ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ದೇಶದ ಅತ್ಯುತ್ತಮ ಸಿಎಂ ಯಾರು? ಯಡಿಯೂರಪ್ಪಗೆ ಎಷ್ಟನೇ ಸ್ಥಾನ

|
Google Oneindia Kannada News

ಇಂಡಿಯಾ ಟುಡೇ-ಕಾರ್ವಿ ಇನ್ಸೈಟ್ಸ್ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಭಾಗವಹಿಸಿದವರು, ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳು ಯಾರು ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಸಮೀಕ್ಷೆಯ ಪ್ರಕಾರ, ಟಾಪ್ ಟೆನ್ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಬಿಜೆಪಿಯೇತರ ಸಿಎಂಗಳು ಏಳು ಎನ್ನುವುದು ಗಮನಿಸಬೇಕಾದ ವಿಚಾರ. ಜನವರಿಯಲ್ಲಿ ಇದೇ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮೊದಲ ಸ್ಥಾನ ಪಡೆದಿದ್ದರು.

ಮೂಡ್ ಆಫ್ ದಿ ನೇಶನ್ ಸಮೀಕ್ಷೆ: ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವರು ಇವರೇಮೂಡ್ ಆಫ್ ದಿ ನೇಶನ್ ಸಮೀಕ್ಷೆ: ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವರು ಇವರೇ

ದೆಹಲಿ ಮೂಲದ ಸಂಸ್ಥೆಯೊಂದು ಜುಲೈ ಹದಿನೈದರಿಂದ, ಜುಲೈ 27ರ ಅವಧಿಯಲ್ಲಿ ನಡೆಸಿದ ಸಮೀಕ್ಷೆ ಇದಾಗಿದೆ. ಕೋವಿಡ್ ಹಾವಳಿಯಿಂದ, ಮೊದಲೇ ಸಿದ್ದಪಡಿಸಿದ ಪ್ರಶ್ನೆಯನ್ನು ದೂರವಾಣಿ ಮೂಲಕ ಕೇಳಿ, ಈ ಸಮೀಕ್ಷೆಗೆ ಅಂತಿಮ ರೂಪುರೇಷೆ ನೀಡಲಾಗಿದೆ.

ಮೂಡ್ ಆಫ್ ದಿ ನೇಶನ್: ಕಾಂಗ್ರೆಸ್‌ ಪುನಶ್ಚೇತನಗೊಳಿಸಲು ಇವರೇ ಸೂಕ್ತ!ಮೂಡ್ ಆಫ್ ದಿ ನೇಶನ್: ಕಾಂಗ್ರೆಸ್‌ ಪುನಶ್ಚೇತನಗೊಳಿಸಲು ಇವರೇ ಸೂಕ್ತ!

ಒಟ್ಟು 12,021ರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನು ಪಡೆಯಲಾಗಿದೆ. ಇದರಲ್ಲಿ ಶೇ. 67 ಗ್ರಾಮೀಣ ಭಾಗದಿಂದ ಮತ್ತು ಶೇ. 33 ನಗರ ಪ್ರದೇಶದ ಜನರನ್ನು ಸಂದರ್ಶಿಸಲಾಗಿದೆ. ಸತತ ಮೂರನೇ ಬಾರಿಗೂ, ಮೊದಲ ಸ್ಥಾನ ಉಳಿಸಿಕೊಂಡ ಎನ್ನುವ ಹೆಗ್ಗಳಿಕೆ:

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಒಟ್ಟು 97 ಲೋಕಸಭಾ ಕ್ಷೇತ್ರದ 194 ಅಸೆಂಬ್ಲಿ ವ್ಯಾಪ್ತಿಯ ಜನರನ್ನು ಸಂಪರ್ಕಿಸಿ ಈ ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ. ಈ ಹಿಂದೆ (ಅಂದರೆ ಮೂರು ವರ್ಷದ ಹಿಂದೆ), ಅತ್ಯುತ್ತಮ ಸಿಎಂ ಎನ್ನುವ ಹೆಸರನ್ನು ಪಡೆದಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸತತವಾಗಿ ಆ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಯೋಗಿ ಆದಿತ್ಯನಾಥ್, ಸತತವಾಗಿ ಮೂರನೇ ಬಾರಿಯೂ ಟಾಪ್ ಒನ್

ಯೋಗಿ ಆದಿತ್ಯನಾಥ್, ಸತತವಾಗಿ ಮೂರನೇ ಬಾರಿಯೂ ಟಾಪ್ ಒನ್

ಹತ್ತೊಂಬತ್ತು ರಾಜ್ಯಗಳ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯ ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಈ ಮೂಡ್ ಆಫ್ ದಿ ನೇಶನ್ ಸಿದ್ದಪಡಿಸಲಾಗಿದೆ. ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸತತವಾಗಿ ಮೂರನೇ ಬಾರಿಯೂ ಟಾಪ್ ಒನ್ ನಲ್ಲಿದ್ದಾರೆ.

ಸಮೀಕ್ಷೆಯ ಪ್ರಕಾರ ಟಾಪ್ ಟೆನ್ ಮುಖ್ಯಮಂತ್ರಿಗಳು (ಮೊದಲ ಐದು), ಕೇಜ್ರಿಗೆ ಎರಡನೇ ಸ್ಥಾನ

ಸಮೀಕ್ಷೆಯ ಪ್ರಕಾರ ಟಾಪ್ ಟೆನ್ ಮುಖ್ಯಮಂತ್ರಿಗಳು (ಮೊದಲ ಐದು), ಕೇಜ್ರಿಗೆ ಎರಡನೇ ಸ್ಥಾನ

1. ಯೋಗಿ ಆದಿತ್ಯನಾಥ್ (ಉತ್ತರ ಪ್ರದೇಶ) - ಶೇ. 24
2. ಅರವಿಂದ್ ಕೇಜ್ರಿವಾಲ್ (ದೆಹಲಿ) - ಶೇ. 15
3. ವೈ.ಎಸ್.ಜಗನ್ಮೋಹನ್ ರೆಡ್ಡಿ (ಆಂಧ್ರ ಪ್ರದೇಶ) - ಶೇ. 11
4. ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ) - ಶೇ. 9
5. ನಿತೀಶ್ ಕುಮಾರ್ (ಬಿಹಾರ) - ಶೇ. 7

ಸಮೀಕ್ಷೆಯ ಪ್ರಕಾರ ಟಾಪ್ ಟೆನ್ ಮುಖ್ಯಮಂತ್ರಿಗಳು (ಆರರಿಂದ ಹತ್ತು) ಬಿಎಸ್ವೈಗೆ ಎಷ್ಟನೇ ಸ್ಥಾನ

ಸಮೀಕ್ಷೆಯ ಪ್ರಕಾರ ಟಾಪ್ ಟೆನ್ ಮುಖ್ಯಮಂತ್ರಿಗಳು (ಆರರಿಂದ ಹತ್ತು) ಬಿಎಸ್ವೈಗೆ ಎಷ್ಟನೇ ಸ್ಥಾನ

6. ಉದ್ಧವ್ ಠಾಕ್ರೆ (ಮಹಾರಾಷ್ಟ್ರ) - ಶೇ. 7
7. ನವೀನ್ ಪಟ್ನಾಯಕ್ (ಒರಿಸ್ಸಾ) - ಶೇ. 6
8. ಕೆ.ಚಂದ್ರಶೇಖರ ರಾವ್ (ತೆಲಂಗಾಣ) - ಶೇ. 3
9. ಅಶೋಕ್ ಗೆಹ್ಲೋಟ್ (ರಾಜಸ್ಥಾನ೦ -ಶೇ. 2
10. ಬಿ.ಎಸ್.ಯಡಿಯೂರಪ್ಪ (ಕರ್ನಾಟಕ) -ಶೇ. 2

English summary
India Today -Karvy Insights Mood of the Nation (MOTN) survey. Who Is The Best Chief Minister Of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X