ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಯೋಜನೆಗೆ ಅಮೆರಿಕ-ಭಾರತ ಪ್ರತಿತಂತ್ರ: ಬ್ಲೂ ಡಾಟ್ ಯೋಜನೆ ಬಗ್ಗೆ ಮಾತುಕತೆ

|
Google Oneindia Kannada News

ನವದೆಹಲಿ, ಫೆಬ್ರವರಿ 24: ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಚೀನಾದ ಚಟುವಟಿಕೆಗಳಿಗೆ ಪ್ರತಿತಂತ್ರ ರೂಪಿಸಲು ಭಾರತ ಮತ್ತು ಅಮೆರಿಕ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಹಾಗೂ ಅಮೆರಿಕ ನಡುವೆ ಈ ಕುರಿತು ಹೊಸ ಪ್ರಸ್ತಾವಗಳು ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.

ನಮಸ್ತೆ ಟ್ರಂಪ್: ಸೋಮವಾರ ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಗಳ ವೇಳಾಪಟ್ಟಿನಮಸ್ತೆ ಟ್ರಂಪ್: ಸೋಮವಾರ ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಗಳ ವೇಳಾಪಟ್ಟಿ

ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್ (ಬಿಆರ್‌ಐ) ಮೂಲಕ ಚೀನಾ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಏಷ್ಯಾ ಪೆಸಿಫಿಕ್ ಪ್ರದೇಶ ಹಾಗೂ ಇತರೆ ದೇಶಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಒಳಗೊಳ್ಳುವ ಬ್ಲೂ ಡಾಟ್ ನೆಟ್‌ವರ್ಕ್ ಎಂಬ ಹೊಸ ಪ್ರಸ್ತಾವದ ಬಗ್ಗೆ ಅಮೆರಿಕ ಮತ್ತು ಭಾರತ ಮಾತುಕತೆ ನಡೆಸಲಿವೆ.

ಟ್ರಂಪ್ ಭೇಟಿ ನೀಡುವ ಸ್ಟೇಡಿಯಂನ ಬೃಹತ್ ಪ್ರವೇಶ ದ್ವಾರ ಕುಸಿತಟ್ರಂಪ್ ಭೇಟಿ ನೀಡುವ ಸ್ಟೇಡಿಯಂನ ಬೃಹತ್ ಪ್ರವೇಶ ದ್ವಾರ ಕುಸಿತ

ಟ್ರಂಪ್ ಭೇಟಿಯ ವೇಳೆ ಈ ಯೋಜನೆಯ ಒಪ್ಪಂದದ ಕುರಿತಾದ ಮಾತುಕತೆಗೆ ತಯಾರಿ ನಡೆಸಲು ಕಳೆದ ಕೆಲವು ವಾರಗಳಿಂದಲೇ ಭಾರತ ಹಾಗೂ ಅಮೆರಿಕದ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು, ಈಗ ರಾಷ್ಟ್ರ ನಾಯಕರ ಮಟ್ಟದ ಮಾತುಕತೆ ನಡೆಯಲಿದೆ.

ಜಪಾನ್-ಆಸ್ಟ್ರೇಲಿಯಾ ಭಾಗಿ

ಜಪಾನ್-ಆಸ್ಟ್ರೇಲಿಯಾ ಭಾಗಿ

ಬ್ಲೂ ಡಾಟ್ ನೆಟ್‌ವರ್ಕ್ ಒಂದು ಬಹು-ಮಧ್ಯಸ್ಥಗಾರರ ಪ್ರಯತ್ನವಾಗಿದ್ದು, ಸರ್ಕಾರಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜವನ್ನು ಒಂದೆಡೆಗೆ ತಂದು ಅತ್ಯುನ್ನತ ಗುಣಮಟ್ಟದ, ವಿಶ್ವಾಸಾರ್ಹ ದರ್ಜೆಯ ಜಾಗತಿಕ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಈ ಪ್ರಸ್ತಾವದಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದು, ಈಗಾಗಲೇ ಜಪಾನ್ ಮತ್ತು ಆಸ್ಟ್ರೇಲಿಯಾಗಳು ಈ ಯೋಜನೆಯಲ್ಲಿ ಪಾಲದಾರಿಕೆ ಹೊಂದಿವೆ.

ಚೀನಾದ ಯೋಜನೆಗೆ ಕೌಂಟರ್

ಚೀನಾದ ಯೋಜನೆಗೆ ಕೌಂಟರ್

ಅಮೆರಿಕದ ಭಾರತ-ಪೆಸಿಫಿಕ್ ಕಾರ್ಯಯೋಜನೆಯಲ್ಲಿ ಈ ಪ್ರಸ್ತಾಪವೂ ಒಂದು ಭಾಗವಾಗಿದೆ. ಇದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಪ್ರತಿಯಾಗಿ ರೂಪಿಸುತ್ತಿರುವ ಯೋಜನೆಯಾಗಿದೆ. ಈ ಬಗ್ಗೆ ಭಾರತದ ಪಾಲುದಾರಿಕೆ ಕುರಿತು ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ನಡುವೆ ಮಾತುಕತೆ ನಡೆಯುವ ನಿರೀಕ್ಷೆಯಿದೆ.

ಟ್ರಂಪ್ ಔತಣಕೂಟದಲ್ಲಿ ಇದೇನು ಮೋದಿ ಸರಕಾರದ ರಾಜಕೀಯ!ಟ್ರಂಪ್ ಔತಣಕೂಟದಲ್ಲಿ ಇದೇನು ಮೋದಿ ಸರಕಾರದ ರಾಜಕೀಯ!

ಮೂಲಸೌಕರ್ಯಗಳಿಗೆ ಸ್ಟಾರ್ ರೇಟಿಂಗ್

ಮೂಲಸೌಕರ್ಯಗಳಿಗೆ ಸ್ಟಾರ್ ರೇಟಿಂಗ್

ಜಗತ್ತಿನ ರೆಸ್ಟೋರೆಂಟ್‌ಗಳ ಗುಣಮಟ್ಟ ಮತ್ತು ದಕ್ಷತೆಗೆ ಸ್ಟಾರ್‌ಗಳನ್ನು ನೀಡುವ ಮೂಲಕ ರೇಟಿಂಗ್ ನೀಡುವ 'ಮಿಚೆಲೆನ್ ಗೈಡ್'ನಂತೆಯೇ ಮೂಲಸೌಕರ್ಯ ಯೋಜನೆಗಳಿಗೆ ಬ್ಲೂ ಡಾಟ್ ನೆಟ್‌ವರ್ಕ್ ಸ್ಟಾರ್‌ಗಳನ್ನು ನೀಡುವ ಮೂಲಕ ಗುರುತಿಸಲಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲೂ ಡಾಟ್ ಸಿಕ್ಕರೆ ಖಾಸಗಿ ಹೂಡಿಕೆ

ಬ್ಲೂ ಡಾಟ್ ಸಿಕ್ಕರೆ ಖಾಸಗಿ ಹೂಡಿಕೆ

ಸಾರ್ವಜನಿಕ ಅಭಿಪ್ರಾಯಗಳ ಮಟ್ಟ, ಅನುದಾನದಲ್ಲಿನ ಪಾರದರ್ಶಕತೆ, ಮೂಲಭೂತ ಪರಿಸರ ನಿಯಮಾವಳಿ ಸೇರಿದಂತೆ ವಿವಿಧ ಮಾನದಂಡಗಳ ಅಡಿಯಲ್ಲಿ ಈ ಯೋಜನೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಎಲ್ಲ ನಿಯಮಗಳಲ್ಲಿಯೂ ಉತ್ತೀರ್ಣವಾಗುವ ಯೋಜನೆಗಳಿಗೆ 'ಬ್ಲೂ ಡಾಟ್' (ನೀಲಿ ಚುಕ್ಕೆ) ಸಿಗಲಿದೆ. ಈ ಗುರುತು ದೊರೆತರೆ ಯೋಜನೆಯು ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಅನುವು ಸಿಗಲಿದ್ದು, ಅದಕ್ಕೆ ಸರ್ಕಾರ ಹೂಡಿಕೆಯೊಂದನ್ನೇ ಅವಲಂಬಿಸುವ ಅಗತ್ಯವಿರುವುದಿಲ್ಲ.

English summary
India and US will discuss the Blue Dot network to counter China in infrastructure and development projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X