ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಮಕಾತಿಯಲ್ಲಿ ಹಿಂಜರಿಕೆ; ಆಗಸ್ಟ್‌ನಲ್ಲಿ ನಿರುದ್ಯೋಗ ದರ ಏರಿಕೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ನಾಲ್ಕು ತಿಂಗಳ ನಂತರ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತೆ ಹೆಚ್ಚಾಗಿದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಆಗಸ್ಟ್‌ ತಿಂಗಳಿನಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ 8.32% ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್ ನಡೆಸಿದ ಸಮೀಕ್ಷೆ ತಿಳಿಸಿದೆ.

ಜುಲೈ ತಿಂಗಳಿನಲ್ಲಿ ಈ ಪ್ರಮಾಣ 6.95% ಇತ್ತು. ಇದೀಗ ಇನ್ನೂ ಹೆಚ್ಚಾಗಿರುವುದಾಗಿ ತಿಳಿಸಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ನೇಮಕಾತಿ ಪ್ರಕ್ರಿಯೆಯೂ ಕಷ್ಟಕರವಾಗಿದ್ದು, ಭಾರತದಲ್ಲಿ ನಿರುದ್ಯೋಗದ ಒಟ್ಟಾರೆ ದರ ಏರಿಕೆಯಾಗಿದೆ ಎಂದು ತಿಳಿಸಿದೆ.

India Unemployment Rate Rises In August shows survey

ಆಗಸ್ಟ್‌ ತಿಂಗಳಿನಲ್ಲಿ ನಿರುದ್ಯೋಗ ಪ್ರಮಾಣವು 8.32%ಗೆ ಏರಿದೆ. ಜುಲೈನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟ 6.95% ಇತ್ತು ಎಂದು ಈ ಖಾಸಗಿ ಸಂಶೋಧನಾ ಸಂಸ್ಥೆ ಬುಧವಾರ ತಿಳಿಸಿದೆ. ಸಂಸ್ಥೆಗಳು ಕೂಡ ನೇಮಕಾತಿಗಳಿಗೆ ತಡೆ ಹಿಡಿಯುತ್ತಿವೆ. ಈ ತಿಂಗಳಿನಲ್ಲಿ ಮಾರಾಟ ಪ್ರಕ್ರಿಯೆಯೂ ತಗ್ಗಿದ್ದು, ಇದೇ ಕಾರಣವಾಗಿ ಸಂಸ್ಥೆಗಳು ನೇಮಕಾತಿಯನ್ನು ಮುಂದೂಡುತ್ತಿವೆ ಎಂದು ಐಎಚ್‌ಎಸ್ ಮಾರ್ಕಿಟ್ ಪ್ರತ್ಯೇಕ ಸಮೀಕ್ಷೆ ತಿಳಿಸಿದೆ.

ಉದ್ಯೋಗ ಬೆಳವಣಿಗೆಯಲ್ಲಿ ಹಿಂಜರಿಕೆ ಇದೆ ಹಾಗೂ ಇದರಿಂದ ಉದ್ಯೋಗ ಅವಕಾಶ ಗಣನೀಯವಾಗಿ ತಗ್ಗಿದೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ. 'ನಾವು ಉದ್ಯೋಗದಲ್ಲಿ ತೀವ್ರ ಕುಸಿತದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಉದ್ಯೋಗವಿಲ್ಲದೆ ನೊಂದು ಸಾವಿಗೆ ಶರಣಾದವರ ಸಂಖ್ಯೆ ಹೆಚ್ಚಳರಾಜ್ಯದಲ್ಲಿ ಉದ್ಯೋಗವಿಲ್ಲದೆ ನೊಂದು ಸಾವಿಗೆ ಶರಣಾದವರ ಸಂಖ್ಯೆ ಹೆಚ್ಚಳ

ಸಿಎಂಐಇ ದತ್ತಾಂಶಗಳ ಪ್ರಕಾರ ಕಳೆದ ತಿಂಗಳು ಸುಮಾರು ಒಂದು ಮಿಲಿಯನ್ ಉದ್ಯೋಗ ಕಡಿತವಾಗಿದೆ ಎಂದು ತಿಳಿಸಿದೆ. ಕೊರೊನಾ ಎರಡನೇ ಅಲೆ ನಡುವೆ ಏಪ್ರಿಲ್‌ನಲ್ಲಿ ಏಳು ದಶಲಕ್ಷಕ್ಕೂ ಹೆಚ್ಚು ಉದ್ಯೋಗ ನಷ್ಟವಾಗಿತ್ತು. ಏಪ್ರಿಲ್‌ಗೆ ಹೋಲಿಸಿದರೆ ಉದ್ಯೋಗ ನಷ್ಟ ಈಗ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಏರಿಕೆ
ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಏರಿಕೆಯಾಗಿದ್ದು, ಜುಲೈ ತಿಂಗಳಿನಲ್ಲಿ ಶೇಕಡ 6.75 ರಷ್ಟು ಏರಿಕೆಯಾಗಿದೆ ಎಂದು ಸಿಎಮ್‌ಐಇ ಅಂಕಿ ಅಂಶಗಳು ತಿಳಿಸಿದ್ದವು. ಒಂದು ವಾರದ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರವು ಶೇಕಡಾ 5.1 ರಷ್ಟಿತ್ತು ಎಂದು ಮಾಹಿತಿ ನೀಡಿತ್ತು.

ಕೊರೊನಾ ನಿರ್ಬಂಧಗಳ ಸಡಿಲಿಕೆ ಹಾಗೂ ಹೆಚ್ಚುತ್ತಿರುವ ಆರ್ಥಿಕ ಚಟುವಟಿಕೆಗಳ ಹೊರತಾಗಿಯೂ ನಗರ ನಿರುದ್ಯೋಗ ದರವು, ಗ್ರಾಮೀಣ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ.

India Unemployment Rate Rises In August shows survey

ಕುಟುಂಬದ ಆದಾಯದಲ್ಲಿ ಕುಸಿತ
ಕೊರೊನಾ ಸೋಂಕಿನ ಎರಡನೇ ಅಲೆಯಿಂದಾಗಿ ಕೆಲಸ ಕಳೆದುಕೊಂಡವರ ಸಂಖ್ಯೆ ಬರೋಬ್ಬರಿ ಒಂದು ಕೋಟಿಗೂ ಅಧಿಕ ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ವ್ಯಾಸ್ ತಿಳಿಸಿದ್ದರು. ಕಳೆದ ವರ್ಷ ಕೊರೊನಾ ಸೋಂಕು ಪತ್ತೆಯಾದಾಗಿನಿಂದ 97% ಕುಟುಂಬಗಳು ತಮ್ಮ ಆದಾಯದಲ್ಲಿ ಕುಸಿತ ಅನುಭವಿಸಿವೆ ಎಂದು ಜೂನ್‌ ತಿಂಗಳಿನಲ್ಲಿ ಅವರು ವಿವರಿಸಿದ್ದರು.

ಲಾಕ್‌ಡೌನ್‌ನಿಂದ ನಿರುದ್ಯೋಗ ದುಪ್ಪಟ್ಟಾಗಿದೆ; ರಾಹುಲ್ ಟೀಕೆಲಾಕ್‌ಡೌನ್‌ನಿಂದ ನಿರುದ್ಯೋಗ ದುಪ್ಪಟ್ಟಾಗಿದೆ; ರಾಹುಲ್ ಟೀಕೆ

ಭಾರತದಲ್ಲಿ ನಿರುದ್ಯೋಗ ದರ 2020 ಮೇ ತಿಂಗಳಿನಲ್ಲಿ ದಾಖಲೆಯ ಪ್ರಮಾಣ ತಲುಪಿತ್ತು. ಲಾಕ್‌ಡೌನ್ ಕಾರಣದಿಂದಾಗಿ 23.5 ಶೇಕಡಾದಷ್ಟು ನಿರುದ್ಯೋಗ ಪ್ರಮಾಣ ದಾಖಲಾಗಿತ್ತು. ಎರಡನೇ ಅಲೆಯಲ್ಲಿ ಸೋಂಕಿನ ಪ್ರಮಾಣ ತಗ್ಗಿ, ಮುಂದಿನ ದಿನಗಳಲ್ಲಿ ಆರ್ಥಿಕ ಚಟುವಟಿಕೆ ಸರಾಗಗೊಳಿಸುವ ಪ್ರಕ್ರಿಯೆಗಳು ಪರಿಹಾರ ನೀಡಲಿವೆ ಎಂದಿದ್ದರು. ಆದರೆ ಆಗಸ್ಟ್‌ ತಿಂಗಳಿನಲ್ಲಿ ಮತ್ತೆ ನಿರುದ್ಯೋಗ ದರ ಹೆಚ್ಚಾಗಿರುವುದು ಕಂಡುಬಂದಿದೆ.

3-4 ಶೇಕಡಾದಷ್ಟು ನಿರುದ್ಯೋಗ ಪ್ರಮಾಣ ಭಾರತೀಯ ಆರ್ಥಿಕತೆಯಲ್ಲಿ ಸಾಮಾನ್ಯ ಎಂದು ಪರಿಗಣಿಸಬಹುದು ಎಂದು ಹೇಳಿದ್ದಾರೆ.

English summary
India unemployment rate rises in august as covid hits hiring activity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X