• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ವ ಲಡಾಖ್‌ನಲ್ಲಿ ಯುದ್ಧಕ್ಕೆ ಭಾರತೀಯ ಸೇನೆ ಸರ್ವ ಸನ್ನದ್ಧ

|

ನವದೆಹಲಿ, ಸೆಪ್ಟೆಂಬರ್ 16: ಪೂರ್ವ ಲಡಾಖ್‌ನಲ್ಲಿ ಯುದ್ಧದ ಅನಿವಾರ್ಯತೆ ಎದುರಾದರೆ ಸೇನೆ ಯುದ್ಧಕ್ಕೂ ಸನ್ನದ್ಧವಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

ಚಳಿಗಾಲದಲ್ಲಿ ಯುದ್ಧ ನಡೆಸುವಷ್ಟು ಸಾಮರ್ಥ್ಯ ಭಾರತೀಯ ಸೇನೆಗಿಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಅಭಿಪ್ರಾಯಪಟ್ಟಿತ್ತು. ಇದಕ್ಕೆ ತಿರುಗೇಟು ನೀಡಿರುವ ಭಾರತೀಯ ಸೇನೆ, ಚೀನಾ ಪಡೆಯ ಯೋಧರು ಬಹುತೇಕ ನಗರ ಪ್ರದೇಶದವರಾಗಿದ್ದು ಯುದ್ಧ ಭೂಮಿಯ ಕಷ್ಟಕರ ಸನ್ನಿವೇಶ ಹಾಗೂ ದೀರ್ಘಕಾಲದ ಹೋರಾಟ ಅವರಿಗೆ ಅಭ್ಯಾಸವಿಲ್ಲ ಎಂದು ಹೇಳಿದೆ.

ಚೀನಾದಿಂದ ಗಡಿ ನುಸುಳುವಿಕೆ ಪ್ರಯತ್ನ ನಡೆದಿಲ್ಲ ಎಂದ ಕೇಂದ್ರ ಸರ್ಕಾರ

ಭಾರತೀಯ ಸೇನೆ ಪೂರ್ಣ ಪ್ರಮಾಣದ ಯುದ್ಧ ಸಿದ್ಧತೆ ಮಾಡಿಕೊಂಡು ಸಜ್ಜಾಗಿದೆ. ಯಾವ ಸಂದರ್ಭದಲ್ಲೂ ಚೀನಾ ಸೇನೆ ಯುದ್ಧಕ್ಕೆ ಮುಂದಾದರೆ ಅದಕ್ಕೆ ಭಾರತೀಯ ಸೇನೆ ಸಹ ಹೋರಾಡಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಪೂರ್ವ ಲಡಾಖ್ ವಲಯದಲ್ಲಿ ಚಳಿಗಾಲದಲ್ಲೂ ಭಾರತೀಯ ಸೇನೆ ಚೀನಾಗಿಂತಲೂ ಸಮರ್ಥವಾಗಿ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗುವಷ್ಟು ಸಾಮರ್ಥ್ಯವಿದೆ ಎಂದು ಸೇನೆ ಗುಡುಗಿದೆ.

ಇದೇ ವೇಳೆ ಭಾರತೀಯ ಸೇನೆಯ ಉತ್ತರ ಕಮಾಂಡ್ ನ ಅಧಿಕಾರಿಗಳು ಭಾರತ ಎಂದಿಗೂ ಶಾಂತಿಪ್ರಿಯ ರಾಷ್ಟ್ರ. ನೆರೆಯ ರಾಷ್ಟ್ರಗಳ ಜೊತೆ ಸೌಹಾರ್ದಯುತ ಸಂಬಂಧ ಹೊಂದಿರಲು ಬಯಸುತ್ತದೆ ಎಂದು ಹೇಳಿದ್ದಾರೆ.

English summary
The Indian Army is fully prepared to fight a full-fledged war even in winters in eastern Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X