ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಗಡಿಯಲ್ಲಿ ಎಚ್ಚರಿಕೆಯಿಂದಿರಲು ಕೇಂದ್ರ ಗೃಹ ಸಚಿವಾಲಯ ಸೂಚನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 03: ನೇಪಾಳ ಗಡಿಯಲ್ಲಿ ಎಚ್ಚರಿಕೆಯಿಂದಿದ್ದು, ಬಿಗಿ ಭದ್ರತೆ ಕಾಪಾಡುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ಗಡಿ ವಾಸ್ತವ ರೇಖೆ(ಎಲ್ ಎಸಿ)ಯುದ್ಧಕ್ಕೂ ಚೀನಾ ಸೇನೆಯ ನಿಲುಗಡೆಯಿಂದ ಉದ್ವಿಗ್ನ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗಡಿಭಾಗದಲ್ಲಿರುವ ಎಲ್ಲಾ ಅರೆ ಸೇನಾಪಡೆಯನ್ನು ವಿಶೇಷ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಸಿಕ್ಕಿಂ ಮೂರು ಜಂಕ್ಷನ್ ಪ್ರದೇಶ ಅಂದರೆ ಇಲ್ಲಿ ಭಾರತ, ಚೀನಾ ಮತ್ತು ಟಿಬೆಟ್ ನ ಗಡಿಗಳು ಸಂಧಿಸುವ ಸ್ಥಳ ಬಹಳ ಮುಖ್ಯವಾದದ್ದಾಗಿದೆ. ಡೊಕ್ಲಮ್ ನ ದಕ್ಷಿಣ ಭಾಗದಲ್ಲಿ ಈ ಪ್ರದೇಶವಿದ್ದು ಇಲ್ಲಿಯೇ 2017ರಲ್ಲಿ ಭಾರತ ಮತ್ತು ಚೀನಾ ದೇಶಗಳ ಸೇನೆಗಳು ದೀರ್ಘ ಕಾಲ ಸಂಘರ್ಷ ನಡೆಸಿದ್ದವು.

Indian Army At Nepal Border Told To Be Extra Alert

ಭಾರತ-ನೇಪಾಳ ಗಡಿ ಭಾಗದಲ್ಲಿ, ಉತ್ತರಾಖಂಡ್ ಮತ್ತು ಸಿಕ್ಕಿಂ ನ ಮೂರು ದೇಶಗಳ ಗಡಿ ಪ್ರದೇಶ ಸಂಧಿಸುವ ಜಾಗದಲ್ಲಿ ಚೀನಾ ತನ್ನ ಪ್ರಭಾವ ಬಳಸಿಕೊಂಡು ಭಾರತದ ಗಡಿಯೊಳಗೆ ನುಗ್ಗಿ ತೊಂದರೆ ಉಂಟುಮಾಡಬಹುದು ಎಂಬ ಸಂಶಯದಿಂದ ಅರೆ ಸೇನಾಪಡೆಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಗೃಹ ಸಚಿವಾಲಯ ಸೇನೆಗೆ ಸೂಚನೆ ನೀಡಿದೆ.

ಈ ಪ್ರದೇಶಗಳಲ್ಲಿ ಕೆಲ ಭಾಗಗಳಲ್ಲಿ ಭದ್ರತಾ ಪಡೆಯ ನಿಯೋಜನೆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಗಡಿ ಭಾಗಗಳಲ್ಲಿ ಚೀನಾ ಸೇನೆ ನುಗ್ಗಿ ತೊಂದರೆ ನೀಡಬಹುದಾದ ಪ್ರದೇಶಗಳ ಬಗ್ಗೆ ಗುಪ್ತಚರ ಇಲಾಖೆ ಕೂಡ ಸಶಸ್ತ್ರ ಸೀಮಾ ಬಲ(ಎಸ್ಎಸ್ ಬಿ) ಮತ್ತು ಇಂಡೊ-ಟಿಬೆಟ್ ಗಡಿ ಪೊಲೀಸ್(ಐಟಿಬಿಪಿ)ಯೊಂದಿಗೆ ಮಾಹಿತಿ ಹಂಚಿಕೊಂಡಿದೆ.

English summary
All paramilitary forces securing the borders have been asked to remain extra alert amid tension along the LAC, sources in the Union Ministry of Home Affairs (MHA) said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X