ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕು ಲಾದಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ

|
Google Oneindia Kannada News

ನವದೆಹಲಿ, ಜನವರಿ 25: ಭಾರತ ಮತ್ತು ಚೀನೀ ಪಡೆಗಳ ನಡುವೆ ಮತ್ತೊಮ್ಮೆ ದೈಹಿಕ ಸಂಘರ್ಷ ನಡೆದಿರುವುದು ತಡವಾಗಿ ವರದಿಯಾಗಿದೆ. ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಪ್ರಸ್ತುತ ಇರುವ ಸೇನಾ ಬಿಕ್ಕಟ್ಟಿನ ಸ್ಥಳದಿಂದ ಸಾವಿರಾರು ಕಿಮೀ ದೂರದಲ್ಲಿರುವ ಸಿಕ್ಕಿಂನ ನಕು ಲಾದಲ್ಲಿ ಈ ಘಟನೆ ನಡೆದಿದೆ.

ಮೂರು ದಿನಗಳ ಹಿಂದೆ ಭಾರತದ ಗಡಿ ಭಾಗದೊಳಗೆ ಚೀನೀ ಪಡೆಗಳು ಒಳನುಸುಳುವ ಪ್ರಯತ್ನದ ವೇಳೆ ಈ ಸಂಘರ್ಷ ನಡೆದಿದೆ. ಭಾರತದ ಪಡೆಗಳು ಈ ಒಳನುಸುಳುವ ಪ್ರಯತ್ನವನ್ನು ತಡೆದಿದ್ದು, ದೈಹಿಕ ಸಂಘರ್ಷದ ಕಾರಣ ಎರಡೂ ದೇಶಗಳ ಸೈನಿಕರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಗಡಿಯಲ್ಲಿನ ಪಡೆಗಳನ್ನು ವಾಪಸ್ ಕರೆಸಿಕೊಳ್ಳಿ: ಚೀನಾಕ್ಕೆ ಭಾರತ ಆಗ್ರಹಗಡಿಯಲ್ಲಿನ ಪಡೆಗಳನ್ನು ವಾಪಸ್ ಕರೆಸಿಕೊಳ್ಳಿ: ಚೀನಾಕ್ಕೆ ಭಾರತ ಆಗ್ರಹ

ಈ ಸಂಘರ್ಷದ ಸಂದರ್ಭದಲ್ಲಿ ಯಾವುದೇ ಬಂದೂಕು-ಗುಂಡುಗಳ ಬಳಕೆಯಾಗಿಲ್ಲ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್-ಮೇ ತಿಂಗಳಿನಿಂದ ಎಲ್‌ಎಸಿಯ ಪೂರ್ವ ಲಡಾಖಿನ ವಿವಿಧ ಪ್ರದೇಶಗಳಲ್ಲಿ ಬಿಕ್ಕಟ್ಟು ತಲೆದೋರಿದೆ. ಆದರೆ ಈ ಬಾರಿ ನಕು ಲಾ ದಲ್ಲಿ ಘರ್ಷಣೆ ಉಂಟಾಗಿದೆ.

Indian, Chinese Troops Clash At Naku La In Sikkim: Injuries Reported On Both Sides

56 ಇಂಚ್ ಎದೆಯ ವ್ಯಕ್ತಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ: ರಾಹುಲ್ ಗಾಂಧಿ 56 ಇಂಚ್ ಎದೆಯ ವ್ಯಕ್ತಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ: ರಾಹುಲ್ ಗಾಂಧಿ

ಭಾನುವಾರ ಭಾರತ ಮತ್ತು ಚೀನಾದ ಕಮಾಂಡರ್ ಮಟ್ಟದ ಒಂಬತ್ತನೇ ಸುತ್ತಿನ ಮಾತುಕತೆ ನಡೆದಿದೆ. ಅದಕ್ಕೂ ಮೊದಲು ಈ ಸಂಘರ್ಷ ಸಂಭವಿಸಿದೆ. ವಾಸ್ತವವಾಗಿ ನಕು ಲಾ, ಭಾರತ ಮತ್ತು ಚೀನಾ ನಡುವಿನ ಮೂಲ ಬಿಕ್ಕಟ್ಟಿನ ಪ್ರದೇಶಗಳಲ್ಲಿ ಒಂದಾಗಿದೆ. ಪ್ಯಾಂಗಾಂಗ್ ತ್ಸೊ, ಗಲ್ವಾನ್, ಗೊಗ್ರಾ, ಹಾಟ್ ಸ್ಪ್ರಿಂಗ್ಸ್ ಗಳಲ್ಲಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ತೀವ್ರವಾಗಿದೆ.

ಹಿಂದೂ ಮಹಾಸಾಗರದಲ್ಲಿ ಸಂಶೋಧನೆ ನೆಪದಲ್ಲಿ ಚೀನಾ ಹಡಗುಗಳು: ತಜ್ಞರ ಎಚ್ಚರಿಕೆಹಿಂದೂ ಮಹಾಸಾಗರದಲ್ಲಿ ಸಂಶೋಧನೆ ನೆಪದಲ್ಲಿ ಚೀನಾ ಹಡಗುಗಳು: ತಜ್ಞರ ಎಚ್ಚರಿಕೆ

ಕಳೆದ ವರ್ಷ ಜೂನ್ ತಿಂಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಗಲ್ವಾನ್ ಕಣಿವೆಯಲ್ಲಿ ಬಡಿಗೆ, ರಾಡುಗಳಿಂದ ಹೊಡೆದಾಡಿಕೊಂಡಿದ್ದರು. ಕಳೆದ ಐದು ವರ್ಷಗಳಲ್ಲಿಯೇ ಅತ್ಯಂತ ಭೀಕರ ಸಂಘರ್ಷ ಎನಿಸಿದ ಈ ಘಟನೆಯಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದರು. ಚೀನಾದ ಸೈನಿಕರ ಸಾವು ನೋವಿನ ಸಂಖ್ಯೆ ಬಹಿರಂಗವಾಗಿಲ್ಲ.

English summary
India and China troops have clashed at Naku La on North Sikkim border areas three days ago. Soldiers from both sides were injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X