ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6G in India : ವಿಶ್ವದಲ್ಲಿ ಭಾರತ 6ಜಿಯಲ್ಲಿ ಮುಂಚೂಣಿಯಲ್ಲಿರಲಿದೆ: ಅಶ್ವಿನ್‌ ವೈಷ್ಣವ್‌

|
Google Oneindia Kannada News

ನವದೆಹಲಿ, ಅಕ್ಟೋಬರ್‌ 3: ಭಾರತದಲ್ಲಿ 5ಜಿ ಅಧಿಕೃವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ ನಂತರ ದೂರ ಸಂಪರ್ಕ ಕೇಂದ್ರ ಸಚಿವ ಅಶ್ವಿನ್‌ ವೈಷ್ಣವ್‌ ಅವರು ಭಾರತ 6 ಜಿಯಲ್ಲಿ ಮುಂಚೂಣಿಯಲ್ಲಿರಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಅಶ್ವಿನಿ ವೈಷ್ಣವ್ ಅವರು 6ಜಿ ಅಭಿವೃದ್ಧಿಗೆ ಅಗತ್ಯವಾದ ಅನೇಕ ತಂತ್ರಜ್ಞಾನಗಳು ಭಾರತೀಯ ಡೆವಲಪರ್‌ಗಳಲ್ಲಿ ಲಭ್ಯವಿದ್ದು, ಮುಂದಿನ ಪೀಳಿಗೆಯ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಮುನ್ನಡೆಯಲಿದೆ ಎಂದು ಹೇಳಿದ್ದಾರೆ.

6G in India : ಈ ದಶಕದ ಅಂತ್ಯಕ್ಕೆ 6G ಇಂಟರ್‌ನೆಟ್‌: ಪ್ರಧಾನಿ ಮೋದಿ6G in India : ಈ ದಶಕದ ಅಂತ್ಯಕ್ಕೆ 6G ಇಂಟರ್‌ನೆಟ್‌: ಪ್ರಧಾನಿ ಮೋದಿ

ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಐಐಟಿ ಹೈದರಾಬಾದ್ ಬೂತ್‌ಗೆ ಸಚಿವರು ಭೇಟಿ ನೀಡಿದರು. ಸಂಸ್ಥೆಯು 6ಜಿ ತಂತ್ರಜ್ಞಾನದ ಮೂಲ ಮಾದರಿಗಳನ್ನು ಪ್ರದರ್ಶಿಸುತ್ತಿದೆ. ಇದು 2ರಿಂದ 3 ಪಟ್ಟು ಹೆಚ್ಚು ಸ್ಪೆಕ್ಟ್ರಲ್ ದಕ್ಷತೆಯನ್ನು ಸಾಧಿಸಿದೆ. 5ಜಿಗೆ ಹೋಲಿಸಿದರೆ ನೆಟ್‌ವರ್ಕ್ ವೇಗವನ್ನು ಸಾಧಿಸಿದೆ ಎಂದು ಹೇಳುತ್ತದೆ ಎಂದರು.

ಈಗ ನಾವು 6ಜಿಯ ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಮುಂದಾಳತ್ವ ವಹಿಸಬೇಕಾಗಿದೆ. ಐಐಟಿ ಹೈದರಾಬಾದ್, ಟೆಲಿಕಾಂ ಜಗತ್ತನ್ನು 5ಜಿ ಯಿಂದ 6ಜಿ ಗೆ ಕೊಂಡೊಯ್ಯಲು ಅಭಿವೃದ್ಧಿಪಡಿಸಿದ ಮಾನದಂಡಗಳು ಮತ್ತು ತಂತ್ರಜ್ಞಾನಗಳು ಅವುಗಳಲ್ಲಿ ಹಲವು ತಂತ್ರಜ್ಞಾನದ ಬೆಳವಣಿಗೆಗಳು ಈಗಾಗಲೇ ಸಂಭವಿಸಿವೆ. ಪೇಟೆಂಟ್‌ಗಳು ಭಾರತೀಯ ಡೆವಲಪರ್ ಸಮುದಾಯದೊಂದಿಗೆ ಲಭ್ಯವಿದೆ ಎಂದು ವೈಷ್ಣವ್ ಹೇಳಿದರು.

ಭಾರತದಲ್ಲಿ 5ಜಿ ಸೇವೆಗಳ ಬಗ್ಗೆ ಪ್ರಧಾನಿ ಮೋದಿ ಮಾಡಿದ ಉಲ್ಲೇಖಗಳುಭಾರತದಲ್ಲಿ 5ಜಿ ಸೇವೆಗಳ ಬಗ್ಗೆ ಪ್ರಧಾನಿ ಮೋದಿ ಮಾಡಿದ ಉಲ್ಲೇಖಗಳು

 5ಜಿ ತಂತ್ರಜ್ಞಾನ 4ಜಿಗಿಂತ ಮೂರು ಪಟ್ಟು ವೇಗ

5ಜಿ ತಂತ್ರಜ್ಞಾನ 4ಜಿಗಿಂತ ಮೂರು ಪಟ್ಟು ವೇಗ

6ಜಿ ಇಂಡಿಯಾದಲ್ಲಿ ನಾವು ಮುಂದಾಳತ್ವ ವಹಿಸಬೇಕು ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ. ನಾವು 6ಜಿ ಯಲ್ಲಿ ನಾಯಕರಾಗಿರಬೇಕು. ಅದಕ್ಕಾಗಿ ನಾವು ಕೆಲಸ ಮಾಡುತ್ತೇವೆ ಮತ್ತು ಸಾಧಿಸುತ್ತೇವೆ. ದೂರಸಂಪರ್ಕ ಇಲಾಖೆ ಪ್ರಕಾರ, 5ಜಿ ತಂತ್ರಜ್ಞಾನವು 4ಜಿ ಗಿಂತ ಹತ್ತು ಪಟ್ಟು ಉತ್ತಮವಾದ ಡೌನ್‌ಲೋಡ್ ವೇಗವನ್ನು ಮತ್ತು ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದರು.

 6ಜಿ ಯಲ್ಲಿ ಒಂದೇ ದೊಡ್ಡ ಸೆಲ್ ಸೆಕ್ಟರ್‌

6ಜಿ ಯಲ್ಲಿ ಒಂದೇ ದೊಡ್ಡ ಸೆಲ್ ಸೆಕ್ಟರ್‌

6ಜಿ ಅಭಿವೃದ್ಧಿ ಯೋಜನೆಯ ಮುಖ್ಯಸ್ಥರಾಗಿರುವ ಐಐಟಿ ಹೈದರಾಬಾದ್ ಪ್ರಾಧ್ಯಾಪಕ ಕಿರಣ್ ಕುಚಿ, 6ಜಿ ಮಾನದಂಡಗಳನ್ನು ರಚಿಸಲು ಸಹಾಯ ಮಾಡುವ ಕೆಲವು ಪೇಟೆಂಟ್‌ಗಳನ್ನು ಸಂಸ್ಥೆಗೆ ನೀಡಲಾಗಿದೆ. ಅಲ್ಲದೆ ತಂತ್ರಜ್ಞಾನವು ಮುಂದುವರೆದಂತೆ ಹೊಸ ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಾಮಾನ್ಯ ಸೆಲ್ ಸೈಟ್ (ಮೊಬೈಲ್ ಸ್ಟೇಷನ್) ಅನ್ನು 3 ಸೆಕ್ಟರ್‌ಗಳು ಅಥವಾ ವಲಯಗಳಾಗಿ ವಿಂಗಡಿಸಲಾಗಿದೆ. 6ಜಿ ಯಲ್ಲಿ ಯಾವುದೇ ಸೆಕ್ಟರ್‌ಗಳಿಲ್ಲದ ಒಂದೇ ದೊಡ್ಡ ಸೆಲ್ ಇರುವುದನ್ನು ನಾವು ನೋಡುತ್ತಿದ್ದೇವೆ. ಅದನ್ನು ಸೂಪರ್ ಸೆಲ್‌ಗೆ ಸಂಪರ್ಕಿಸಲಾಗುತ್ತದೆ. ಒಂದೇ ಮೇಲೆ ಅನೇಕ ರೇಡಿಯೋಗಳು ಇರುತ್ತವೆ. ಸೆಲ್ ಸ್ಪೆಕ್ಟ್ರಲ್ ದಕ್ಷತೆ ಮತ್ತು ನೆಟ್‌ವರ್ಕ್ ವೇಗವನ್ನು ಹೆಚ್ಚಿಸುತ್ತದೆ ಎಂದು ಕಿರಣ್ ಕುಚಿ ಹೇಳಿದರು.

 ಐಐಟಿ ಹೈದರಾಬಾದ್‌ನಿಂದ ಪೇಟೆಂಟ್‌ ಪ್ರಾರಂಭ

ಐಐಟಿ ಹೈದರಾಬಾದ್‌ನಿಂದ ಪೇಟೆಂಟ್‌ ಪ್ರಾರಂಭ

ತಂತ್ರಜ್ಞಾನವು ಪ್ರಬುದ್ಧವಾಗಲು 10 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಐಐಟಿ ಹೈದರಾಬಾದ್ ಈಗಾಗಲೇ ಪೇಟೆಂಟ್ ತಂತ್ರಜ್ಞಾನಗಳನ್ನು ಪ್ರಾರಂಭಿಸಿದೆ. ಇದು 6ಜಿ ಗಾಗಿ ಮಾನದಂಡಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಐಐಟಿ ಹೈದರಾಬಾದ್ ಭಾರತೀಯ 5ಜಿ ತಂತ್ರಜ್ಞಾನದ ಮಾನದಂಡವಾದ 5ಜಿಐ ಅನ್ನು ರಚಿಸಿದ ಸಂಸ್ಥೆಗಳಲ್ಲಿ ಒಂದಾಗಿದೆ. 5ಜಿಐಯ ಕೆಲವು ಆವೃತ್ತಿಗಳು ಈಗಾಗಲೇ ಹೊಸ ಮೊಬೈಲ್ ಫೋನ್‌ಗಳ ಭಾಗವಾಗಿದೆ. 5ಜಿಐಯ ಅಂತಿಮ ಆವೃತ್ತಿಯು ಶೀಘ್ರದಲ್ಲೇ ಲಭ್ಯವಿರುತ್ತದೆ ಎಂದು ಕುಚಿ ಹೇಳಿದರು.

 ಆತ್ಮನಿರ್ಭರ ಪರಿಹಾರ ಕ್ರಮಗಳಿಗೆ ಪ್ರೋತ್ಸಾಹ

ಆತ್ಮನಿರ್ಭರ ಪರಿಹಾರ ಕ್ರಮಗಳಿಗೆ ಪ್ರೋತ್ಸಾಹ

ಆಗಸ್ಟ್‌ನಲ್ಲಿ ಮೋದಿ ಅವರು ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸಲಾಗುತ್ತಿದೆ. ಈ ವೇಳೆಯೇ ಈ ದಶಕದ ಅಂತ್ಯದ ವೇಳೆಗೆ 6ಜಿ ಇಂಟರ್‌ನೆಟ್‌ ಸೇವೆಯನ್ನು ಪ್ರಾರಂಭಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ಯುವಕರು ಹೊಸ ಪರಿಹಾರ ಕ್ರಮಗಳಲ್ಲಿ ಕೆಲಸ ಮಾಡಬಹುದು. ನಾವು ಈ ದಶಕದ ಅಂತ್ಯದ ವೇಳೆಗೆ 6ಜಿ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದೇವೆ. ಸರ್ಕಾರವು ಗೇಮಿಂಗ್ ಮತ್ತು ಮನರಂಜನೆಯಲ್ಲಿ ಆತ್ಮನಿರ್ಭರ ಪರಿಹಾರ ಕ್ರಮಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರವು ಇಲ್ಲಿ ಹೂಡಿಕೆ ಮಾಡುವುದರಿಂದ ಎಲ್ಲಾ ಯುವಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದರು.

English summary
After Prime Minister Narendra Modi officially launched 5G in India, Union Telecom Minister Ashwin Vaishnav expressed hope that India will be at the forefront of 6G.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X