ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ವಾಯುಪಡೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಬಲ

|
Google Oneindia Kannada News

ಅರಿಜೋನಾ, ಮೇ 11: ಭಾರತದ ವಾಯುಪಡೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಸೇರ್ಪಡೆಗೊಂಡಿದ್ದು, ವಾಯುಪಡೆಯು ತನ್ನ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅಮೆರಿಕಾದ ಅರಿಜೋನಾದಲ್ಲಿ ನಿರ್ಮಾಣವಾದ ಮೊದಲ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಅನ್ನು ಭಾರತದ ವಾಯುಪಡೆಯು ಅಮೆರಿಕದ ನಿರ್ಮಾಣ ಕೇಂದ್ರದಿಂದ ತನ್ನ ಸುಪರ್ದಿಗೆ ಪಡೆದುಕೊಂಡಿತು.

ಏರ್ ಮಾರ್ಷಲ್ ಎ.ಎಸ್.ಬುಟೋಲಾ ಅವರು ಮೊದಲ ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಪಡೆಯ ಪರವಾಗಿ ಪಡೆದುಕೊಂಡರು. ಅಮೆರಿಕದ ಸರ್ಕಾರದ ಪ್ರತಿನಿಧಿಗಳು ಮೊದಲ ಹೆಲಿಕಾಪ್ಟರ್ ಅನ್ನು ಭಾರತಕ್ಕೆ ಹಸ್ತಾಂತರಿಸಿದರು.

Indian airforce gets Apache gaurdian attack helicopter

ಈ ಎಎಚ್‌-64 ಇ ಹೆಲಿಕಾಫ್ಟರ್ ಭಾರತೀಯ ವಾಯುಪಡೆ ಸೇರಿರುವುದು ಭಾರತೀಯ ಸೇನೆಯ ಬಲ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಪರ್ವತ ಪ್ರದೇಶಗಳಲ್ಲಿ, ಪ್ರತಿಕೂಲ ಹವಾಮಾನದಲ್ಲಿಯೂ ಸಹ ಇವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲವು.

ಈ ಹೆಲಿಕಾಪ್ಟರ್‌ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಭೂ ದಾಳಿಗಳನ್ನು ಎದುರಿಸುವ, ಭೂ ಸೇನೆಯ ಜೊತೆ ಹೊಂದಿಕೊಂಡು ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ, ಜೊತೆಗೆ ಇದರಲ್ಲಿರುವ ಆಧುನಿಕ ಕ್ಯಾಮೆರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರಗಳ ಗುರುತು ಪತ್ತೆ, ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚೆ ಶೀಘ್ರವಾಗಿ ರವಾನಿಸುತ್ತವೆ.

ಭಾರತವು ಒಟ್ಟು 22 ಹೆಲಿಕಾಫ್ಟರ್‌ಗಳಿಗೆ ಅಮೆರಿಕ ಬಳಿ ಬೇಡಿಕೆ ಇಟ್ಟಿದೆ, ಪ್ರಸ್ತುತ ಒಂದು ಹೆಲಿಕಾಪ್ಟರ್ ಅನ್ನು ಮಾತ್ರವೇ ವಾಯುಪಡೆಗೆ ನೀಡಲಾಗಿದೆ.

English summary
Indian Air Force receives its first Apache Guardian attack helicopter at its production facility in Arizona, in the US. India has signed a contract with the US, for 22 of these choppers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X