ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಚೀನಾ ಮತ್ತು ಪಾಕಿಸ್ತಾನಿ ಪಡೆಗಳ ಜತೆ ಭಾರತದ ಸಮರಾಭ್ಯಾಸ

|
Google Oneindia Kannada News

ನವದೆಹಲಿ, ಆಗಸ್ಟ್ 26: ಭಾರತೀಯ ಸೇನೆಯ ಯೋಧರು ರಷ್ಯಾದಲ್ಲಿ ನಡೆಯಲಿರುವ ಬಹು ರಾಷ್ಟ್ರೀಯ ಜಂಟಿ ಸಮರಾಭ್ಯಾಸದಲ್ಲಿ ಚೀನಾ ಮತ್ತು ಪಾಕಿಸ್ತಾನದ ಸೇನಾ ಪಡೆಗಳ ಜತೆಗೆ ಯುದ್ಧಾಭ್ಯಾಸ ನಡೆಸಲಿದ್ದಾರೆ.

ಚೀನಾ ಮತ್ತು ಪಾಕಿಸ್ತಾನಗಳ ನಡುವೆ ಗಡಿ ವಿವಾದ ಸಂಘರ್ಷದ ನಡುವೆಯೇ ಭಾರತದ ಪಡೆ ಮುಂದಿನ ತಿಂಗಳು ರಷ್ಯಾದಲ್ಲಿ ಆಯೋಜಿಸಲಾಗಿರುವ ಈ ಚಟುವಟಿಕೆಯಲ್ಲಿ ತೊಡಗಲಿದೆ. ಭಾರತದ ರಕ್ಷಣಾ ಪಡೆಯ ಮೂರೂ ವಿಭಾಗಗಳ ಸುಮಾರು 200 ಅಧಿಕಾರಿಗಳು ಮತ್ತು ಯೋಧರು 'ಕಾಕಸಸ್ 2020'ಯಲ್ಲಿ ಭಾಗವಹಿಸಲಿದ್ದಾರೆ. ಸೆ. 15ರಿಂದ 26ರವರೆಗೆ ದಕ್ಷಿಣ ರಷ್ಯಾದ ಅಸ್ಟ್ರಾಖಾನ್ ಪ್ರದೇಶದಲ್ಲಿ ಈ ಸ್ಟ್ರಾಟೆಜಿಕ್ ಕಮಾಂಡ್ ಪೋಸ್ಟ್ ಎಕ್ಸರ್‌ಸೈಸ್ ನಡೆಯಲಿದೆ.

ಲಡಾಖ್ ನಲ್ಲಿ ಭಾರತೀಯ ಸೇನೆಗಾಗಿ ಗೌಪ್ಯ ರಸ್ತೆ ಮಾರ್ಗ!ಲಡಾಖ್ ನಲ್ಲಿ ಭಾರತೀಯ ಸೇನೆಗಾಗಿ ಗೌಪ್ಯ ರಸ್ತೆ ಮಾರ್ಗ!

ಚೀನಾ ಹಾಗೂ ಪಾಕಿಸ್ತಾನ ಪಡೆಗಳ ಜತೆಗೆ ಭಾರತದ ಪಡೆಗಳ ಕಾದಾಟದ ಉದ್ವಿಗ್ನತೆ ಇನ್ನೂ ಶಮನಗೊಂಡಿಲ್ಲ. ಈ ಮಧ್ಯೆ ಜಂಟಿ ಸಮಾರಾಭ್ಯಾಸ ಮಹತ್ವ ಪಡೆದಿದೆ. ಆದರೆ ಭಾರತೀಯ ಪಡೆಗಳು ಚೀನಾ ಮತ್ತು ಪಾಕಿಸ್ತಾನ ಸೈನಿಕರ ಜತೆ ಮಾತ್ರವೇ ಸಮರಾಭ್ಯಾಸ ನಡೆಸುತ್ತಿಲ್ಲ. ರಷ್ಯಾ ಬಹುರಾಷ್ಟ್ರೀಯ ಸಮರಾಭ್ಯಾಸ ಆಯೋಜಿಸಿದ್ದು, ಅದರಲ್ಲಿ ಕನಿಷ್ಠ 18 ದೇಶಗಳು ಪಾಲ್ಗೊಳ್ಳಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

India To Take Part In Combat Drills With China, Pakistan in Russia

ದುರದೃಷ್ಟಕರ:

ಗಾಲ್ವಾನ್ ಕಣಿವೆಯಲ್ಲಿ ಭಾರತದ 20 ಸೈನಿಕರ ಸಾವಿಗೆ ಕಾರಣವಾದ ಸಂಘರ್ಷದ ಎರಡು ತಿಂಗಳ ಬಳಿಕ ಭಾರತದಲ್ಲಿನ ಚೀನಾ ರಾಯಭಾರಿ ಸುನ್ ವೀಡೊಂಗ್, ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ್ದಾರೆ.

ಎಲ್‌ಎಸಿಯಲ್ಲಿನ ಉಭಯ ದೇಶಗಳ ನಡುವಿನ ಕಾದಾಟವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಹಲವು ಸುತ್ತಿನ ಮಾತುಕತೆಗಳನ್ನು ಉಲ್ಲೇಖಿಸಿ ಅವರು ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ಗಡಿಯಲ್ಲಿ ಲಘು ಯುದ್ಧ ವಿಮಾನ ತೇಜಸ್ಭಾರತ ಮತ್ತು ಚೀನಾ ಗಡಿಯಲ್ಲಿ ಲಘು ಯುದ್ಧ ವಿಮಾನ ತೇಜಸ್

ಬೆಳೆಯುತ್ತಿರುವ ಎರಡು ಪ್ರಮುಖ ದೇಶಗಳಾದ ಭಾರತ ಮತ್ತು ಚೀನಾ ಸೈದ್ಧಾಂತಿಕವಾಗಿ ಗೆರೆ ಎಳೆಯುವ ಹಳೆಯ ಮನಸ್ಥಿತಿಯಿಂದ ಹೊರಬರಬೇಕಿವೆ. ಒಬ್ಬರ ಸಂಪಾದನೆ ಇನ್ನೊಬ್ಬರ ನಷ್ಟ ಮತ್ತು ಶೂನ್ಯ ಸಾಧನೆಯ ಹಳೆಯ ಆಟಗಳನ್ನು ನಿಲ್ಲಿಸಬೇಕಿದೆ. ಇಲ್ಲದೇ ಹೋದರೆ ಇದು ಅನಾಹುತಕ್ಕೆ ಕಾರಣವಾಗಿ ತಪ್ಪು ದಾರಿಯಲ್ಲಿ ಸಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

English summary
Russia has organised a multi nation exercise in next month. Indian soldiers will take part in combat drills with China and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X