ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮಾಣು ಕಾರ್ಯ ಪರಿಶೀಲನೆಗೆ ಇರಾನ್ ಸಹಕಾರ ಕೇಳಿದ ಭಾರತ

|
Google Oneindia Kannada News

ನವದೆಹಲಿ, ಜುಲೈ 1: ಪರಮಾಣು ಕಾರ್ಯಗಳ ಪರಿಶೀಲನೆಗೆ ಭಾರತವು ಇರಾನ್ ಸಹಕಾರ ಕೇಳಿದೆ. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಕೈಗೊಳ್ಳುವ ಪರಿಶೀಲನಾ ಕಾರ್ಯಗಳಿಗೆ ಇರಾನ್ ಸಹಕರಿಸಬೇಕು ಎಂದು ಭಾರತ ಕೇಳಿಕೊಂಡಿದೆ.

ಪ್ರತಿಯೊಂದು ದೇಶಗಳ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಈ ಒಪ್ಪಂದದಡಿ ಕೈಗೊಂಡ ನಿರ್ಣಯಗಳನ್ನು ಸಂಬಂಧಪಟ್ಟ ಎಲ್ಲಾ ರಾಷ್ಟ್ರಗಳು ಜಾರಿಗೊಳಿಸಬೇಕು ಎಂದು ಭಾರತ ಒತ್ತಾಯಿಸುತ್ತದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತ ಕಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿ, ಜಂಟಿ ಸಮಗ್ರ ಕ್ರಿಯಾ ಯೋಜನೆ ಮತ್ತು ನಿರ್ಣಯವನ್ನು ಪೂರ್ಣ ಪ್ರಮಾಣದಲ್ಲಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಭಾರತ ಬೆಂಬಲ ನೀಡುತ್ತದೆ ಎಂದರು.

India Urges Iran To Continue To Cooperate With IAEA In Performance Of Its Verification Activities

ಇರಾನ್ ಪರಮಾಣು ಒಪ್ಪಂದ ಎಂದು ಕರೆಯಲಾಗುವ ಜೆಸಿಪಿಒಎ ಎಂಬುದು ಇರಾನ್ ಮತ್ತು ಪಿ 5+1 ರಾಷ್ಟ್ರಗಳು(ಚೀನಾ, ಫ್ರಾನ್ಸ್, ಬ್ರಿಟನ್, ರಷ್ಯಾ , ಜರ್ಮನಿ ಹಾಗೂ ಅಮೆರಿಕ) ಹಾಗೂ ಐರೋಪ್ಯ ಒಕ್ಕೂಟಗಳ ನಡುವೆ 2015ರ ಜುಲೈ 14ರಂದು ವಿಯೆನ್ನಾದಲ್ಲಿ ಏರ್ಪಟ್ಟ ಒಪ್ಪಂದವಾಗಿದೆ.

English summary
India has asked Iran to continue to cooperate with the International Atomic Energy Agency (IAEA) in the performance of verification activities related to its nuclear programme and addressing all outstanding issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X