ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ777 ಗನ್ ಪಡೆಯಲು ಮುಂದಾದ ಭಾರತೀಯ ಸೇನೆ

|
Google Oneindia Kannada News

Recommended Video

Indian army will get M777 regiment made in India | Oneindia Kannada

ನವದೆಹಲಿ, ನವೆಂಬರ್ 14: ಭಾರತೀಯ ಸೇನೆಯು ಭಾರತವೇ ನಿರ್ಮಿಸಿರುವ ಎಂ777 ಗನ್‌ಗಳನ್ನು ಪಡೆಯಲು ಮುಂದಾಗಿದೆ.

ಭಾರತವು 2016ರ ನವೆಂಬರ್‌ನಲ್ಲಿ ಯುಎಸ್‌ನಿಂದ 145ಹೋವಿಟ್ಜರ್‌ಗಳಿಗೆ ಆದೇಶಿಸಿತ್ತು. ಮುಂದಿನ ವರ್ಷದ ಆರಂಭದಲ್ಲಿ ಹೋವಿಡ್ಜರ್ ಗಳನ್ನು ಸೈನ್ಯಕ್ಕೆ ತಲುಪಿಸುವ ಮೂಲಮ ಸೇನಾ ಬಲವನ್ನು ಶಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಾಯು ಸೇನೆ, ನೌಕಾ ಸೇನೆ ಮುಖ್ಯಸ್ಥರಿಗೆ ಝೆಡ್-ಪ್ಲಸ್ ಭದ್ರತೆಭಾರತೀಯ ವಾಯು ಸೇನೆ, ನೌಕಾ ಸೇನೆ ಮುಖ್ಯಸ್ಥರಿಗೆ ಝೆಡ್-ಪ್ಲಸ್ ಭದ್ರತೆ

ಒಪ್ಪಂದದ ಭಾಗವಾಗಿ ಎಂ777 ತಯಾರಕ ಬಿಎಇ ಸಿಸ್ಟಮ್ಸ್ 25 ರೆಡಿಬಿಲ್ಸ್ ಹೋವಿಟ್ಜರ್ ಗಳನ್ನು ಪೂರೈಸಲಿದೆ. ಉಳಿದ 120 ಬಂದೂಕುಗಳನ್ನು ಸ್ಥಳೀಯವಾಗಿ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

Indian Army Will Get M777 Regiment Made In India

ಸೈನ್ಯವು ತನ್ನ ಎಂ777ಗಳನ್ನು ಪೂರ್ವ ಅರುಣಾಚಲ ಪ್ರದೇಶದಲ್ಲಿ ನಿಯೋಜಿಸಲು ತಯಾರಿ ನಡೆಸುತ್ತಿದೆ. ಇದು 2430 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.

ಮೊದಲ ರೆಜೆಮೆಂಟ್ ಅನ್ನು ಹೆಚ್ಚಿಸುತ್ತಿರುವ 18 ಹೋವಿಟ್ಜರ್‌ಗಳಲ್ಲಿ 15 ಅನ್ನು ಬೆಎಇ ಸಿಸ್ಟಮ್ಸ್ ಮತ್ತು ಭಾರತೀಯ ಪಾಲುದಾರ ಮಹೀಂದ್ರಾ ಡಿಫೆನ್ಸ್ ಪೂರೈಸುತ್ತಿದೆ. 2021ರ ಅಂತ್ಯದ ವೇಳೆಗೆ ಸೈನ್ಯವು ಎಲ್ಲಾ 145 ಹೋವಿಟ್ಜರ್‌ಗಳನ್ನು ಪಡೆಯುವ ಸಾಧ್ಯತೆ ಇದೆ.

ಪರ್ವತ ಭೂ ಪ್ರದೇಶದಲ್ಲಿ ಹೊಂದಿಕೊಳ್ಳುವ ನಿಯೋಜನೆಗಾಗಿ ಬಂದೂಕುಗಳನ್ನು ವಿನ್ಯಾಸಗೊಳಿಸಿರುವುದರಿಂದ ಎಂ777 ಗಳು ಸೈನ್ಯದ ಎಫ್‌ಎಆರ್‌ಪಿ ಯೋಜನೆಯ ಪ್ರಮುಖ ಭಾಗವಾಗಿದೆ ಎಂದು ಹೇಳಿದ್ದಾರೆ.

ಮುಂದಿನ 8ರಿಂದ 10 ವರ್ಷಗಳಲ್ಲಿ ಸುಮಾರು 169 ಫಿರಂಗಿ ರೆಜಿಮೆಂಟ್‌ಗಳನ್ನು ಸಜ್ಜುಗೊಳಿಸಲು ಈ ಯೋಜನೆ ಪ್ರಯತ್ನಿಸುತ್ತಿದೆ.

English summary
Indian Army Will Get M777 Regiment Made In India. The Indian Army’s first regiment of ultra-light howitzers is expected to consist of 15 ready-built M777s supplied by the US, and three locally built guns that will represent the country’s Make in India push for military hardware
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X