• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿಎಸ್‌ಇ ಸಮೀಕ್ಷೆ: ಪುಲ್ವಾಮಾ ಸೇಡಿಗೆ ಯುದ್ಧವೇ ಬೇಕು ಎನ್ನುತ್ತಿದ್ದಾರೆ 36%ರಷ್ಟು ಮಂದಿ

|
   Pulwama : ಇಂಡಿಯಾ ಟುಡೇ ಮೈ ಆಕ್ಸಿಸ್ ಪಿಎಸ್ಇ ಸಮೀಕ್ಷೆ | ಯುದ್ಧ ಬೇಕಾ ಬೇಡ್ವಾ? | Oneindia Kannada

   ನವದೆಹಲಿ, ಫೆಬ್ರವರಿ 23: ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿ ಭಾರತೀಯರಲ್ಲಿ ಯುದ್ಧದ ಉನ್ಮಾದ ಮೂಡಿಸಿದೆ. ಸೈನಿಕರ ಸಾವಿಗೆ ಪ್ರತೀಕಾರಕ್ಕಾಗಿ ಪಾಕಿಸ್ತಾನದ ಮೇಲೆ ಯುದ್ಧ ನಡೆಯಲೇಬೇಕು ಎಂದು ಭಾವೋದ್ರೇಕದ ಆಗ್ರಹಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

   ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ದೇಶಕ್ಕೆ ತಕ್ಕಶಾಸ್ತಿ ನೀಡಬೇಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಯುದ್ಧದಿಂದ ಆಗುವ ವ್ಯತಿರಿಕ್ತ ಪರಿಣಾಮಗಳನ್ನು ಮುಂದಿಟ್ಟು, ಯುದ್ಧದಿಂದ ಭಯೋತ್ಪಾದನೆ ನಾಶ ಸಾಧ್ಯವಿಲ್ಲ ಎಂದು ಅನೇಕರು ಯುದ್ಧೋನ್ಮಾದವನ್ನು ವಿರೋಧಿಸುತ್ತಿದ್ದಾರೆ.

   ಭಾರತದೊಂದಿಗೆ ಯುದ್ಧಕ್ಕೆ ಸಿದ್ಧ ಎಂಬ ಸೂಚನೆ ನೀಡಿದ ಪಾಕಿಸ್ತಾನ

   ಹಾಗಾದರೆ, ಯುದ್ಧ ನಡೆಬೇಕೇ? ನಡೆದರೆ ಭಾರತಕ್ಕೆ ಬಳಿಕ ನೆಮ್ಮದಿ ದೊರಕುತ್ತದೆಯೇ? ಉಗ್ರರನ್ನು ಮಟ್ಟಹಾಕಲು ನಮ್ಮಲ್ಲಿ ಸಮರ್ಥ ನಾಯಕರಿದ್ದಾರೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಯು ಇಂಡಿಯಾ ಟುಡೇ ವಾಹಿನಿಯ ಪೊಲಿಟಿಕಲ್ ಸ್ಟಾಕ್ ಎಕ್ಸ್‌ಚೇಂಜ್‌ಗಾಗಿ (ಪಿಎಸ್‌ಇ) ಸಮೀಕ್ಷೆಯೊಂದನ್ನು ನಡೆಸಿತ್ತು. ದೇಶದ 29 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯ ಫಲಿತಾಂಶ ಹೀಗಿದೆ.

   ದೂರವಾಣಿ ಮೂಲಕ ಸಮೀಕ್ಷೆ

   ದೂರವಾಣಿ ಮೂಲಕ ಸಮೀಕ್ಷೆ

   ಈ ಸಮೀಕ್ಷೆಯನ್ನು ಫೆಬ್ರವರಿ 20-22ರ ಅವಧಿಯಲ್ಲಿ ಮೂರು ದಿನ ನಡೆಸಲಾಗಿದೆ. ದೇಶದ ಎಲ್ಲ ಭಾಗಗಳ 12,815 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ದೂರವಾಣಿ ಮೂಲಕ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಶೇ 36ರಷ್ಟು ಮಂದಿ ಭಯೋತ್ಪಾದನೆಯನ್ನು ಎದುರಿಸಲು ಪಾಕಿಸ್ತಾನದ ವಿರುದ್ಧ ಯುದ್ಧವೇ ಮದ್ದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪಾಕ್‌ಅನ್ನು ಎದುರಿಸಲು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರೇ ಹೆಚ್ಚು ಸಮರ್ಥರು ಎಂದು ಅಭಿಪ್ರಾಯಪಟ್ಟಿದ್ದಾರೆ.

   ಪುಲ್ವಾಮಾ ದಾಳಿ: ಜಾಗತಿಕ ಮಟ್ಟದಲ್ಲಿ ಮರ್ಯಾದೆ ಕಳೆದುಕೊಂಡ ಪಾಕಿಸ್ತಾನ

   ಉಗ್ರವಾದ ಹತ್ತಿಕ್ಕಲು ಸೂಕ್ತ ನಾಯಕ ಯಾರು?

   ಉಗ್ರವಾದ ಹತ್ತಿಕ್ಕಲು ಸೂಕ್ತ ನಾಯಕ ಯಾರು?

   ನರೇಂದ್ರ ಮೋದಿ- 49%

   ರಾಹುಲ್ ಗಾಂಧಿ- 15%

   ಮನಮೋಹನ್ ಸಿಂಗ್- 3%

   ಯೋಗಿ ಆದಿತ್ಯನಾಥ್- 1%

   ಪ್ರಿಯಾಂಕಾ ಗಾಂಧಿ- 1%

   ಮಮತಾ ಬ್ಯಾನರ್ಜಿ- 1%

   ಮಾಯಾವತಿ- 1%

   ಅಖಿಲೇಶ್ ಯಾದವ್- 1%

   ಬಿಜೆಪಿ- 3%

   ಕಾಂಗ್ರೆಸ್- 3%

   ತೃತೀಯ ರಂಗ- 1%

   ಗೊತ್ತಿಲ್ಲ- 21%

   ಪುಲ್ವಾಮಾ ದಾಳಿ ಪರಿಣಾಮ: ಪಾಕಿಸ್ತಾನದ ಮೇಲೆ 'ಜಲ ಬಾಂಬ್'

   ಕಾಶ್ಮೀರ ನೀತಿಯಲ್ಲಿ ಯಾರು ಸರಿ?

   ಕಾಶ್ಮೀರ ನೀತಿಯಲ್ಲಿ ಯಾರು ಸರಿ?

   ಪಾಕಿಸ್ತಾನ ಮತ್ತು ಕಾಶ್ಮೀರದ ಕುರಿತಂತೆ ನರೇಂದ್ರ ಮೋದಿ ಸರ್ಕಾರ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಶೇ 47ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುಪಿಎ ಸರ್ಕಾರದ ನಿರ್ಧಾರಗಳೇ ಉತ್ತಮವಾಗಿತ್ತು ಎಂದು ಶೇ 22ರಷ್ಟು ಮಂದಿ ಹೇಳಿದ್ದರೆ, ಶೇ 12ರಷ್ಟು ಜನರು ವಾಜಪೇಯಿ ಆಡಳಿತಕ್ಕೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.

   ಸಮಯ ಬಂದಿದೆ, ಭಯೋತ್ಪಾದನೆ ಹತ್ತಿಕ್ಕಲು ವಿಶ್ವ ಒಂದಾಗಲಿ: ಮೋದಿ ಘರ್ಜನೆ

   ಪುಲ್ವಾಮಾ ದಾಳಿಗೆ ಭಾರತದ ಪ್ರತಿಕ್ರಿಯೆ ಹೇಗಿರಬೇಕು?

   ಪುಲ್ವಾಮಾ ದಾಳಿಗೆ ಭಾರತದ ಪ್ರತಿಕ್ರಿಯೆ ಹೇಗಿರಬೇಕು?

   ಪಾಕಿಸ್ತಾನದೊಳಗಿನ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್- 23%

   ಲ್ಯಾಡೆನ್ ವಿರುದ್ಧ ಅಮೆರಿಕ ಮಾಡಿದ್ದಂತೆ ಮಸೂದ್ ಅಜರ್ ವಿರುದ್ಧ ಕಾರ್ಯಾಚರಣೆ- 18%

   ಪಾಕಿಸ್ತಾನದ ವಿರುದ್ಧ ಯುದ್ಧ- 36%

   ಪಾಕಿಸ್ತಾನವನ್ನು ರಾಜತಾಂತ್ರಿಕ ಮತ್ತು ಆರ್ಥಿಕವಾಗಿ ಒಂಟಿಯಾಗಿಸುವುದು- 15%

   ಗೊತ್ತಿಲ್ಲ- 8%

   ಪುಲ್ವಾಮಾ ದಾಳಿಯಲ್ಲಿ ಯಾರು ಹೊಣೆಗಾರರು?

   ಪುಲ್ವಾಮಾ ದಾಳಿಯಲ್ಲಿ ಯಾರು ಹೊಣೆಗಾರರು?

   ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ- 30%

   ಜೈಶ್ ಎ ಮೊಹಮ್ಮದ್- 13%

   ಪ್ರಧಾನಿ ಇಮ್ರಾನ್ ಖಾನ್- 19%

   ಇಡೀ ಪಾಕಿಸ್ತಾನ- 25

   ದಾಳಿಗೆ ಕಾರಣ ಯಾವುದು?

   ದಾಳಿಗೆ ಕಾರಣ ಯಾವುದು?

   ಗುಪ್ತಚರ ವೈಫಲ್ಯ- 13%

   ಭದ್ರತಾ ಸಂಸ್ಥೆಗಳ ನಡುವೆ ಹೊಂದಾಣಿಕೆ ಕೊರತೆ- 7%

   ಸರ್ಕಾರದ ದುರ್ಬಲ ಭಯೋತ್ಪಾದನಾ ನಿಗ್ರಹ ನೀತಿ- 17%

   ಮೇಲಿನ ಮೂರೂ ಅಂಶಗಳು- 6%

   ಗೊತ್ತಿಲ್ಲ- 57%

   ಸರ್ಜಿಕಲ್ ಸ್ಟ್ರೈಕ್ ಪರಿಣಾಮಕಾರಿಯೇ?

   ಸರ್ಜಿಕಲ್ ಸ್ಟ್ರೈಕ್ ಪರಿಣಾಮಕಾರಿಯೇ?

   ಪಾಕ್ ಪ್ರಾಯೋಜಿತ ಉಗ್ರವಾದಕ್ಕೆ ತಕ್ಕಶಾಸ್ತಿ ಮಾಡಿದೆ- 58%

   ಪಾಕ್ ಪ್ರಾಯೋಜಿತ ಉಗ್ರವಾದ ತಡೆಯುವಲ್ಲಿ ವಿಫಲವಾಗಿದೆ- 25%

   ಗೊತ್ತಿಲ್ಲ/ಹೇಳಲಾಗದು- 17%

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   India Today PSE poll by Axis My India: 36% of people said the war will be the best answer to Pakistan's sponsered terrorism. 49% says Narendra Modi is the suitable leader to tackle terrorism.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more