ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಸೇನೆಗೆ 1 ಲಕ್ಷ ಡೋಸ್ ಕೊರೊನಾ ಲಸಿಕೆ ಉಡುಗೊರೆ ಕೊಟ್ಟ ಭಾರತ

|
Google Oneindia Kannada News

ನವದೆಹಲಿ, ಮಾರ್ಚ್ 29: ನೆರೆರಾಷ್ಟ್ರಗಳೊಂದಿಗೆ ಸಹಭಾಗಿತ್ವದ ಭಾಗವಾಗಿ ಭಾರತೀಯ ಸೇನೆಯು ಭಾರತ ಅಭಿವೃದ್ಧಿಪಡಿಸಿದ ಒಂದು ಲಕ್ಷ ಡೋಸ್ ಕೊರೊನಾ ಲಸಿಕೆಗಳನ್ನು ನೇಪಾಳ ಸೈನ್ಯಕ್ಕೆ ಸೋಮವಾರ ಉಡುಗೊರೆಯಾಗಿ ನೀಡಿದೆ.

ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನಾಧಿಕಾರಿಗಳು ನೇಪಾಳ ಸೇನೆಗೆ ಲಸಿಕೆಗಳನ್ನು ಹಸ್ತಾಂತರಿಸಿದ್ದಾಗಿ ಕಠ್ಮಂಡುವಿನ ಭಾರತೀಯ ರಾಯಭಾರಿ ಟ್ವೀಟ್ ಮಾಡಿದ್ದಾರೆ.

Indian Army Gifted 1 Lakh Doses Of Corona Vaccines To Nepal Army

ಕೊರೊನಾ ಎರಡನೇ ಅಲೆ ಭೀಕರತೆ; ತಜ್ಞರು ಕೊಟ್ಟ ದೊಡ್ಡ ಎಚ್ಚರಿಕೆಕೊರೊನಾ ಎರಡನೇ ಅಲೆ ಭೀಕರತೆ; ತಜ್ಞರು ಕೊಟ್ಟ ದೊಡ್ಡ ಎಚ್ಚರಿಕೆ

ಈ ಮುನ್ನವೂ ಭಾರತ ಒಂದು ಮಿಲಿಯನ್ ಮೇಡ್ ಇನ್ ಇಂಡಿಯಾ ಡೋಸ್ ಕೊರೊನಾ ಲಸಿಕೆಗಳನ್ನು ತುರ್ತು ಬಳಕೆಗೆಂದು ನೇಪಾಳಕ್ಕೆ ನೀಡಿತ್ತು. ಇದೀಗ ಸೇನೆಗೆ ಮತ್ತೆ ಒಂದು ಲಕ್ಷ ಡೋಸ್ ಲಸಿಕೆ ನೀಡಿದ್ದು, ಇದರಿಂದ ಭಾರತ- ನೇಪಾಳ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳ್ಳುವ ನಿರೀಕ್ಷೆ ವ್ಯಕ್ತಗೊಂಡಿದೆ. ಭಾರತದ ಸೇನೆ ನೇಪಾಳದ ಸೇನೆಗೆ ಉಡುಗೊರೆಯಾಗಿ ಲಸಿಕೆ ನೀಡಿರುವ ಕುರಿತು ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್‌ನಲ್ಲಿ ಫೋಟೊ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದೆ.

ನೇಪಾಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದೆ. ಚೀನಾ ಕೂಡ ನೇಪಾಳಕ್ಕೆ ಎಂಟು ಲಕ್ಷ ಡೋಸ್ ಲಸಿಕೆಗಳನ್ನು ನೀಡಿದೆ. ಪ್ರಸ್ತುತ ನೇಪಾಳದಲ್ಲಿ 276,839 ಕೊರೊನಾ ಪ್ರಕರಣಗಳಿದ್ದು, ಇದುವರೆಗೂ ಸೋಂಕಿನಿಂದ 3,027 ಮಂದಿ ಸಾವನ್ನಪ್ಪಿದ್ದಾರೆ.

English summary
Indian Army gifted one lakh doses of India-made corona vaccines to the Nepal Army on monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X