ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವ ಲಡಾಖ್: ಹಿಮಪಾತದ ನಡುವೆಯೂ ರೊಟೇಷನ್ ಪದ್ಧತಿಯಲ್ಲಿ ಸೈನಿಕರ ಪಹರೆ

|
Google Oneindia Kannada News

ನವದೆಹಲಿ, ನವೆಂಬರ್ 03: ಇದೀಗ ಚಳಿಗಾಲ ಆರಂಭವಾಗಿದೆ. ಪೂರ್ವ ಲಡಾಖ್‌ನಲ್ಲಿ ರಕ್ತಹೆಪ್ಪುಗಟ್ಟುವ ಸ್ಥಿತಿಯಲ್ಲಿದ್ದರೂ ಭಾರತೀಯ ಸೈನಿಕರು ಎದೆಗುಂದದೆ ರೊಟೇಷನ್ ಪದ್ಧತಿಯಲ್ಲಿ ಪಹರೆ ತಿರುಗುತ್ತಿದ್ದಾರೆ.

ಇದರ ಜೊತೆಗೆ ಅತಿ ಜೋರಾಗಿ ಬೀಸುವ ಶೀತಗಾಳಿ ಸೈನಿಕರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಇದರ ಜೊತೆ ಹಿಮಪಾತದ ಭೀತಿ ಬೇರೆ. ಈಗಾಗಲೇ ಲಡಾಖ್ ನಲ್ಲಿ ಉಷ್ಣಾಂಶ ಮೈನಸ್ 20 ಡಿಗ್ರಿಗೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯಲಿದೆ.

ಹೀಗಾಗಿ ಸೈನಿಕರ ರಕ್ಷಣೆ ಮತ್ತು ಗಡಿ ನಿರ್ವಹಣೆ ಹಿನ್ನಲೆಯಲ್ಲಿ ಸೇನೆ ಈ ರೊಟೇಷನ್ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ಧರಿಸಿದೆ.

ಭಾರತೀಯ ಸೇನೆಯಲ್ಲಿ ಶೀಘ್ರ 5 ಸೇನಾ ಥಿಯೇಟರ್ ಕಮಾಂಡ್ ಶುರು ಭಾರತೀಯ ಸೇನೆಯಲ್ಲಿ ಶೀಘ್ರ 5 ಸೇನಾ ಥಿಯೇಟರ್ ಕಮಾಂಡ್ ಶುರು

ಸೇನೆಯ ಒಂದು ಭಾಗ ಈಗಾಗಲೇ ಲಡಾಖ್ ಗಡಿಯಲ್ಲಿ ಸೇನೆಗೆ ನಿಯೋಜನೆಗೊಂಡಿದ್ದು, ರೊಟೇಷನ್ ಪದ್ಧತಿಯ ಆಧಾರದ ಮೇರೆಗೆ ಸೈನಿಕರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ವೈದ್ಯರಿಂದ ಕಾರ್ಯ ನಿರ್ವಹಣೆ

ವೈದ್ಯರಿಂದ ಕಾರ್ಯ ನಿರ್ವಹಣೆ

ಇದರ ಜೊತೆಗೆ ಇಲ್ಲಿ ವೈದ್ಯರು ಕೂಡ ಕಾರ್ಯ ನಿರ್ವಹಿಸಲಿದ್ದು, ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರ ಆರೋಗ್ಯ ರಕ್ಷಣೆಗಾಗಿ ಇಲ್ಲಿ ವೈದ್ಯರ ತಂಡವೊಂದು ಸದಾ ಸರ್ವ ಸನ್ನದ್ಧ ಸ್ಥಿತಿಯಲ್ಲಿರುತ್ತದೆ. ಸಿಯಾಚಿನ್ ಲಾಜಿಸ್ಟಿಕ್ಸ್ ಯಂತ್ರೋಪಕರಣಗಳು 1984 ರಿಂದ ಅಸ್ತಿತ್ವದಲ್ಲಿವೆ ಮತ್ತು ಪಡಿತರ ಪೂರೈಕೆ, ಮದ್ದುಗುಂಡು ಮತ್ತು ವಿಶೇಷವಾಗಿ ಅತೀ ಎತ್ತರದ ಕಣಿವೆಗಳಲ್ಲಿ ಧರಿಸುವ ಬಟ್ಟೆಗಳನ್ನು ಖರೀದಿಸುವ ಬಗ್ಗೆ ನಾವು ಸಾಕಷ್ಟು ಮಾಹಿತಿ ಹೊಂದಿದ್ದೇವೆ.

90 ದಿನಗಳ ಕಾಲ ಪಾಳಿಯಲ್ಲಿ ಕೆಲಸ

90 ದಿನಗಳ ಕಾಲ ಪಾಳಿಯಲ್ಲಿ ಕೆಲಸ

ಲಢಾಖ್ ನಲ್ಲಿ ಓರ್ವ ಸೈನಿಕ 90 ದಿನಗಳ ಕಾಲ ಪಾಳಿಯಲ್ಲಿ ಕೆಲಸ ಮಾಡಲಿದ್ದು, 90 ದಿನಗಳ ಬಳಿಕ ಬೇರೆ ಪ್ರದೇಶಕ್ಕೆ ನಿಯೊಜನೆಗೊಳ್ಳುತ್ತಾರೆ. ಈ 90 ದಿನಗಳ ಅವಧಿಯಲ್ಲಿ ಸೈನಿಕರ ಪ್ರಯಾಣದ ಅವಧಿ ಕೂಡ ಸೇರಿರುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಹೆಚ್ಚುವರಿ ವಸ್ತುಗಳ ಸಂಗ್ರಹಣೆ

ಹೆಚ್ಚುವರಿ ವಸ್ತುಗಳ ಸಂಗ್ರಹಣೆ

ಇದಲ್ಲದೆ, ಪ್ರತಿ ಕಾರ್ಯಾಚರಣಾ ಸ್ಥಳದಲ್ಲಿ ಕನಿಷ್ಠ ಒಂದು ವಾರದ ಅವಶ್ಯಕತೆಗಾಗಿ ಹೆಚ್ಚುವರಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಪ್ರತಿ ಅವಶ್ಯಕತೆಯ ವಸ್ತುಗಳನ್ನು ಗರಿಷ್ಠ ಬಳಕೆ ಮಾಡಲಾಗುತ್ತಿದೆ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಗತ್ಯ ವಸ್ತುಗಳ ಸರಬರಾಜು ಕಷ್ಟ

ಅಗತ್ಯ ವಸ್ತುಗಳ ಸರಬರಾಜು ಕಷ್ಟ

ಆದರೆ ಲಡಾಖ್ ನಂತಹ ಕಠಿಣ ಕಣಿವೆ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಸರಬರಾಜು ಕೂಡ ಸವಾಲಿನ ಕೆಲಸವಾಗಿದ್ದು, ಮಂಜಿನಿಂದ ಮುಚ್ಚಿಹೋಗಿರುವ ಮಾರ್ಗಗಳ ನಡುವೆಯೇ ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಕೆಲಸ ನಿರ್ವಹಿಸಬೇಕಾಗುತ್ತದೆ. ಈಗಾಗಲೇ ಅಮೆರಿಕದಿಂದ 15000 ವಿಶೇಷ ಬಟ್ಟೆಗಳನ್ನು ಮತ್ತು ಪರ್ವತಾರೋಹಣ ಸಾಧನಗಳನ್ನು ತರಿಸಿಕೊಳ್ಳಲಾಗಿದೆ.

English summary
Indian Army soldiers manning the stand-off frontline in eastern Ladakh have started their rotational duty hours to optimise operational deployment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X