ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ಏಪ್ರಿಲ್ ಅಂತ್ಯದೊಳಗೆ ಐಎಎಫ್‌ಗೆ 16 ರಫೇಲ್‌ ಜೆಟ್‌ಗಳ ಸೇರ್ಪಡೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಮುಂಬರುವ ವರ್ಷ ಭಾರತೀಯ ವಾಯುಪಡೆಗೆ ಮತ್ತೆ 16 ರಫೇಲ್ ಜೆಟ್‌ಗಳು ಸೇರ್ಪಡೆಯಾಗಲಿವೆ. ವಿಶ್ವದ ಅತ್ಯಂತ ಬಲಿಷ್ಠ ರಫೇಲ್ ಪೈಟರ್ ಜೆಟ್‍ಗಳನ್ನು ಹೊಂದಿರುವ ಭಾರತೀಯ ವಾಯು ಪಡೆಗೆ (ಐಎಎಫ್) ಮುಂದಿನ ವರ್ಷ ಏಪ್ರಿಲ್ ಅಂತ್ಯದೊಳಗೆ ಇನ್ನೂ 16 ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ.

ಈಗಾಗಲೇ 5 ರಫೇಲ್ ಫೈಟರ್ ಜೆಟ್‍ಗಳು ಅಂಬಾಲಾ ವಾಯು ನೆಲೆಯ ಗೋಲ್ಡನ್ ಆ್ಯರೋ ಸ್ಕ್ವಾರ್ಟನ್‍ನಲ್ಲಿ ಸೇವೆಗೆ ನಿಯೋಜಿತವಾಗಿದೆ.

58 ಸಾವಿರ ಕೋಟಿಯ ರಫೇಲ್ ಡೀಲ್ ಎಂದರೇನು? ಏನಿದು ವಿವಾದ?58 ಸಾವಿರ ಕೋಟಿಯ ರಫೇಲ್ ಡೀಲ್ ಎಂದರೇನು? ಏನಿದು ವಿವಾದ?

ಇವುಗಳಲ್ಲದೆ ಜನವರಿಯಲ್ಲಿ 3 ಮತ್ತು ಮಾರ್ಚ್‍ನಲ್ಲಿ ಇನ್ನೂ 3 ಸಮರ ವಿಮಾನಗಳು ಭಾರತಕ್ಕೆ ಆಗಮಿಸಲಿವೆ. ಕೊನೆಯ ಹಂತದಲ್ಲಿ ಏಪ್ರಿಲ್ ಅಂತ್ಯದೊಳಗೆ 7 ರಫೇಲ್ ಜೆಟ್‍ಗಳು ಐಎಎಫ್‍ಗೆ ಸೇರ್ಪಡೆಯಾಗಲಿವೆ. ಇದರೊಂದಿಗೆ ಭಾರತಕ್ಕೆ ಫ್ರಾನ್ಸ್ ನಿಂದ ಒಟ್ಟು 21 ರಫೇಲ್ ವಿಮಾನಗಳು ಸೇರ್ಪಡೆಯಾದಂತಾಗಿವೆ.

Indian Air Force Gets Big Rafale Boost, 16 Fighter Jets To Land In India By April

ಇದಲ್ಲದೆ ಫ್ರಾನ್ಸ್‍ನ ಇನ್ನು 16 ಯುದ್ಧ ವಿಮಾನಗಳು ಏಪ್ರಿಲ್ ಅಂತ್ಯದೊಳಗೆ ನಾಲ್ಕು ಹಂತಗಳಲ್ಲಿ ಭಾರತಕ್ಕೆ ಆಗಮಿಸಲಿವೆ. ನವೆಂಬರ್ 5ರಂದು ಮೂರು ರಫೇಲ್ ಪೈಟರ್ ಜೆಟ್‍ಗಳು ಈಶಾನ್ಯ ಫ್ರಾನ್ಸ್‍ನ ಡಸೋಲ್ಟ್ ಏವಿಯೇಷನ್ ಸಂಸ್ಥೆಯಿಂದ ನೇರವಾಗಿ ಭಾರತಕ್ಕೆ ಬಂದಿಳಿಯಲಿವೆ.

ಈ ಪೈಟರ್ ಜೆಟ್‍ಗಳು ಮಾರ್ಗ ಮಧ್ಯೆ ಇಂಧನಕ್ಕಾಗಿ ಎಲ್ಲೂ ನಿಲುಗಡೆಯಾಗುವುದಿಲ್ಲ. ಗಗನದಲ್ಲೇ ಅಗತ್ಯವಾದ ಇಂಧನ ಭರ್ತಿ ಮಾಡಿಕೊಂಡು ಭಾರತದ ಐಎಎಫ್ ವಾಯು ನೆಲೆಗೆ ಆಗಮಿಸಲಿವೆ.

English summary
The strike capacity of the Indian Air Force is set to increase with 16 Omni-roll Rafale jet fighters scheduled to be included in the Golden Arrow Squadron by April 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X