and many of them sustained minor injuries in the clash near Naku La in the Sikkim sector along the Sino-Indo border on Saturday, official sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X