ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳ ಖರೀದಿಯಿಂದ ದೂರವುಳಿದ ಭಾರತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಕೊರೊನಾ ಸೋಂಕಿನ ವಿರುದ್ಧ ದೇಶೀಯ ಲಸಿಕೆಗಳ ಉತ್ಪಾದನೆ ವೇಗ ಪಡೆದುಕೊಂಡಿರುವುದರಿಂದ ಭಾರತ ಇದೀಗ ಫೈಜರ್ ಹಾಗೂ ಮಾಡೆರ್ನಾ ಕೊರೊನಾ ಲಸಿಕೆಗಳನ್ನು ಖರೀದಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

ಬುಧವಾರದವರೆಗೂ ದೇಶದಲ್ಲಿ 83 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ದೇಶೀಯ ಲಸಿಕೆಗಳ ಉತ್ಪಾದನೆಯನ್ನೂ ಚುರುಕುಗೊಳಿಸಲಾಗಿದೆ.

ಕೊರೊನಾವೈರಸ್ ಭೀತಿ: ಭಾರತದಲ್ಲಿ ಒಂದೇ ದಿನ 31923 ಮಂದಿಗೆ ಅಂಟಿದ ಮಹಾಮಾರಿ!ಕೊರೊನಾವೈರಸ್ ಭೀತಿ: ಭಾರತದಲ್ಲಿ ಒಂದೇ ದಿನ 31923 ಮಂದಿಗೆ ಅಂಟಿದ ಮಹಾಮಾರಿ!

ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳ ಖರೀದಿ ಸಂಬಂಧ ಅಧೀಕೃತ ಮಾಹಿತಿ ಇಲ್ಲದಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕ ಮೂಲದ ಈ ಲಸಿಕೆಗಳನ್ನು ಭಾರತ ಕೊಳ್ಳಲು ಮನಸ್ಸು ಮಾಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

India Unlikely To Buy Pfizer Moderna Vaccines

ಪುಣೆ ಮೂಲದ ಔಷಧ ತಯಾರಿಕಾ ಕಂಪನಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಕೋವಿಶೀಲ್ಡ್ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 20 ಕೋಟಿ ಡೋಸ್‌ಗಳಿಗೆ ಹೆಚ್ಚಿಸಿದೆ ಹಾಗೂ ಅಕ್ಟೋಬರ್‌ ತಿಂಗಳಿನಲ್ಲಿ ಸುಮಾರು 22 ಕೋಟಿ ಡೋಸ್‌ಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಇದರೊಂದಿಗೆ ಭಾರತ್ ಬಯೋಟೆಕ್ ಪ್ರಸ್ತುತ ಪ್ರತಿ ತಿಂಗಳು ಮೂರು ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿದೆ ಹಾಗೂ ಮುಂಬರುವ ತಿಂಗಳುಗಳಲ್ಲಿ ಇದರ ಉತ್ಪಾದನೆ ಐದು ಕೋಟಿವರೆಗೂ ಹೆಚ್ಚಾಗುವ ಸಾಧ್ಯತೆಯಿರುವುದಾಗಿ ಕಂಪನಿ ತಿಳಿಸಿದೆ.

ಭಾರತದಲ್ಲಿ ಬೂಸ್ಟರ್ ಡೋಸ್ ಅಲ್ಲ, ಎರಡು ಡೋಸ್ ಲಸಿಕೆಗೆ ಮೊದಲ ಆದ್ಯತೆಭಾರತದಲ್ಲಿ ಬೂಸ್ಟರ್ ಡೋಸ್ ಅಲ್ಲ, ಎರಡು ಡೋಸ್ ಲಸಿಕೆಗೆ ಮೊದಲ ಆದ್ಯತೆ

ಲಸಿಕಾ ಅಭಿಯಾನದ ಆರಂಭದ ದಿನಗಳಲ್ಲಿ ಅಧಿಕ ಲಸಿಕೆಗಳ ಅವಶ್ಯಕತೆ ಇತ್ತು. ಆಗ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಅವಶ್ಯಕತೆಯನ್ನು ಪೂರೈಸಲಾಗಿತ್ತು ಹಾಗೂ ಸ್ಥಳೀಯವಾಗಿ ತಯಾರಿಸಿದ ಈ ಲಸಿಕೆಗಳು ಕೈಗೆಟುಕುವ ದರದಲ್ಲಿವೆ. ಇವುಗಳ ಶೇಖರಣೆಗೆ ವಿಶೇಷ ಕೋಲ್ಡ್‌ ಚೈನ್‌ಗಳ ಅವಶ್ಯಕತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

India Unlikely To Buy Pfizer Moderna Vaccines

ಇದರೊಂದಿಗೆ, ಅಕ್ಟೋಬರ್ ತಿಂಗಳಿನಿಂದ 'ಲಸಿಕಾ ಮೈತ್ರಿ' ಕಾರ್ಯಕ್ರಮದಡಿಯಲ್ಲಿ ಭಾರತವು ಹೆಚ್ಚುವರಿ ಕೊರೊನಾ ಲಸಿಕೆಗಳ ರಫ್ತನ್ನು ಪುನರಾರಂಭ ಮಾಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

'ಕೋವ್ಯಾಕ್ಸ್ ಜಾಗತಿಕ ಲಸಿಕಾ ಕಾರ್ಯಕ್ರಮದೆಡೆಗೆ ತನ್ನ ಬದ್ಧತೆಯನ್ನು ಪೂರೈಸಲು ಭಾರತ ಕೊರನಾ ಲಸಿಕೆ ರಫ್ತನ್ನು ಪುನರಾರಂಭ ಮಾಡಲಿದೆ. ತನ್ನ ನಾಗರಿಕರಿಗೆ ಲಸಿಕೆ ನೀಡುವುದನ್ನು ಪ್ರಮುಖ ಆದ್ಯತೆಯಾಗಿಟ್ಟುಕೊಂಡು ಲಸಿಕೆಗಳನ್ನು ರಫ್ತು ಮಾಡಲಾಗುವುದು' ಎಂದು ಸಚಿವರು ತಿಳಿಸಿದ್ದಾರೆ.

'ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ 30 ಕೋಟಿ ಡೋಸ್ ಕೊರೊನಾ ಲಸಿಕೆಗಳನ್ನು ಹಾಗೂ ಮುಂದಿನ ಮೂರು ತಿಂಗಳುಗಳಲ್ಲಿ ನೂರು ಕೋಟಿ ಡೋಸ್‌ಗಳನ್ನು ಪಡೆಯಲಿದೆ. ಹೆಚ್ಚುವರಿ ಡೋಸ್‌ಗಳನ್ನು ರಫ್ತು ಮಾಡುವ ಕಾರ್ಯವನ್ನು ಭಾರತ ಮುಂದಿನ ತಿಂಗಳು ಪುನರಾರಂಭ ಮಾಡಲಿದೆ' ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ:
ಕೊರೊನಾ ವಿರುದ್ಧ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲಾಗಿದ್ದು, ದೇಶದಲ್ಲಿ 83.39 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 250 ದಿನಗಳಾಗಿದೆ. ಈವರೆಗೂ 83,39,90,049 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೂ 80,67,26,335 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 87,83,665 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,83,47,221 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 1,46,66,596 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ 33,74,76,070 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 6,67,81,067 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.

ಅಧೀಕೃತ ಮೂಲಗಳ ಪ್ರಕಾರ, ಭಾರತದ ವಯಸ್ಕ ಜನಸಂಖ್ಯೆಯ ಶೇ 22ಕ್ಕಿಂತಲೂ ಹೆಚ್ಚಿನವರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಹಾಗೂ 65% ಮಂದಿ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

English summary
With domestic manufacturing picking up pace, India unlikely to buy Pfizer, Moderna vaccines for now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X