ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪುಟ್ನಿಕ್ V ಲಸಿಕೆ: ಕೆಲವೇ ವಾರಗಳಲ್ಲಿ ಭಾರತದಲ್ಲಿ ಅಂತಿಮ ಪ್ರಯೋಗ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಜಗತ್ತಿನ ಮೊಟ್ಟ ಮೊದಲ ಕೊರೊನಾ ಲಸಿಕೆ ಸ್ಪುಟ್ನಿಕ್ v ಅಂತಿಮ ಪ್ರಯೋಗವು ಕೆಲವೇ ವಾರಗಳಲ್ಲಿ ಭಾರತದಲ್ಲಿ ನಡೆಯಲಿದೆ.

ಈ ಟ್ರಯಲ್​ಗೆ 1ರಿಂದ 2 ಸಾವಿರ ಮಂದಿ ನೋಂದಾಯಿಸಿಕೊಳ್ಳಲಿದ್ದು, ದೇಶಾದ್ಯಂತದ ವಿವಿಧ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಟ್ರಯಲ್​ ನಡೆಯಲಿದೆ. ಈ ಬಗ್ಗೆ ರಷ್ಯನ್ ಡೈರೆಕ್ಟ್​ ಇನ್​ವೆಸ್ಟ್​ಮೆಂಟ್​ ಫಂಡ್​ (ಆರ್​ಡಿಐಎಫ್​) ಮತ್ತು ಡಾ.ರೆಡ್ಡಿ ಲ್ಯಾಬೊರೇಟರೀಸ್​ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿದೆ.

ರಷ್ಯಾದಲ್ಲಿ ಅಕ್ಟೋಬರ್‌ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ ರಷ್ಯಾದಲ್ಲಿ ಅಕ್ಟೋಬರ್‌ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ

ವರ್ಷಾಂತ್ಯದ ವೇಳೆಗೆ ಭಾರತಕ್ಕೆ ವ್ಯಾಕ್ಸಿನ್​ ಪೂರೈಕೆ ಆಗಬಹುದು ಎಂದು ಆರ್​ಡಿಐಎಫ್​ ಹೇಳಿಕೊಂಡಿದ್ದರೂ ಈ ಟ್ರಯಲ್​ಗೆ ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

India Trials For Russias Sputnik-V Vaccine Could Start In Next Few Weeks

ಜಗತ್ತಿನಾದ್ಯಂತ ಕೊರೊನಾ ಹಾವಳಿ ಹೆಚ್ಚುತ್ತಿರುವ ಮಧ್ಯೆಯೇ ಒಂದು ಆಶಾದಾಯಕ ಸುದ್ದಿ ಹೊರಬಿದ್ದಿದೆ. ರಷ್ಯಾದ ಕೊರೊನಾ ಲಸಿಕೆಗೆ ಇನ್ನು ಕೆಲವೇ ವಾರಗಳಲ್ಲಿ ಭಾರತದಲ್ಲಿ ಅಂತಿಮ ಟ್ರಯಲ್​ ನಡೆಯಲಿದೆ.

ಕೊರೊನಾ ವಿರುದ್ಧ ರಷ್ಯಾ ಕಂಡುಹಿಡಿಯುತ್ತಿರುವ 'ಸ್ಪುಟ್ನಿಕ್ V ಕೊರೊನಾ ಲಸಿಕೆಗೆ ಭಾರತದಲ್ಲಿ ಡಾ. ರೆಡ್ಡಿ ಲ್ಯಾಬೊರೇಟರೀಸ್​ ಲಿ. ಸಂಸ್ಥೆ ಅಂತಿಮ ಟ್ರಯಲ್​ ಕೈಗೊಳ್ಳಲಿದೆ ಎಂಬ ಮಾಹಿತಿ ಔಷಧ ಕಂಪನಿಗಳ ವಲಯದಿಂದ ಹೊರಬಿದ್ದಿದೆ.

ರಷ್ಯಾವು ಅಕ್ಟೋಬರ್ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೊರೊನಾ ಲಸಿಕೆಯನ್ನು ಸೈಬೇರಿಯಾದ ವೆಕ್ಟರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿದೆ. ಕಳೆದ ವಾರ ಮೊದಲನೇ ಹಂತದ ಮಾನವನ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ.

Recommended Video

ಮೊದಲನೇ ಮ್ಯಾಚ್ ಬಗೆ RCB ಆರಂಭಿಕ ಬ್ಯಾಟ್ಸ್ ಮನ್ Finch ಹೇಳಿದ್ದೇನು | Oneindia Kannda

ವಿಕ್ಟರ್ ಲಸಿಕೆಯ ಪ್ರಯೋಗವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಸಲಾಗಿತ್ತು, ಈ ಲಸಿಕೆಯಿಂದ ಮಾನವನ ದೇಹದಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ವೃದ್ಧಿಯಾಗುತ್ತವೆ ಎಂಬುದು ತಿಳಿದುಬಂದಿದೆ.

English summary
Dr Reddy’s Laboratories Ltd could begin late-stage Indian clinical trials of Russia’s potential coronavirus vaccine in the next few weeks, an executive at the Indian drugmaker said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X