• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ಗಡಿ ಕಣ್ಗಾವಲಿಗಾಗಿ ಭಾರತ ಸೇನೆ ಸೇರಲಿವೆ ಇಸ್ರೇಲ್, ಅಮೆರಿಕದ ಡ್ರೋನ್‌ಗಳು

|

ನವದೆಹಲಿ, ನವೆಂಬರ್ 26: ಚೀನಾ ಗಡಿಯಲ್ಲಿ ಕಣ್ಗಾವಲಿಡಲು ಭಾರತೀಯ ಸೇನೆಗೆ ಇಸ್ರೇಲ್ ಹಾಗೂ ಅಮೆರಿಕದಿಂದ ಡ್ರೋನ್‌ಗಳು ಶೀಘ್ರವೇ ಬಂದು ಸೇರಲಿವೆ.

ಇಸ್ರೇಲ್‌ನಿಂದ ಹೆರಾನ್ ಹಾಗೂ ಅಮೆರಿಕದಿಂದ ಮಿನಿ ಡ್ರೋನ್‌ಗಳು ಸೇರ್ಪಡೆಯಾಗಲಿದ್ದು, ಭಾರತೀಯ ಸೇನೆಗೆ ಮತ್ತಷ್ಟು ಬಲ ಬಂದಂತಾಗಲಿದೆ.

ಕೆಂಪು ಕೋಟೆಗೆ ಕಾವಲಿದ್ದ ಆ್ಯಂಟಿ ಡ್ರೋನ್ ಸಿಸ್ಟಮ್: ಪ್ರಮುಖ ಸಂಗತಿಗಳುಕೆಂಪು ಕೋಟೆಗೆ ಕಾವಲಿದ್ದ ಆ್ಯಂಟಿ ಡ್ರೋನ್ ಸಿಸ್ಟಮ್: ಪ್ರಮುಖ ಸಂಗತಿಗಳು

ಪೂರ್ವ ಲಡಾಖೆ ಸೇರಿದಂತೆ ಚೀನಾದ ಗಡಿಯಲ್ಲಿ ಕಣ್ಗಾವಲಿಡಲಿದೆ. ಡಿಸೆಂಬರ್ ವೇಳೆಗೆ ಡ್ರೋನ್‌ಗಳು ಬರಲಿವೆ. ಹೆರಾನ್ ಡ್ರೋನ್‌ಗಳನ್ನು ಲಡಾಖ್‌ ಸೆಕ್ಟರ್‌ನಲ್ಲಿ ಅಳವಡಿಸಲಾಗುತ್ತದೆ.

ಗಡಿಯಲ್ಲಿ ಚೀನಾದ ನಡುವೆ ಕಲಹ ಏರ್ಪಟ್ಟಿದ್ದಕ್ಕಾಗಿ ಯುದ್ಧೋಪಕರಣಗಳ ಖರೀದಿಗಾಗಿ ಸರ್ಕಾರವು 500 ಕೋಟಿ ರೂ. ಮೀಸಲಿಟ್ಟಿದೆ.

ಪೂರ್ವ ಲಡಾಖ್ ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಡಲು ಭಾರತೀಯ ಸೇನೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಧೆ(ಡಿಆರ್ಡಿಒ) ನಿರ್ಮಾಣದ ಭಾರತ್ ಡ್ರೋನ್ ಗಳನ್ನು ಬಳಸಿಕೊಳ್ಳುತ್ತಿದೆ.

ಗಡಿಯಲ್ಲಿ ಚೀನಾ ಸೇನೆ ತಂಟೆ ಮಾಡುತ್ತಿರುವುದರಿಂದ ವಿವಾದಿತ ಪ್ರದೇಶಗಳಲ್ಲಿ ನಿಖರವಾದ ಕಣ್ಗಾವಲು ನಡೆಸಲು ಭಾರತೀಯ ಸೇನೆಗೆ ಡ್ರೋನ್ ಗಳ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಡಿಆರ್ಡಿಒ ನಿರ್ಮಿಸಿದ್ದ ಡ್ರೋನ್ ಗಳಿಗೆ ಭಾರತ್ ಎಂದು ಹೆಸರಿಡಲಾಗಿದ್ದು ಅವುಗಳನ್ನು ಸೇನೆಗೆ ಹಸ್ತಾಂತರಿಸಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ವಿಶ್ವದ ಅತ್ಯಂತ ಚುರುಕುಬುದ್ಧಿಯ ಮತ್ತು ಹಗುರ ಕಣ್ಗಾವಲು ಡ್ರೋನ್ ಗಳ ಪಟ್ಟಿಗೆ ಭಾರತ್ ಸರಣಿಯ ಡ್ರೋನ್ ಗಳನ್ನು ಸೇರಿಸಬಹುದಾಗಿದೆ. ಈ ಭಾರತ್ ಡ್ರೋನ್ ಸಣ್ಣ ಹಾಗೂ ಶಕ್ತಿಯುತವಾದ ಡ್ರೋನ್ ಆಗಿದ್ದು ಸ್ಥಳದಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸಬಲ್ಲದು.

ಮಿತ್ರರು ಹಾಗೂ ವೈರಿಗಳನ್ನು ಪತ್ತೆ ಹಚ್ಚಲು ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ಈ ಡ್ರೋನ್ ಕಾರ್ಯ ನಿರ್ವಹಿಸುತ್ತದೆ.

English summary
In a major boost to its capabilities , the indian army is soon going to get Israeli Heron and American mini drones for upgrading its surveillance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X