ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಲಡಾಖ್‌ನಲ್ಲಿ ಚೀನಾ ಸೈನಿಕನ ಬಂಧನ

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಲಡಾಖ್‌ನ ಡೆಮ್ಚೊಕ್ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಚೀನಾದ ಪಿಎಲ್‌ಎ ಸೇನೆಯ ಸೈನಿಕನೊಬ್ಬನನ್ನು ಭಾರತೀಯ ಸೇನೆ ಬಂಧಿಸಿದೆ. ಆತ ಪ್ರಸ್ತುತ ಸೇನೆಯ ವಶದಲ್ಲಿದ್ದಾನೆ. ಚೀನೀ ಸೈನಿಕ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ಗುಮಾನಿಯೊಂದಿಗೆ ತನಿಖೆ ನಡೆಸಲಾಗುತ್ತಿದೆ.

ಶಾಂಗ್ಸಿ ಪ್ರದೇಶದವನಾದ ಸೈನಿಕನ ಬಳಿ ಚೀನಾದ ನಾಗರಿಕ ಮತ್ತು ಸೇನಾ ದಾಖಲೆಗಳಿದ್ದವು. ಶಸ್ತ್ರಸಜ್ಜಿತ ಸೈನಿಕ ಕಾರ್ಪೊರಲ್ ಶ್ರೇಣಿಯವನಾಗಿದ್ದು, ಆತನ ಹೆಸರು ವಾಂಗ್ ಯಾ ಲಾಂಗ್ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ. ಡೆಮ್ಚೊಕ್ ಪ್ರದೇಶದಲ್ಲಿ ಓಡಾಡುತ್ತಿದ್ದಾಗ ಆತನನ್ನು ಸೇನೆ ಸೆರೆಹಿಡಿದಿದೆ. ಆತನ ಬಳಿ ಪತ್ತೆಯಾದ ನಾಗರಿಕ ಹಾಗೂ ಸೇನಾ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

'ಚೀನಾದ ಸೈನಿಕನನ್ನು ಭದ್ರತಾ ಪಡೆಗಳು ಲಡಾಖ್‌ನ ಚುಮಾರ್- ಡೆಮ್ಚೊಕ್ ಪ್ರದೇಶದ ಬಳಿ ಬಂಧಿಸಿವೆ. ಆತ ಪ್ರಮಾದವಶಾತ್ ಭಾರತದ ಗಡಿಯೊಳಗೆ ಬಂದಿರಬಹುದು. ಉಭಯ ದೇಶಗಳ ನಡುವಿನ ಶಿಷ್ಟಾಚಾರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆತನನ್ನು ಚೀನಾದ ಪಡೆಗಳಿಗೆ ವಾಪಸ್ ಒಪ್ಪಿಸಲಾಗುವುದು' ಎಂದು ಸೇನೆಯ ಮೂಲಗಳು ತಿಳಿಸಿವೆ.

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಚೀನೀ ಸೈನಿಕನ ಬಂಧನ ಕುತೂಹಲ ಮೂಡಿಸಿದೆ. ಈ ಘಟನೆ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

Indian Army Captures A Chinese PLA Soldier In Demchok Area, Ladakh

ಸೇನಾ ಬಿಕ್ಕಟ್ಟಿನ ಮಧ್ಯೆ ಇದು ಮಹತ್ವದ ಬೆಳವಣಿಗೆಯಾಗಿದೆ. ಭಾರತದ ಪ್ರದೇಶದೊಳಗೆ ನುಗ್ಗಿ ಅತಿಕ್ರಮಣ ನಡೆಸಲು ಚೀನಾ ಸೈನಿಕರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಭಾರತೀಯ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡುತ್ತಿವೆ. ಗಾಲ್ವಾನ್ ಕಣಿವೆಯಲ್ಲಿ ಆಯುಧಗಳಿಂದ ಎರಡೂ ದೇಶಗಳ ಸೈನಿಕರು ಬಡಿದಾಡಿಕೊಂಡ ಘಟನೆ ಬಳಿಕ ಸೇನಾ ಪಡೆಗಳ ಮುಖಾಮುಖಿಯಾದರೂ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ.

English summary
Indian troops in border have captured a Chinese PLA soldier in Demchok are of Ladakh on Monday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X