ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ನಿಮಿಷಕ್ಕೆ 240 ರಾಕೆಟ್ ಬಾಂಬ್ ಹಾರಿಸಿದ ಭಾರತೀಯ ಸೇನೆಯ ಬಿಎಂ-21

|
Google Oneindia Kannada News

ನವದೆಹಲಿ, ಜೂನ್ 29: ಶತ್ರುಗಳ ಎದೆನಡುಗಿಸುವ ಆಯುಧವೊಂದರ ಪರೀಕ್ಷೆಯನ್ನು ಭಾರತೀಯ ಭೂ ಸೇನೆ ಇತ್ತೀಚೆಗಷ್ಟೆ ನಡೆಸಿ ಅದರ ವಿಡಿಯೋ ಬಿಡುಗಡೆ ಮಾಡಿದೆ.

ಬಿಎಂ-21 ಗ್ರಾಡ್ ಬ್ಯಾಟರಿ ಎಂಬ ಅತ್ಯಾಧುನಿಕ ರಾಕೆಟ್ ಬಾಂಬ್ ಲಾಂಚರ್ ಇದಾಗಿದ್ದು, ಅತ್ಯಂತ ಶಕ್ತಿ ಸಾಮರ್ಥ್ಯ ಮತ್ತು ನಿಖರತೆಯನ್ನು ಹೊಂದಿರುವ ಆಯುಧ ಇದಾಗಿದೆ.

ಇತ್ತೀಚೆಗಷ್ಟೆ ಸೇನೆಯು ಇದನ್ನು ನಾಸಿಕ್‌ನ ಡೊಲಾಲಿ ಎಂಬಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಕೇವಲ ಒಂದು ನಿಮಿಷಯದಲ್ಲಿ ಬರೋಬ್ಬರಿ 240 ರಾಕೆಟ್‌ ಬಾಂಬ್‌ಗಳನ್ನು ಅದು ಪುಂಖಾನುಪುಂಖವಾಗಿ ನಿಖರವಾದ ಗುರಿಗೆ ಎಸೆಯಲು ಯಶಸ್ವಿಯಾಗಿದೆ. ಆರು ಬಿಎಂ-21 ಗ್ರಾಡ್ ಬ್ಯಾಟರಿ ಲಾಂಚರ್‌ಗಳನ್ನು ಪರೀಕ್ಷಿಸಲಾಗಿದೆ.

ಕಳೆದ 3 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸತ್ತ ಉಗ್ರರೆಷ್ಟು?ಹುತಾತ್ಮರಾದ ಸೈನಿಕರೆಷ್ಟು?ಕಳೆದ 3 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸತ್ತ ಉಗ್ರರೆಷ್ಟು?ಹುತಾತ್ಮರಾದ ಸೈನಿಕರೆಷ್ಟು?

ಪ್ರಯೋಗದ ವಿಡಿಯೋವಂತೂ ಶತ್ರುಗಳ ಎದೆ ನಡುಗಿಸುವಂತಿದೆ. ಸಾಲಾಗಿ ನಿಂತ ವಾಹನಗಳ ಬೆನ್ನಿನಿಂದ ಕಣ್ಣು ರೆಪ್ಪೆ ಮಿಟಿಸುವಷ್ಟರಲ್ಲಿ ಒಂದರ ಹಿಂದೆ ಒಂದು ಬೆಂಕಿ ಉಂಡೆಗಳು ಭಾರಿ ವೇಗದಲ್ಲಿ ಆಗಸಕ್ಕೆ ಚಿಮ್ಮಿ ಗುರಿ ತಲುಪಿ ಭಾರಿ ಸ್ಫೋಟವನ್ನು ಮಾಡುತ್ತಿವೆ.

45 ಕಿ.ಮೀ ದೂರದ ಗುರಿ ಹೊಡೆದುರುಳಿಸಬುದು

ಬಿಎಂ-21 ಗ್ರಾಡ್ ರಷ್ಯಾ ನಿರ್ಮಿತ ಯುದ್ಧೋಪಕರಣವಾಗಿದ್ದು, ಇದು 20 ರಿಂದ 45 ಕಿ.ಮೀಟರ್ ದೂರದ ಗುರಿಯನ್ನು ಸಹ ನಾಶ ಮಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ.

ಗುರಿ ತಪ್ಪಿಯೇ ಇಲ್ಲ, ಬಾಲಕೋಟ್ ದಾಳಿಯ ರೋಚಕ ಕ್ಷಣಗಳನ್ನು ಬಿಚ್ಚಿಟ್ಟ ಪೈಲಟ್ಗುರಿ ತಪ್ಪಿಯೇ ಇಲ್ಲ, ಬಾಲಕೋಟ್ ದಾಳಿಯ ರೋಚಕ ಕ್ಷಣಗಳನ್ನು ಬಿಚ್ಚಿಟ್ಟ ಪೈಲಟ್

12.71 ಟನ್ ತೂಕದ ಲಾಂಚರ್‌

12.71 ಟನ್ ತೂಕದ ಲಾಂಚರ್‌

ಇದರ ತೂಕ 12.71 ಟನ್ ಆಗಿದ್ದು, ಮೂರು ಜನ ಸೈನಿಕರು ಕೂರುವ ಮತ್ತು ನಿಯಂತ್ರಿಸಲು ಸ್ಥಳಾವಕಾಶ ಒದಗಿಸಲಾಗಿದೆ. ಈ ರಾಕೆಟ್ ಬಾಂಬ್ ಲಾಂಚರ್‌ ಅನ್ನು ರಷ್ಯಾ, ಇರಾನ್, ಕತಾರ್, ವಿಯೆಟ್ನಾಂ ಮತ್ತು ಇನ್ನೂ ಕೆಲವು ದೇಶಗಳು ಬಳಸುತ್ತಿವೆ.

ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ ಸೇನೆ

ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ ಸೇನೆ

ಈ ಪ್ರಯೋಗವು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ಎಂದೇ ಹೇಳಲಾಗುತ್ತಿದೆ. ಈ ಪ್ರಯೋಗವಂತೂ ಪಾಕಿಸ್ತಾನಕ್ಕೆ ಚಿಂತೆಯ ಗೆರೆಗಳನ್ನು ಮೂಡಿಸಿದೆ. ಇದಾಗಲೇ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಏರ್‌ ಸ್ಟ್ರೈಕ್‌ನಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಈ ಪ್ರಯೋಗವು ಇನ್ನಷ್ಟು ತಲೆನೋವು ತಂದಿದೆ.

ಅನಂತ್ ನಾಗ್ ಸ್ಫೋಟದಲ್ಲಿ ಬಳಸಿದ್ದು ಮೇಡ್ ಇನ್ ಚೀನಾ ಸ್ಟೀಲ್ ಬುಲೆಟ್! ಅನಂತ್ ನಾಗ್ ಸ್ಫೋಟದಲ್ಲಿ ಬಳಸಿದ್ದು ಮೇಡ್ ಇನ್ ಚೀನಾ ಸ್ಟೀಲ್ ಬುಲೆಟ್!

ರಷ್ಯಾದಿಂದ ಖರೀದಿಸಿರುವ ಉಪಕರಣ

ರಷ್ಯಾದಿಂದ ಖರೀದಿಸಿರುವ ಉಪಕರಣ

ಭಾರತವು ರಷ್ಯಾದಿಂದ ಶಸ್ತಾಸ್ತ್ರ ಖರೀದಿಸುವ ಅತಿ ದೊಡ್ಡ ದೇಶವಾಗಿದೆ. ಅಮೆರಿಕದ ವಿರೋಧದ ನಡುವೆಯೂ ಭಾರತವು ರಷ್ಯಾದಿಂದ ಈ ಲಾಂಚರ್‌ಗಳನ್ನು ಖರೀದಿಸಿದೆ.

English summary
Indian Army tested BM 21 grad battery rocket launcher in Deolali and its a successful test. BM 21 launchers fire 240 rockets in just 60 seconds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X