ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯಪಡೆ ಯುದ್ಧ ವಿಮಾನಗಳ ಡಿಕ್ಕಿ, ಪತನ

ಗ್ವಾಲಿಯರ್ ಏರ್ ಫೋರ್ಸ್ ಬೇಸ್‌ನಿಂದ ಟೇಕಾಫ್ ಆಗಿದ್ದ ಯುದ್ಧ ವಿಮಾನಗಳಾದ ಸುಖೋಯ್ ಸು -30 ಮತ್ತು ಮಿರಾಜ್ 2000 ತರಬೇತಿ ಅಭ್ಯಾಸದ ವೇಳೆ ಮಧ್ಯಪ್ರದೇಶದಲ್ಲಿ ಪತನಗೊಂಡಿವೆ.

|
Google Oneindia Kannada News

ಇಂಧೋರ್‌, ಜನವರಿ 28: ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಾದ ಸುಖೋಯ್ ಸು -30 ಮತ್ತು ಮಿರಾಜ್ 2000 ತರಬೇತಿ ಅಭ್ಯಾಸದ ವೇಳೆ ಮಧ್ಯಪ್ರದೇಶದಲ್ಲಿ ಪತನಗೊಂಡಿವೆ ಎಂದು ಶನಿವಾರ ವರದಿಗಳು ತಿಳಿಸಿವೆ.

ಈ ಎರಡೂ ಯುದ್ಧವಿಮಾನಗಳು ಗ್ವಾಲಿಯರ್ ಏರ್ ಫೋರ್ಸ್ ಬೇಸ್‌ನಿಂದ ಟೇಕಾಫ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸಾವು ನೋವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

Indian Air Force Sukhoi Su-30 and Mirage 2000 fighter jets crash in Madhya Pradesh

ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದ ಈ ದುರ್ಘಟನೆಯನ್ನು ಸ್ಥಳೀಯರು ಚಿತ್ರೀಕರಿಸಿದ ದೃಶ್ಯದ ವೀಡಿಯೊಗಳು ನೆಲದ ಮೇಲೆ ವಿಮಾನದ ಅವಶೇಷಗಳನ್ನು ತೋರಿಸಿದೆ. ಈ ಮಧ್ಯೆ ರಾಜಸ್ಥಾನದ ಭರತ್‌ಪುರದಲ್ಲಿ ಚಾರ್ಟರ್ಡ್ ವಿಮಾನವೊಂದು ಪತನಗೊಂಡಿದೆ. ಪೊಲೀಸರು ಮತ್ತು ಆಡಳಿತ ಮಂಡಳಿ ಸ್ಥಳಕ್ಕೆ ದೌಡಾಯಿಸಿದೆ.ಅಪಘಾತದ ಸಮಯದಲ್ಲಿ ಸುಖೋಯ್-30 ಯುದ್ಧ ವಿಮಾನ ಇಬ್ಬರು ಪೈಲಟ್‌ಗಳನ್ನು ಮತ್ತು ಮಿರಾಜ್ 2000 ಒಬ್ಬ ಪೈಲಟ್ ಅನ್ನು ಹೊತ್ತೊಯ್ಯುತ್ತಿತ್ತು. ರಕ್ಷಣಾ ಮೂಲಗಳ ಪ್ರಕಾರ, ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ಮೂರನೇ ಪೈಲಟ್‌ನ ಸ್ಥಿತಿಯನ್ನು ಕಂಡುಹಿಡಿಯಲು ಐಎಎಫ್ ತಂಡವು ಚಾಪರ್‌ನಲ್ಲಿ ಶೀಘ್ರದಲ್ಲೇ ಸ್ಥಳಕ್ಕೆ ಕಳುಹಿಸಲಾಗಿದೆ.

ಐಎಎಫ್ ವಿಚಾರಣೆಯ ನ್ಯಾಯಾಲಯವು ಮಧ್ಯ ಗಾಳಿ ಡಿಕ್ಕಿಯಿಂದ ಅಪಘಾತ ಸಂಭವಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಿದೆ. "ಎರಡು ವಿಮಾನಗಳು ಗ್ವಾಲಿಯರ್ ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದು, ಅಲ್ಲಿ ತರಬೇತಿ ವ್ಯಾಯಮ ನಡೆಸುತ್ತಿದ್ದವು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಅಪಘಾತದ ವಿವರಗಳನ್ನು ಸಂಗ್ರಹಿಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

English summary
Two fighter jets of the Indian Air Force, Sukhoi Su-30 and Mirage 2000, have crashed in Madhya Pradesh during a training exercise, reports said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X