ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ದಿನಾಚರಣೆ: ನಾಗರಿಕರಿಗಾಗಿ ಭಾರತೀಯ ಸೇನೆಯಿಂದ ವಿವಿಧ ಸ್ಪರ್ಧೆ

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಸೇನಾ ದಿನದ ಆಚರಣೆಯ ಸಲುವಾಗಿ ಭಾರತೀಯ ಸೇನೆಯು ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ.

2019ರ ಜನವರಿ 15ರಂದು ಭಾರತೀಯ ಸೇನೆಯು ಸೇನಾ ದಿನವನ್ನು ಆಚರಿಸುತ್ತಿದೆ. 'ದೇಶ ಮೊದಲು' ಪರಿಕಲ್ಪನೆಗೆ ನಾವು ಬದ್ಧರಾಗಿರುವುದನ್ನು ಆಚರಣೆ ಸೂಚಿಸುತ್ತದೆ.

ಆರ್ಮ್ಡ್ ಫೋರ್ಸಸ್ ಫ್ಲ್ಯಾಗ್‌ ಡೇ: ಯೋಧರಿಗಾಗಿ ನೀವೇನು ಮಾಡ್ತೀರಾ? ಆರ್ಮ್ಡ್ ಫೋರ್ಸಸ್ ಫ್ಲ್ಯಾಗ್‌ ಡೇ: ಯೋಧರಿಗಾಗಿ ನೀವೇನು ಮಾಡ್ತೀರಾ?

ಭಾರತೀಯ ಸೇನೆಯು ತನ್ನ ದಿನದ ಸಂಭ್ರಮದಲ್ಲಿ ಜನಸಾಮಾನ್ಯರನ್ನು ಸಹ ಒಳಗೊಳ್ಳುವ ಉದ್ದೇಶದಿಂದ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ.

Indian Army is conducting online competitions Army day celebration nation first

ಆನ್‌ಲೈನ್ ಪೈಂಟಿಂಗ್, ಛಾಯಾಗ್ರಹಣ, ಘೋಷವಾಕ್ಯ ಮತ್ತು ವಿಡಿಯೋ ಸ್ಪರ್ಧೆಗಳು ನಡೆಯಲಿವೆ. ಈ ಸ್ಪರ್ಧೆಗಳು ಈಗಾಗಲೇ ಆರಂಭವಾಗಿದ್ದು, ಜನವರಿ 9ರವರೆಗೂ ನಡೆಯಲಿದೆ.

ಯಾರು ಭಾಗವಹಿಸಬಹುದು?: ಭಾರತದ ನಾಗರಿಕರಾದ ಯಾರು ಬೇಕಾದರೂ ಸ್ಪರ್ಧಿಗಳಾಗಬಹುದು.

ಸ್ಪರ್ಧೆಗಳು: ವಿಡಿಯೋ ಮೇಕಿಂಗ್, ಚಿತ್ರಕಲೆ, ಘೋಷಣೆ ಬರವಣಿಗೆ. ಭಾರತೀಯ ಸೇನೆಯ 'ದೇಶ ಮೊದಲು' ಥೀಮ್‌ ನಲ್ಲಿ ಸ್ಪರ್ಧೆಗಳು ನಡೆಯಲಿವೆ.

ಹೇಗೆ ಅರ್ಜಿ ಸಲ್ಲಿಸುವುದು?: ನಿಮ್ಮ ಫೇಸ್‌ಬುಕ್ ಖಾತೆಯಿಂದ ಲಾಗಿನ್ ಆಗಿ, ನಿಮ್ಮ ಫೇಸ್‌ಬುಕ್ ಪುಟದಲ್ಲಿ ನಿಮ್ಮ ಪ್ರವೇಶದ (ಛಾಯಾಚಿತ್ರ/ಪೈಂಟಿಂಗ್/ವಿಡಿಯೊ/ಘೋಷಣೆ) ಬರೆದು ಎಡಿಜಿಪಿಐ-ಭಾರತೀಯ ಸೇನೆಯ ಫೇಸ್‌ಬುಕ್ ಪುಟವನ್ನು ಟ್ಯಾಗ್ ಮಾಡಿ.

ಅತ್ಯುತ್ತಮ ಪ್ರವೇಶವು ಎಡಿಜಿಪಿಐ-ಭಾರತೀಯ ಸೇನೆಯ ಫೇಸ್‌ಬುಕ್ ಪುಟದಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಪ್ರವೇಶಾರ್ಥಿಗಳು ತಮ್ಮ ಪ್ರವೇಶದ ಸಾಫ್ಟ್‌ ಕಾಪಿಗಳನ್ನು ಹೆಸರು, ವಿಳಾಸ, ವಯಸ್ಸು, ಜನ್ಮದಿನಾಂಕ ಮತ್ತು ಮೂಲನಿವಾಸದ ಪ್ರಮಾಣಪತ್ರದ ದಾಖಲೆಗಳನ್ನು [email protected] ವಿಳಾಸಕ್ಕೆ ಕಳುಹಿಸಬೇಕು.

ಕೊನೆಯ ದಿನಾಂಕ: 2019 ಜನವರಿ 9. ವಿವರಗಳಿಗೆ ಭಾರತೀಯ ಸೇನೆಯ ವೆಬ್‌ಸೈಟ್ ಅಥವಾ indianarmy.adgpi ಫೇಸ್‌ಬುಕ್ ಪುಟವನ್ನು ಸಂಪರ್ಕಿಸಬಹುದು.

English summary
Indian Army is conducting various competition for Army Day celebration for the citizens of India. participants can post painting, photograhy, slogan and video with the theme of Nation First before Jan 9 on Facebook page.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X