ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಗಡಿಯಲ್ಲಿ ಕಣ್ಗಾವಲಿಗೆ ಭಾರತದ ಸ್ವದೇಶಿ ಡ್ರೋನ್

|
Google Oneindia Kannada News

ನವದೆಹಲಿ, ಜುಲೈ 21: ಚೀನಾ ಗಡಿಯಲ್ಲಿ ಕಣ್ಗಾವಲಿಡಲು ಸ್ವದೇಶಿ ಡ್ರೋನ್ 'ಭಾರತ್' ಸಜ್ಜಾಗಿದೆ.

ಪೂರ್ವ ಲಡಾಖ್ ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಡಲು ಭಾರತೀಯ ಸೇನೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಧೆ(ಡಿಆರ್ಡಿಒ) ನಿರ್ಮಾಣದ ಭಾರತ್ ಡ್ರೋನ್ ಗಳನ್ನು ಬಳಸಿಕೊಳ್ಳುತ್ತಿದೆ.

ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲುಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲು

ವಿಶ್ವದ ಅತ್ಯಂತ ಚುರುಕುಬುದ್ಧಿಯ ಮತ್ತು ಹಗುರ ಕಣ್ಗಾವಲು ಡ್ರೋನ್ ಗಳ ಪಟ್ಟಿಗೆ ಭಾರತ್ ಸರಣಿಯ ಡ್ರೋನ್ ಗಳನ್ನು ಸೇರಿಸಬಹುದಾಗಿದೆ.

Indian Army Gets Bharath Drones For Surveillance Along China Border

ಈ ಭಾರತ್ ಡ್ರೋನ್ ಸಣ್ಣ ಹಾಗೂ ಶಕ್ತಿಯುತವಾದ ಡ್ರೋನ್ ಆಗಿದ್ದು ಸ್ಥಳದಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸಬಲ್ಲದು. ಮಿತ್ರರು ಹಾಗೂ ವೈರಿಗಳನ್ನು ಪತ್ತೆ ಹಚ್ಚಲು ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ಈ ಡ್ರೋನ್ ಕಾರ್ಯ ನಿರ್ವಹಿಸುತ್ತದೆ.

ಗಡಿಯಲ್ಲಿ ಚೀನಾ ಸೇನೆ ತಂಟೆ ಮಾಡುತ್ತಿರುವುದರಿಂದ ವಿವಾದಿತ ಪ್ರದೇಶಗಳಲ್ಲಿ ನಿಖರವಾದ ಕಣ್ಗಾವಲು ನಡೆಸಲು ಭಾರತೀಯ ಸೇನೆಗೆ ಡ್ರೋನ್ ಗಳ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಡಿಆರ್ಡಿಒ ನಿರ್ಮಿಸಿದ್ದ ಡ್ರೋನ್ ಗಳಿಗೆ ಭಾರತ್ ಎಂದು ಹೆಸರಿಡಲಾಗಿದ್ದು ಅವುಗಳನ್ನು ಸೇನೆಗೆ ಹಸ್ತಾಂತರಿಸಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಭಾರತ್ ಡ್ರೋನ್ ಅತ್ಯಂತ ಶೀತ ವಾತಾವರಣದಲ್ಲೂ ಕಾರ್ಯನಿರ್ವಹಿಸುತ್ತದೆ. ನೈಜ ಸಮಯದ ವಿಡಿಯೋ ಚಿತ್ರೀಕರಣ ಒದಗಿಸುತ್ತದೆ. ರಾತ್ರಿವೇಳೆಯೂ ಕಾರ್ಯಚರಿಸುವ ಸಾಮರ್ಥ್ಯ ಹೊಂದಿದೆ. ದಟ್ಟ ಕಾನನದಲ್ಲಿ ಅಡಗಿರುವವರನ್ನೂ ಪತ್ತೆ ಮಾಡಬಲ್ಲದಾಗಿದೆ.

English summary
Amid Ongoing Boundary dispute between India And China , DRDO has provided its indigenously developed drone named Bharat To Indian Army for Carrying out accurate Surveillance in high altitude areas and mountainous terrain along the LAC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X