ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾಪಡೆಗಳಿಂದ ಮಾನವ ಹಕ್ಕುಗಳ ಹರಣ, ವಿಶ್ವಸಂಸ್ಥೆ ವರದಿಗೆ ಭಾರತ ಕಿಡಿ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 15: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಮವಾಗಿ ಪಾಕಿಸ್ತಾನ ಸೇನೆ ಮತ್ತು ಭಾರತೀಯ ಸೇನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳು ಸಮಿತಿ ವರದಿ ಬಿಡುಗಡೆ ಮಾಡಿತ್ತು. ಇದರ ಬೆನ್ನಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಹೈಕಮಿಷನರ್ ಈ ಬಗ್ಗೆ ಅಂತರಾಷ್ಟ್ರೀಯ ತನಿಖೆಯಾಗಬೇಕು ಎಂದು ಹೇಳಿದ್ದರು.

ಈ ಹೇಳಿಕೆಗೆ ಭಾರತ ಕೆಂಡಾಮಂಡಲವಾಗಿದೆ. ವಿಶ್ವಸಂಸ್ಥೆ ವರದಿಯನ್ನು, ತಪ್ಪು ಮಾಹಿತಿ ಒಳಗೊಂಡ, ದುರುದ್ದೇಶ ಪೂರಿತ, ಪಕ್ಷಪಾತಿ ವರದಿ ಎಂದು ಭಾರತ ಆರೋಪಿಸಿದೆ.

ಉಗ್ರರನ್ನು ಓಡಿಸಿದ ಸೈನಿಕರಿಗೆ ಸಿಕ್ಕಿತು ವಿಶಿಷ್ಟ ಏಣಿ ಉಗ್ರರನ್ನು ಓಡಿಸಿದ ಸೈನಿಕರಿಗೆ ಸಿಕ್ಕಿತು ವಿಶಿಷ್ಟ ಏಣಿ

ಈ ವರದಿಯಲ್ಲಿ ಪೂರ್ವಾಗ್ರಹ ಪೀಡಿತ ವೈಯಕ್ತಿಕ ಭಾವನೆಗಳು ಕೆಲಸ ಮಾಡಿವೆ. ಇದಕ್ಕೆ ವಿಶ್ವಸಂಸ್ಥೆ ಮಣೆ ಹಾಕುವ ಮೂಲಕ ಅದರ ಘನತೆ ತಗ್ಗಿದೆ ಎಂದು ಭಾರತ ಟೀಕಿಸಿದೆ. ಈ ವರದಿಯ ಮೂಲಕ ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗಿದೆ ಎಂದು ಭಾರತ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ.

India trash UN report on human rights in Kashmir

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನೂ ವಿಶ್ವಸಂಸ್ಥೆ ಮರೆತಿದೆ ಎಂದು ಭಾರತ ಕಿಡಿಕಾರಿದೆ.+

ಜಮ್ಮು ಮತ್ತು ಕಾಶ್ಮೀರ: ಸೇನಾ ಶಿಬಿರದ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ ಜಮ್ಮು ಮತ್ತು ಕಾಶ್ಮೀರ: ಸೇನಾ ಶಿಬಿರದ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ

ಕಾಶ್ಮೀರದಲ್ಲಿ ತೀವ್ರಗಾಮಿ ಚಟುವಟಿಕೆ ನಡೆಸುವವರನ್ನು ವರದಿಯಲ್ಲಿ ಹೋರಾಟಗಾರರು ಎಂದು ಕರೆಯಲಾಗಿದೆ. ಜೊತೆಗೆ ಶಾಂತಿಯುತ ಪ್ರತಿಭಟನೆ ಮಾಡುವವರನ್ನು ಹಾಗೂ ಪ್ರಶ್ನಿಸುವವರನ್ನು ಮಟ್ಟಹಾಕಲು ಭಾರತ ಸರಕಾರ ಯತ್ನಿಸುತ್ತಿದ್ದು ಇದು ಕೊನೆಯಾಗಬೇಕು ಎಂದು ಹೇಳಲಾಗಿದೆ.

English summary
The Indian Government trashed a UN report on alleged human rights violations in Kashmir as a "prejudiced attempt" by vested interests to hurt India's sovereignty and national interests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X