ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಯುದ್ಧ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಭಾರತವೇ ನಂ. 1 ಗ್ರಾಹಕ!

ಶಸ್ತ್ರಾಸ್ತ್ರ ಖರೀದಿಯಲ್ಲಿ ಯುದ್ಧ ಪೀಡಿತ ಸೌದಿ ರಾಷ್ಟ್ರಗಳನ್ನೇ ಹಿಂದಿಕ್ಕಿದ ಭಾರತ; 2012ರಿಂದ 2016ರವರೆಗೆ ಒಟ್ಟು ಜಾಗತಿಕ ಮಾರುಕಟ್ಟೆಯ ಶೇ. 13ರಷ್ಟು ಸಾಮಗ್ರಿ ಖರೀದಿಸಿರುವ ಭಾರತ ಸರ್ಕಾರ.

|
Google Oneindia Kannada News

ನವದೆಹಲಿ, ಫೆಬ್ರವರಿ 21: ಜಾಗತಿಕ ಯುದ್ಧ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ 1990ರಿಂದಲೂ ಅಗ್ರ ಗ್ರಾಹಕನಾಗಿರುವ ಭಾರತ, ಈಗಲೂ ಅದೇ ಸ್ಥಾನದಲ್ಲಿ ಮುಂದುವರಿದಿದೆ ಎಂದು ಸ್ಟಾಕ್ ಹೋಂ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್ಐಪಿಎಸ್ಐ) ಹೇಳಿದೆ.

ಸಂಸ್ಥೆಯು ನಡೆಸಿರುವ ಸಮೀಕ್ಷೆಯ ಪ್ರಕಾರ, 2012ರಿಂದ 2016ರವರೆಗೆ ವಿಶ್ವದ ನಾನಾ ದೇಶಗಳಿಗೆ ಮಾರಾಟವಾದ ಶಸ್ತ್ರಾಸ್ತ್ರಗಳ ಪೈಕಿ ಶೇ. 13ರಷ್ಟನ್ನು ಭಾರತವೇ ಆಮದು ಮಾಡಿಕೊಂಡಿದೆ. ಹಾಗಾಗಿ, ಅತಿ ಹೆಚ್ಚು ಯುದ್ಧ ಸಾಮಗ್ರಿಗಳನ್ನು ಕೊಂಡ ದೇಶಗಳ ಪಟ್ಟಿಯಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ.[ಸತ್ಯ ಹೇಳಿದ ಸೈನಿಕನ ತೇಜೋವಧೆಗೆ ಸಿದ್ಧವಾದ ಬಿಎಸ್ಎಫ್]

India Tops Highest Weapons Importers List

ಭಾರತದ ನಂತರದ ಸ್ಥಾನಗಳಲ್ಲಿ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಚೀನಾ, ಅಲ್ಜೇರಿಯಾ ದೇಶಗಳಿವೆ. 2007ರಿಂದ 2011ರ ನಡುವಿನ ಅಂತರದಲ್ಲಿ ಜಾಗತಿಕ ಮಟ್ಟದಲ್ಲಿ ನಡೆದ ಯುದ್ಧ ಸಾಮಗ್ರಿಗಳ ಮಾರಾಟದಲ್ಲಿ ಶೇ. 9.7ರಷ್ಟನ್ನು ಭಾರತ ಆಮದು ಮಾಡಿಕೊಂಡಿತ್ತು.[ದಶಕಗಳ ನಿರೀಕ್ಷೆ ನಂತರ ಸೈನಿಕರಿಗೆ ಸಿಗಲಿದೆ ಬುಲೆಟ್ ಪ್ರೂಫ್ ಹೆಲ್ಮೆಟ್]

ಆದರೆ, ವಾಸ್ತವದಲ್ಲಿ ಅರೇಬಿಯಾ ಖಂಡದ ಬಹುತೇಕ ರಾಷ್ಟ್ರಗಳು ತಮ್ಮ ನೆರೆಹೊರೆ ದೇಶಗಳೊಂದಿಗೆ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಯುಮೆನ್, ಸಿರಿಯಾ, ಇರಾನ್, ಇರಾಕ್... ಹೀಗೆ ಅಲ್ಲೆಲ್ಲೂ ಯುದ್ಧ ವಾತಾವರಣವಿದೆ. ಆದರೂ, ಅವನ್ನು ಮೀರಿಸಿ ಭಾರತವು, ನೆರೆಯಲ್ಲಿರುವ ಪಾಕಿಸ್ತಾನದ ಅಟ್ಟಹಾಸವನ್ನು ನಿಯಂತ್ರಿಸುವ ಕಾರಣವನ್ನಿಟ್ಟುಕೊಂಡು ಅತೀವ ಮಟ್ಟದಲ್ಲಿ ಯುದ್ಧ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ ಎಂದು ಎಸ್ಐಪಿಎಸ್ಐ ಕಳವಳ ವ್ಯಕ್ತಪಡಿಸಿದೆ.

English summary
India has continued to stay top in list of world's largest defense importers as it has accounted for 13 percent of global arms imports between 2012 and 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X