• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನ್ ಲಾಕ್ ಇಂಡಿಯಾ: ವಿಮಾನ ಸಂಚಾರ ಆರಂಭಕ್ಕೂ ಮುನ್ನ ಎಚ್ಚರ!

|

ನವದೆದಹಲಿ, ಜೂನ್.08: ಭಾರತದಲ್ಲಿ ಕೊರೊನಾ ವೈರಸ್ ಮಹಾಸ್ಫೋಟದ ನಡುವೆಯೂ ಕೇಂದ್ರ ಗೃಹ ಸಚಿವಾಲಯವು ಕೆಲವು ವಲಯಗಳಿಗೆ ಬಿಗ್ ರಿಲೀಫ್ ನೀಡಿದೆ. ಜೂನ್.01ರಿಂದ ಆರಂಭವಾದ 5ನೇ ಅವಧಿಯ ಲಾಕ್ ಡೌನ್ ನ್ನು ಅನ್ ಲಾಕ್ 1.0 ಎಂದೇ ಕರೆಯಲಾಗುತ್ತಿದೆ.

   Chiranjeevi Sarja : ಕನಕಪುರ ಬಳಿಯ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ |

   ದೇಶದಲ್ಲಿ ಇರುವ ಕಂಟೇನ್ಮೆಂಟ್ ಝೋನ್ ಗಳಿಂದ ಹೊರಗಿರುವ ಬಹುತೇಕ ವಲಯಗಳಿಗೆ ಕಂದ್ರ ಸರ್ಕಾರವು ಈ ಹಿಂದಿನ ನಿಯಮಗಳನ್ನು ಸಡಿಲಿಕೆ ಮಾಡಿದೆ. ಜೂನ್.30ರವರೆಗೂ ಈ ನಿಯಮ ಸಡಿಲಿಕೆ ಜಾರಿಯಲ್ಲಿ ಇರಲಿದೆ.

   ವಂದೇ ಭಾರತ್ ಮಿಷನ್: ಕಳೆದ 15 ಗಂಟೆಗಳಲ್ಲಿ ಏರ್‌ ಇಂಡಿಯಾದ 22,000 ಟಿಕೆಟ್ ಮಾರಾಟ

   ಕೇಂದ್ರ ಗೃಹ ಸಚಿವಾಲಯವು ನೀಡಿರುವ ಹೊಸ ಮಾರ್ಗಸೂಚಿ ಹಿನ್ನೆಲೆ ಭಾರತೀಯ ವಿಮಾನಯಾನ ಪ್ರಾಧಿಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರ ಅನುಕೂಲಕ್ಕಾಗಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಆರಂಭಿಸಿದೆ. ವಿಮಾನ ಹಾರಾಟದ ವೇಳಾಪಟ್ಟಿ ಬದಲಿಸಿದ್ದು 1/3 ಪ್ರಮಾಣದಲ್ಲಿ ವಿಮಾನಗಳು ಸಂಚಾರ ನಡೆಸಲಿವೆ.

   ಪ್ರತಿಯೊಬ್ಬರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

   ಪ್ರತಿಯೊಬ್ಬರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

   ಕೊರೊನಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆ ಪ್ರತಿಯೊಬ್ಬ ಪ್ರಯಾಣಿಕರಿಗೂ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಅತಿಹೆಚ್ಚು ಸೋಂಕಿತ ಪ್ರಕರಣಗಳಿರುವ ಪ್ರದೇಶದಿಂದ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು. ಪ್ರಯಾಣಿಕರು ಆಗಮಿಸುತ್ತಿರುವ ಸ್ಥಳ, ವಿಳಾಸದ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ. ಒಂದು ವೇಳೆ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಪ್ರಯಾಣಿಕನು ಕಂಟೇನ್ಮೆಂಟ್ ವಲಯಗಳಿಂದ ಆಗಮಿಸಿದ್ದಲ್ಲಿ ಪ್ರಯಾಣಕ್ಕೆ ಅವಕಾಶವನ್ನು ನಿರಾಕರಿಸಲಾಗುತ್ತದೆ.

   ಅತಿಹೆಚ್ಚು ಲಗೇಜ್ ತೆಗೆದುಕೊಂಡು ಹೋಗುವಂತಿಲ್ಲ

   ಅತಿಹೆಚ್ಚು ಲಗೇಜ್ ತೆಗೆದುಕೊಂಡು ಹೋಗುವಂತಿಲ್ಲ

   ವಿಮಾನದಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಅತಿಹೆಚ್ಚು ಲಗೇಜ್ ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಇರುವುದಿಲ್ಲ. ಲಗೇಜ್ ಬ್ಯಾಗ್ ಜೊತೆಗೆ ಲ್ಯಾಪ್ ಟಾಪ್ ಬ್ಯಾಗ್ ಅಥವಾ ಹ್ಯಾಂಡ್ ಬ್ಯಾಗ್ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅನುಮತಿಯಿದೆ. ವಿಮಾನ ನಿಲ್ದಾಣದಲ್ಲಿ ಯಾವುದೇ ಪ್ರಿಂಟ್ ಔಟ್ ಸೇವೆ ಇರುವುದಿಲ್ಲ. ಹೀಗಾಗಿ ಲಗೇಜ್ ಗಳ ಮೇಲೆ ಅಂಟಿಸುವುದಕ್ಕೆ ಟ್ಯಾಗ್ ಗಳನ್ನು ಪ್ರಯಾಣಿಕರೇ ಪ್ರಿಂಟ್ ಔಟ್ ತೆಗೆದುಕೊಂಡು ಬರಬೇಕು. ಅದು ಸಾಧ್ಯವಾಗದಿದ್ದಲ್ಲಿ ಬಿಳಿ ಹಾಳೆಯ ಮೇಲೆ ಪಿಎನ್ಆರ್ ಸಂಖ್ಯೆ ಮತ್ತು ಹೆಸರನ್ನು ಬರೆದು ಲಗೇಟ್ ಬ್ಯಾಗ್ ಗೆ ಅಂಟಿಸಬೇಕು.

   ಪ್ರಯಾಣದ ವೇಳೆ ಡ್ರೈಫುಡ್ಸ್ ಸೇವನೆಗೆ ಮಾತ್ರ ಅವಕಾಶ

   ಪ್ರಯಾಣದ ವೇಳೆ ಡ್ರೈಫುಡ್ಸ್ ಸೇವನೆಗೆ ಮಾತ್ರ ಅವಕಾಶ

   ವಿಮಾನ ಸಂಚಾರದ ಸಂದರ್ಭದಲ್ಲಿ ಯಾವುದೇ ರೀತಿ ಊಟ ಮತ್ತು ಉಪಹಾರದ ಸೇವೆಯನ್ನು ಒದಗಿಸಲು ಆಗುವುದಲ್ಲ. ಬದಲಿಗೆ ಪ್ರಯಾಣಿಕರು ಕೇವಲ ಡ್ರೈ ಫುಡ್ಸ್ ನ್ನು ತೆಗೆದುಕೊಂಡು ಬರುವುದಕ್ಕೆ ಅವಕಾಶ ನೀಡಲಾಗಿದೆ. ಹೋಟೆಲ್ ಗಳು ತೆರೆದಿರುವ ಹಿನ್ನೆಲೆ ಪ್ರಯಾಣಿಕರು ವಿಮಾನ ಲ್ಯಾಂಡಿಂಗ್ ನಂತರದಲ್ಲಿ ಹೋಟೆಲ್ ಗಳಿಗೆ ತೆರಳಿ ಆಹಾರ ಸೇವಿಸಬಹುದು. ಅದರ ವಿನಃ ಪ್ರಯಾಣದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅನಗತ್ಯವಾಗಿ ಊಟ-ಉಪಹಾರವನ್ನು ಸೇವಿಸುವಂತಿಲ್ಲ.

   ವಿಮಾನ ನಿಲ್ದಾಣಗಳಲ್ಲಿ ಸಿಗುವ ಸೌಲಭ್ಯ

   ವಿಮಾನ ನಿಲ್ದಾಣಗಳಲ್ಲಿ ಸಿಗುವ ಸೌಲಭ್ಯ

   ಪ್ರಯಾಣಿಕರ ಪ್ರತಿಯೊಂದು ವಸ್ತುಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಅಗತ್ಯವಿರುವ ವೃದ್ಧರಿಗೆ ವ್ಹೀಲ್ ಚೇರ್ ಗಳ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗುತ್ತದೆ. ಆದರೆ ಕೊರೊನಾ ವೈರಸ್ ಸೋಂಕಿನಿಂದ ಹಿರಿಯರಿಗೆ ಹೆಚ್ಚು ಅಪಾಯ ಇರುವುದರಿಂದ ಹೆಚ್ಚಾಗಿ ಪ್ರಯಾಣಿಸದಿರಲು ಸಲಹೆ ನೀಡಲಾಗುತ್ತಿದೆ.

   ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು

   ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು

   - ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಠ 6 ಅಡಿ ಅಂತರ ಕಾಯ್ದುಕೊಂಡಿರಬೇಕು.

   - ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

   - ಮನೆಯಿಂದ ಹೊರಡುವಾಗಲೇ ಎಲ್ಲ ಲಗೇಟ್ ಗಳಿಗೆ ಸ್ಯಾನಿಟೈಸರ್ ಸಿಂಪಡಿಸುವುದು.

   - ಏರ್ ಪೋರ್ಟ್ ಗಳಲ್ಲಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಸ್ಯಾನಿಟೈಸರ್ ಉಳ್ಳ ಸುರಕ್ಷತಾ ಕಿಟ್ ನ್ನು ನೀಡಲಾಗುತ್ತದೆ.

   - ಸೋಪ್ ನಿಂದ ಕನಿಷ್ಠ 40-60 ಸೆಕೆಂಡ್ ಗಳ ಕಾಲ ಕೈತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸಾಧ್ಯವಾದಲ್ಲಿ ಆಲ್ಕೋಹಾಲ್ ಅಂಶವುಳ್ಳ ಸ್ಯಾನಿಟೈಸರ್ ನಿಂದ 20 ಸೆಕೆಂಡ್ ಕೈಗಳನ್ನು ತೊಳೆಯಿರಿ.

   - ಕೆಮ್ಮುವಾಗ, ಸೀನುವಾಗ ಬೇರೆಯವರಿಂದ ಅಂತರ ಕಾಯ್ದುಕೊಳ್ಳಿರಿ ಹಾಗೂ ಕೈ ಹಾಗೂ ಕರ್ಚಿಫ್ ಗಳನ್ನು ಹಿಡಿದುಕೊಳ್ಳಿರಿ.

   - ಆರೋಗ್ಯದಲ್ಲಿ ಕೊಂಚ ಏರುಪೇರು ಆದರೂ ಜಿಲ್ಲಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರಿ.

   - ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.

   English summary
   India Unlock 1.0: Travel Guidelines to Prevent Coronavirus Spread. All You Need To Know about travel precautions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more