ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವಾಕ್ಸಿನ್‌ಗೆ ಅನುಮೋದನೆ ಪಡೆಯಲು ಭಾರತ ಪ್ರಯತ್ನ

|
Google Oneindia Kannada News

ನವದೆಹಲಿ, ಮೇ 23: ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತ್ ಬಯೋಟೆಕ್ ಉತ್ಪಾದನೆ ಮಾಡುತ್ತಿರುವ ಕೊವಾಕ್ಸಿನ್ ಲಸಿಕೆಗೆ ಆದಷ್ಟು ಶೀಘ್ರವಾಗಿ ಅನುಮೋದನೆ ಪಡೆಯಲು ಭಾರತ ಪ್ರಯತ್ನಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟಗಳಿಂದ ಅನುಮೋದನೆ ಪಡೆಯಲು ಬೇಕಾಗಿರುವ ಅಗತ್ಯ ಕ್ರಮಗಳತ್ತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉನ್ನತ ರಾಜತಾಂತ್ರಿಕರು ಚಿತ್ತಹರಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಲಸಿಕೆಗಳಾದ ಆಕ್ಸ್‌ಫರ್ಡ್ ಆಸ್ಟ್ರಜನಿಕಾ, ಫೈಜರ್ ಮತ್ತು ಮಾಡೆರ್ನಾ ಸಹಿತ ಹಲವು ಲಸಿಕೆಗಳಿಗೆ ಅನುಮೋದನೆಯನ್ನು ನೀಡಿದೆ. ಇದರಿಂದಾಗಿ ವಿಶ್ವಾದ್ಯಂತ ಈ ಲಸಿಕೆಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ನೀಡಲಾಗುತ್ತಿರುವ ಎರಡು ಲಸಿಕೆಗಳ ಪೈಕಿ ಕೋವಾಕ್ಸಿನ್‌ಗೆ ಈ ಮಾನ್ಯತೆ ದೊರೆತಿಲ್ಲ.

ಈ ವಿಚಾರವಾಗಿ ಕೆಲ ಮಹತ್ವದ ಚರ್ಚೆ ನಡೆಸಲು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಸೋಮವಾರ ಭಾರತ್ ಬಯೋಟೆಕ್ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಚಿವಾಲಯದ ಮೂಲಗಳು ಖಚಿತಪಡಿಸಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ಪಡೆಯುವ ವಿಚಾರವಾಗಿ ಅವರು ಗಮನಹರಿಸಿರುವುದನ್ನು ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿದೆ. ವಿಶ್ವ ಆರೋಗ್ಯಸಂಸ್ಥೆಯ 'ತುರ್ತು ಬಳಕೆಯ ಪಟ್ಟಿ'ಯಲ್ಲಿ ಕೊವಾಕ್ಸಿನ್ ಲಸಿಕೆಯನ್ನು ಸೇರ್ಪಡೆಗೊಳಿಸಲು ಖಂಡಿತವಾಗಿಯೂ ಭಾರತ ಆಸಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

India trying to get recognition for Covaxin by WHO and EU

ಯುರೋಪ್‌ನ ದೇಶಗಳು ಸೇರಿದಂತೆ ವಿಶ್ವಾದ್ಯಂತ ಕೆಲ ರಾಷ್ಟ್ರಗಳು ಕೊರೊನಾ ಲಸಿಕೆ ಪಡೆದ ಜನರ ಪ್ರವಾಸಕ್ಕೆ ಅನುವು ಮಾಡಿಕೊಡುತ್ತಿದೆ. ಆದರೆ ಕೊವಾಕ್ಸಿನ್ ವಿಶ್ವಸಂಸ್ಥೆಯ ಅನುಮೋದನೆ ಪಡೆಯದ ಕಾರಣ ಕೊವಾಕ್ಸಿನ್ ಲಸಿಕೆ ಪಡೆದ ಜನರ ಪ್ರವಾಸಕ್ಕೆ ಅಡ್ಡಿಯಾಗಬಹುದು. ಮೂಲಗಳ ಮಾಹಿತಿಯ ಪ್ರಕಾರ ಯುರೋಪಿನ್ ಒಕ್ಕೂಟಗಳಿಂದ ಮಾನ್ಯತೆ ದೊರೆಯಲು ಬೇರೆಯದೇ ಪ್ರಕ್ರಿಯೆಯಿದ್ದು ಅದು ಮತ್ತಷ್ಟು ಸಮಯ ತೆಗೆದುಕೊಳ್ಳಬಹುದು ಎಂದಿದೆ. ಆದರೆ ಈ ಮಾನ್ಯತೆ ಪಡೆಯುವ ಬಗ್ಗೆಯೂ ಸರ್ಕಾರ ಯೋಚಿಸುತ್ತಿದೆ ಎನ್ನಲಾಗಿದೆ.

English summary
India trying to get recognition for Covaxin by World Health Organization and European Union.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X