ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ, ಚೀನಾ ಹ್ಯಾಕರ್‌ಗಳಿಂದ ನಿಮ್ಮ ವಾಟ್ಸ್‌ಆಪ್ ಖಾತೆ ರಕ್ಷಿಸಿಕೊಳ್ಳಿ

By Manjunatha
|
Google Oneindia Kannada News

ಭಾರತೀಯರ ವಾಟ್ಸ್‌ಆಪ್‌ ಮೇಲೆ ಚೀನಾದ ಹ್ಯಾಕರ್‌ಗಳು ಕಣ್ಣು ಹಾಕಿದ್ದಾರಂತೆ, ನಮಗೇ ಗೊತ್ತಿಲ್ಲದೆ ನಮ್ಮ ವಾಟ್ಸ್‌ಆಪ್ ಖಾತೆ ಮೇಲೆ ದಾಳಿ ಮಾಡಿ ಮೊಬೈಲ್‌ನಲ್ಲಿನ ಎಲ್ಲ ಮಾಹಿತಿಯನ್ನೂ ಹೀರಿ ಶೇಖರಿಸಿಬಿಡುವ ಸಾಧ್ಯತೆ ಇದೆ. ಹೀಗೆಂದು ಎಚ್ಚರಿಕೆ ನೀಡಿರುವುದು ಸ್ವತಃ ಭಾರತೀಯ ಸೇನೆ.

ಹೌದು, ಭಾರತೀಯ ಸೇನೆಯ ಸಾರ್ವಜನಿಕ ಸಂಪರ್ಕ ಹೆಚ್ಚುವರಿ ಪ್ರಧಾನ ನಿರ್ದೇಶನಾಲಯದ (ಎಡಿಜಿಪಿಐ) ಯು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ವಾಟ್ಸ್‌ಆಪ್‌ ಮೇಲೆ ಚೀನಾದ ಹ್ಯಾಕರ್‌ಗಳು ಕಣ್ಣು ಹಾಕಿರುವ ಬಗ್ಗೆ ಎಚ್ಚರಿಕೆ ಸಂದೇಶ ಮತ್ತು ವಿಡಿಯೋ ಒಂದನ್ನು ಪ್ರಕಟಿಸಿದೆ.

ಗಡಿ ನಿಯಂತ್ರಣ ರೇಖೆ ಬಳಿ ಐವರು ನಾಗರಿಕರ ದುರ್ಮರಣಗಡಿ ನಿಯಂತ್ರಣ ರೇಖೆ ಬಳಿ ಐವರು ನಾಗರಿಕರ ದುರ್ಮರಣ

ವಿಡಿಯೋದಲ್ಲಿ ಹ್ಯಾಕರ್‌ಗಳ ದಾಳಿಯಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆಯೂ ತಿಳಿಸಲಾಗಿದೆ. ಸಾಮಾನ್ಯವಾಗಿ ವಾಟ್ಸ್‌ಆಪ್‌ ಗ್ರೂಪ್‌ಗಳ ಮೂಲಕ ನಮ್ಮ ವಾಟ್ಸ್‌ಆಪ್ ಖಾತೆ ಹ್ಯಾಕ್ ಮಾಡುವ ಸಾಧ್ಯತೆ ಇದೆಯಂತೆ. ಹಾಗಾಗಿ ತಾವು ಸದಸ್ಯರಾಗಿರುವ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಯಾವುದಾದರೂ ಚೀನಾದ ಕಂಟ್ರಿ ಕೋಡ್ +86 ನಿಂದ ಪ್ರಾರಂಭವಾಗಿರುವ ಸಂಖ್ಯೆ ಇದೆಯೇ ಚೆಕ್ ಮಾಡಿಕೊಳ್ಳಿ.

Indian Army warns of cyber attack by china hackers on whatsapp

ಇಷ್ಟೆ ಅಲ್ಲ ಗ್ರೂಪ್‌ನಲ್ಲಿರುವ ಎಲ್ಲಾ ಸದಸ್ಯರು ತಮ್ಮ ಹೆಸರಿನಿಂದಲೇ ತಮ್ಮ ವಾಟ್ಸ್‌ಆಪ್‌ ಖಾತೆ ಬಳಸುತ್ತಿದ್ದಾರೆಯೇ ಅಥವಾ ಬೇರೆ ಹೆಸರಿನಿಂದ ಬಳಸುತ್ತಿದ್ದಾರೆಯೇ ಪರಿಶೀಲಿಸಿ. ಯಾರಾದರೂ ಫೇಕ್ ಹೆಸರು, ಅಥವಾ ಚೈನೀಸ್ ಹೆಸರು ಬಳಸಿದ್ದಲ್ಲಿ ಕೂಡಲೇ ಅಡ್ಮಿನ್‌ಗೆ ತಿಳಿಸಿ ಅವರನ್ನು ಗ್ರೂಪ್‌ನಿಂದ ಹೊರ ಹಾಕಲು ಹೇಳಿ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನೀವು ಗ್ರೂಪ್‌ನಿಂದ ಎಕ್ಸಿಟ್ ಆಗುವಾಗ ಅಡ್ಮಿನ್ ಗಮನಕ್ಕೆ ತನ್ನಿ, ಮೊಬೈಲ್ ಬದಲಾಯಿಸುವಾಗಲೂ ಹಾಗೆಯೇ ಮಾಡಿ, ಹಾಗೂ ಯಾವುದೇ ಅಪರಿಚಿತ ವಾಟ್ಸ್‌ಗ್ರೂಪ್‌ಗೆ ಸೇರಿಕೊಳ್ಳಬೇಡಿ, ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಲಾದ ಗ್ರೂಪ್‌ನಲ್ಲಿ ಮಾತ್ರ ಸದಸ್ಯರಾಗಿ.

ಇಷ್ಟೆಲ್ಲಾ ಸೂಚನೆಗಳನ್ನು ಭಾರತೀಯ ಸೇನೆಯು ನಿಡಿದ್ದು, ಆಧುನಿಕ ಯುಗದ ಭಯೋತ್ಪಾದನೆಯಾದ ಸೈಬರ್ ದಾಳಿಯ ಬಗ್ಗೆ ಜಾಗೃತರಾಗಿರಿ ಮತ್ತು ಸುರಕ್ಷಿತರಾಗಿರಿ ಎಂಬ ಸಂದೇಶ ನೀಡಿದೆ.

English summary
Indian Army warns that China hackers may attack on Indians whatsapp accounts. Army uploads a message video on twitter and says Indians should be alert and safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X