• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಅಕ್ಟೋಬರ್‌ನಲ್ಲಿ ನೋವಾವ್ಯಾಕ್ಸ್ ಲಸಿಕೆ ಪ್ರಯೋಗ

|

ನವದೆಹಲಿ, ಸೆಪ್ಟೆಂಬರ್ 19: ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ನೋವಾವ್ಯಾಕ್ಸ್ ಲಸಿಕೆಯ ಪ್ರಯೋಗ ನಡೆಸಲಾಗುತ್ತಿದೆ.

ಈ ಕುರಿತು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಅಮೆರಿಕ ನೋವಾವ್ಯಾಕ್ಸ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪುಣೆಯ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಲಿದೆ.ಅಕ್ಟೋಬರ್‌ ಎರಡನೇ ವಾರದಿಂದ ಮಾನವರ ಮೇಲೆ ಪ್ರಯೋಗ ಶುರುವಾಗಲಿದೆ.

ಸಂಸದರಲ್ಲಿ ಕೊರೊನಾ ವೈರಸ್: ಸಂಸತ್ ಮುಂಗಾರು ಅಧಿವೇಶನ ಮೊಟಕು?

ಅಕ್ಟೋಬರ್‌ನಿಂದ ಭಾರತದಲ್ಲಿ ನೋವಾವ್ಯಾಕ್ಸ್ ಲಸಿಕೆ ಟ್ರಯಲ್ ಆರಂಭವಾಗಲಿದೆ ಎಂದು ಲೋಕಸಭೆಗೆ ಸರ್ಕಾರ ತಿಳಿಸಿದೆ.ಸೆಪ್ಟೆಂಬರ್ 18ರವರಗೆ 182 ಲಸಿಕೆ ಅಭ್ಯರ್ಥಿಗಳು ಪ್ರಿ ಕ್ಲಿನಿಕಲ್ ಅಥವಾ ಕ್ಲಿನಿಕಲ್ ಟ್ರಯಲ್ ನಲ್ಲಿ ತೊಡಗಿವೆ.

ಯಾರ್ಯಾರ ಸಹಕಾರ ಇರಲಿದೆ?

ಯಾರ್ಯಾರ ಸಹಕಾರ ಇರಲಿದೆ?

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಯೋಗಾಲಯ ನಡೆಯಲಿರುವ ಕ್ಲಿನಿಕಲ್ ಟ್ರಯಲ್‌ನಲ್ಲಿ ಪುಣೆಯ ರಾಷ್ಟ್ರೀಯ ಏಡ್ಸ್ ಸಂಶೋಧನಾ ಸಂಸ್ಥೆ ಮತ್ತು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೈಜೋಡಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಮಾನವನ ಮೇಲೆ ಪ್ರಯೋಗ

ದಕ್ಷಿಣ ಆಫ್ರಿಕಾದಲ್ಲಿ ಮಾನವನ ಮೇಲೆ ಪ್ರಯೋಗ

ದಕ್ಷಿಣ ಆಫ್ರಿಕಾದಲ್ಲಿ ಕಳೆದ ತಿಂಗಳಿನಿಂದ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಚಿವ ಅಶ್ವಿನಿ ಕುಮಾರ್ ರಾಜ್ಯಸಭೆಗೆ ತಿಳಿಸಿದ್ದಾರೆ. ಕೊವಿಡ್ 19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ಸಾರ್ಸ್ ಕೋವ್ 2 ವೈರಾಣುವಿನ ಜೀವಜಂತು ಬಳಸಿ ನೋವಾವ್ಯಾಕ್ಸ್ ಎನ್‌ವಿಎಕ್ಸ್ ಕೋವ್ 2373 ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಪ್ರಾಣಿಗಳ ಮೇಲೆ ಮಾಡಲಾದ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ.

ಭಾರತದಲ್ಲಿ ಎರಡು ಲಸಿಕೆಗಳು ಕ್ಲಿನಿಕಲ್ ಹಂತದಲ್ಲಿವೆ

ಭಾರತದಲ್ಲಿ ಎರಡು ಲಸಿಕೆಗಳು ಕ್ಲಿನಿಕಲ್ ಹಂತದಲ್ಲಿವೆ

ಭಾರತದಲ್ಲಿ ಭಾರತ್ ಬಯೋಟೆಕ್ ಮತ್ತು ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಎರಡು ಲಸಿಕೆಗಳು ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಈಗಾಗಲೇ ಉತ್ತಮ ಫಲಿತಾಂಶ ನೀಡಿವೆ. ಮಾನವರ ಮೇಲೆ ಪ್ರಯೋಗಿಸಲು ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಈ ಎರಡೂ ಲಸಿಕೆಗಳ ಎರಡನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ.

  ಶಾಲಾ ಕಾಲೇಜು ಶುರುವಾಗೋದು ಯಾವಾಗ ಗೊತ್ತಾ ? | Oneindia Kannada
  ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ ಪುನರಾರಂಭ

  ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ ಪುನರಾರಂಭ

  ಭಾರತದಲ್ಲಿ ಒಂದು ವಾರದಿಂದ ಸ್ಥಗಿತಗೊಂಡಿದ್ದ ಆಕ್ಸ್‌ಫರ್ಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಕೂಡ ಶೀಘ್ರ ಪುನರಾರಂಭವಾಗಲಿದೆ. ಈಗಾಗಲೇ ನೂರಾರು ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಎರಡನೇ ಹಂತದ ಪ್ರಯೋಗಕ್ಕೆ ಒಪ್ಪಿಗೆ ದೊರೆತ ಕೂಡಲೇ 14 ನಗರಗಳ 1500 ಜನರ ಮೇಲೆ ಸೆರಂ ಇನ್‌ಸ್ಟಿಟ್ಯೂಟ್ ಲಸಿಕೆಯ ಪ್ರಯೋಗ ಕೆಲಸ ಆರಂಭಿಸಲಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಂ ಭಾರ್ಗವ್ ತಿಳಿಸಿದ್ದಾರೆ.

  English summary
  In what comes as a recent development, the India trials of a vaccine candidate being developed by American company Novavax is likely to begin in late October, the government said in Lok Sabha on Friday.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X