ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತವಾಂಗ್ ಪ್ರದೇಶದಲ್ಲಿ ಭಾರತ-ಚೀನಾ ಪಡೆಗಳ ನಡುವೆ ಘರ್ಷಣೆ

|
Google Oneindia Kannada News

ಪೂರ್ವ ಲಡಾಖ್ ಬಳಿಕ ಚೀನಾ ಇದೀಗ ಅರುಣಾಚಲಪ್ರದೇಶದಲ್ಲಿ ತನ್ನ ಕ್ಯಾತೆ ಆರಂಭಿಸಿದೆ.
ಈಶಾನ್ಯ ಲಡಾಖ್ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸೇನಾ ಸಭೆ ನಡೆದ ಬಳಿಕ ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆ ಬಗೆಗಿನ ಮಾಹಿತಿ ಬಹಿರಂಗಗೊಂಡಿದೆ.

ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆ ವಿಷಯವಾಗಿ ಇನ್ನು 3-4 ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಚರ್ಚೆ ನಡೆಸಲಾಗುತ್ತದೆ.

ಭಾರತ-ಚೀನಾ ಗಡಿಯಲ್ಲಿ ತಲೆ ಎತ್ತಿದ PLA ಹೆಲಿಕಾಪ್ಟರ್ ನಿಲ್ದಾಣ! ಭಾರತ-ಚೀನಾ ಗಡಿಯಲ್ಲಿ ತಲೆ ಎತ್ತಿದ PLA ಹೆಲಿಕಾಪ್ಟರ್ ನಿಲ್ದಾಣ!

ಉಭಯ ಸೇನೆಗಳು ಲೈನ್ ಆಫ್ ಪರ್ಸೆಪ್ಷನ್ ವರೆಗೂ ಗಸ್ತು ಚಟುವಟಿಕೆಗಳನ್ನು ಹೊಂದಿರುತ್ತವೆ. ಮುಖಾಮುಖಿಯಾದಾಗ ಸ್ಥಾಪಿತ ಶಿಷ್ಟಾಚಾರಗಳ ಪ್ರಕಾರವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತದೆ.

Indian, Chinese Patrols Face-Off In Tawang Ahead Of Corps Commander Talks

ಈ ಭಾಗದ ತವಾಂಗ್‌ನ ಯಾಂಗ್ಸೆಯಲ್ಲಿ ಭಾರತ-ಚೀನಾ ಸೇನಾಪಡೆಗಳ ನಡುವೆ ಘರ್ಷಣೆ ಉಂಟಾಗಿದ್ದು ಈಗ ಬಹಿರಂಗಗೊಂಡಿದೆ.

ಸ್ಥಳೀಯ ಕಮಾಂಡರ್‌ಗಳ ನಡುವಿನ ಮಾತುಕತೆ ವೇಳೆ ಈ ಸಂಘರ್ಷದ ಪರಿಸ್ಥಿತಿ ತಿಳಿಯಾಗಿದ್ದು ಬಗೆಹರಿದಿದೆ ಎಂದು ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ಮಂದಿ ಅ.08 ರಂದು ಮಾಹಿತಿ ನೀಡಿದ್ದಾರೆ.

ಚೀನಾದ ಪಿಎಲ್ಎ ಸಿಬ್ಬಂದಿಗಳು ಭಾರತೀಯ ಪ್ರಾಂತ್ಯವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ ಭಾರತೀಯ ಸೇನಾ ಸಿಬ್ಬಂದಿಗಳು ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಾಗ ಈ ಸಂಘರ್ಷ ಉಂಟಾಗಿದೆ.

ಭಾರತ-ಚೀನಾ ಗಡಿಯನ್ನು ಔಪಚಾರಿಕವಾಗಿ ಗುರುತಿಸಲಾಗಿಲ್ಲ. ಆದ್ದರಿಂದ ಈ 2 ದೇಶಗಳ ನಡುವೆ LACಯ ಗ್ರಹಿಕೆಯಲ್ಲಿ ವ್ಯತ್ಯಾಸವಿದೆ. ಎರಡು ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ಪ್ರೋಟೋಕಾಲ್​ಗಳನ್ನು ಅನುಸರಿಸುವ ಮೂಲಕ ವಿಭಿನ್ನ ಗ್ರಹಿಕೆಗಳ ಈ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ಮತ್ತು ಚೀನಾ ಸೈನಿಕರ ಗಸ್ತು ಪಡೆಗಳು ಭೌತಿಕವಾಗಿ ಭೇಟಿಯಾದಗಲೆಲ್ಲಾ, ಎರಡೂ ಕಡೆಯಿಂದ ಒಪ್ಪಿಕೊಂಡ ಸ್ಥಾಪಿತ ಪ್ರೋಟೋಕಾಲ್​ಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತದೆ.

ಈ ಪ್ರದೇಶದಲ್ಲಿ ಚೀನಾದ ಆಕ್ರಮಣ ಪ್ರದರ್ಶನ ಹೊಸದೇನಲ್ಲ. 2016ರಲ್ಲಿ 200ಕ್ಕೂ ಹೆಚ್ಚು ಚೀನೀ ಸೈನ್ಯಗಳು ಯಾಂಗ್ಟ್ಸೆಯಲ್ಲಿ LACಯ ಭಾರತೀಯ ಭಾಗದಲ್ಲಿ ಅತಿಕ್ರಮಣ ಮಾಡಿದ್ದವು. ಆದರೆ ಕೆಲವೇ ಗಂಟೆಗಳಲ್ಲಿ ಚೀನೀ ಸೈನ್ಯಗಳು ವಾಪಸ್ ಹೋಗಿದ್ದವು.

ಭಾರತೀಯ ಸೇನೆ ಮತ್ತು ಚೀನೀ ಮಿಲಿಟರಿ ಪಡೆಗಳ ನಡುವೆ ಮತ್ತೊಮ್ಮೆ ಮುಖಾಮುಖಿ ಸಂಘರ್ಷ ನಡೆದಿದೆ. ಕಳೆದ ವಾರ ನಡೆದ ಈ ಸಂಘರ್ಷದಲ್ಲಿ ಭಾರತೀಯ ಸೈನ್ಯವು ಅರುಣಾಚಲ ಪ್ರದೇಶದ ಲೈನ್​ ಆಫ್ ಆಕ್ಚುವಲ್ ಕಂಟ್ರೋಲ್​​ ಬಳಿ ಸುಮಾರು 200ಕ್ಕೂ ಹೆಚ್ಚು ಮಂದಿ ಚೀನೀ ಸೈನಿಕರನ್ನು ತಡೆದಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಚೀನಾದ ಗಡಿಯ ಹತ್ತಿರ ವಾಡಿಕೆಯ ಗಸ್ತು ತಿರುಗುವಾಗ ಭಾರತ ಮತ್ತು ಚೀನೀ ಸೈನಿಕರ ನಡುವೆ ಮುಖಾಮುಖಿ ಸಂಭವಿಸಿದೆ ಎನ್ನಲಾಗಿದೆ. ಭಾರತೀಯ ಸೇನೆಯು ಸುಮಾರು 200 ಮಂದಿ ಚೀನೀ ಸೈನಿಕರನ್ನು ಗಡಿಯ ಸಮೀಪದಲ್ಲಿ ವಶಕ್ಕೆ ಪಡೆದಿದೆ.

ಕಳೆದ ವಾರ ಬಮ್​ ಲಾ ಮತ್ತು ಯಾಂಗ್ಟ್ಸೆ ಗಡಿರೇಖೆಯ ನಡುವೆ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್​ ಲೈನ್​ ಬಳಿ ಭಾರತ ಮತ್ತು ಚೀನಾ ಸೈನ್ಯದ ನಡುವೆ ಸಂಘರ್ಷ ನಡೆದಿತ್ತು. ಮೂಲಗಳ ಪ್ರಕಾರ, ಚೀನಿ ಸೈನಿಕರ ಗುಂಪು ಭಾರತದ ಕಡೆಗಿನ ಎಲ್​ಎಸಿ ಕಡೆಗೆ ನುಗ್ಗಲು ಯತ್ನಿಸಿದರು. ಆಗ ಭಾರತೀಯ ಸೈನಿಕರು ಕೆಲವು ಚೀನಿ ಸೈನಿಕರನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಪಿಎಲ್‌ಎ ಸಂಪೂರ್ಣ ಗಡಿಯನ್ನು ಸಕ್ರಿಯವಾಗಿಡಲು ಯೋಜಿಸಿದೆ, ಇದರಿಂದ ಅವರು ತಮ್ಮ ಹಕ್ಕುಗಳನ್ನು ಬಲಪಡಿಸಬಹುದು. ನಂತರ ಈ ಪ್ರದೇಶಗಳಿಗೆ ಹಕ್ಕು ಚಲಾಯಿಸಲು ಇದು ದೃಢ ಹಾದಿಯಾಗಿರಬಹುದು "ಎಂದು ಉತ್ತರ ಸೇನೆಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿಎಸ್ ಜಸ್ವಾಲ್ (ನಿವೃತ್ತ) ಹೇಳಿದರು.

ಕಳೆದ ವಾರ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಅವರು ಮಾತುಕತೆಗಳು ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಯೊಂದಿಗೆ ಮುಂದಿನ ಸುತ್ತಿನ ಮಿಲಿಟರಿ ಅಕ್ಟೋಬರ್ ಎರಡನೇ ವಾರದಲ್ಲಿ ನಡೆಯಬಹುದು ಎಂದು ಹೇಳಿದರು.

ಎಲ್‌ಎಸಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಪಿಎಲ್‌ಎಯೊಂದಿಗಿನ ದೊಡ್ಡ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬಹುದು ಎಂದು ಅವರು ಹೇಳಿದರು.

English summary
Ahead of the next round of Corps Commander level talks between India and China, which are supposed to take place in eastern Ladakh, there was a minor altercation between Indian and Chinese troops in the eastern sector of the India-China boundary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X